
ನಿಟ್ಟೆ ಕ್ರಿಕೆಟ್ ಟೂರ್ನಮೆಂಟ್ 2025 ಜನವರಿ 24 ರಿಂದ 26 ವರೆಗೆ ಕಾರ್ಕಳದ ಬಿ.ಸಿ. ಆಳ್ವ ಸ್ಮಾರಕ ಕ್ರೀಡಾಂಗಣದಲ್ಲಿ ನಡೆಯಲಿದೆ. ಬೆಳ್ಳಿಪ್ಪಾಡಿ ಆಳ್ವಾಸ್ ಕ್ರಿಕೆಟ್ ಅಕಾಡೆಮಿ ಬ್ರಹ್ಮಾವರ (BACA) ಮತ್ತು ಕೆಆರ್‌ಎಸ್ ಕ್ರಿಕೆಟ್ ಅಕಾಡೆಮಿ ಕಟಪಾಡಿ ಅವರಿಂದ ನಿಟ್ಟೆ ವಿಶ್ವವಿದ್ಯಾನಿಯಲದ ನೆರವಿನೊಂದಿಗೆ ಆಯೋಜಿಸಲ್ಪಟ್ಟ ಈ ವಾರ್ಷಿಕ ಕಾರ್ಯಕ್ರಮದಲ್ಲಿ ಮೂರು ದಿನಗಳ ಕಾಲ ರೋಮಾಂಚಕ ಕ್ರಿಕೆಟ್ ಸ್ಪರ್ಧೆ ನಡೆಯಲಿದೆ.
ಸ್ಥಳ ಮತ್ತು ಆಯೋಜಕರು
ಈ ಟೂರ್ನಿ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಬಿ.ಸಿ. ಆಳ್ವ ಸ್ಮಾರಕ ಕ್ರೀಡಾಂಗಣದಲ್ಲಿ ನಡೆಯಲಿದೆ. ತಮಿಳುನಾಡು, ಬೆಂಗಳೂರು, ಮಹಾರಾಷ್ಟ್ರ ಮತ್ತು ಉಡುಪಿಯ ತಂಡಗಳು ನಿಟ್ಟೆ ಕ್ರಿಕೆಟ್ ಟ್ರೋಫಿಗಾಗಿ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿವೆ.
ಕೋಚ್‌ಗಳಾದ ವಿಜಯ ಆಳ್ವ (BACA) ಮತ್ತು ಉದಯ್ ಕುಮಾರ್ (ಕೆಆರ್‌ಎಸ್ ಕ್ರಿಕೆಟ್ ಅಕಾಡೆಮಿ) ಅವರು ಕಳೆದ ಮೂರು ವರ್ಷಗಳಿಂದ ಈ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸುತ್ತಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ಪ್ರಮುಖ ಅತಿಥಿಗಳು :
ಪ್ರೊ. ಎ. ಯೋಗೀಶ್ ಹೆಗ್ಡೆ, ನಿಟ್ಟೆ ವಿಶ್ವವಿದ್ಯಾನಿಲಯದ ಕ್ಯಾಂಪಸ್ ನಿರ್ವಹಣೆ ಮತ್ತು ಅಭಿವೃದ್ಧಿಯ ನಿರ್ದೇಶಕರು,
ಡಾ. ನಿರಂಜನ್ ಎನ್. ಚಿಪಳೂಣ್ಕರ್, ನಿಟ್ಟೆ ಎನ್‌ಎಮ್‌ಎಎಮ್‌ಐಟಿ ಪ್ರಾಂಶುಪಾಲರು,
ಅಶೋಕ್ ಅಡ್ಯಂತಾಯ ಉಡುಪಿ ಅಥ್ಲೆಟಿಕ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷರು
ಉಡುಪಿ ಅಂಬಾಗಿಲಿನಲ್ಲಿರುವ ಚಾಲುಕ್ಯ ಹೊಟೇಲಿನ ಮಾಲಕರಾದ ದಿನೇಶ್ ಶೆಟ್ಟಿ
ಈ ವರ್ಷದ ಟೂರ್ನಿಯಲ್ಲಿ ಪಾಲ್ಗೊಳ್ಳುವ ಪ್ರಮುಖ ತಂಡಗಳು:
ತಮಿಳುನಾಡಿನ ಚೋಳಾ ಟೈಗರ್ಸ್
ಮಹಾರಾಜಾಸ್ ಆಫ್ ಬೆಂಗಳೂರು
ಬಿಎಸಿಎ ಮತ್ತು ಕೆಆರ್‌ಎಸ್ (ಉಡುಪಿಯಿಂದ)
ಮುಂಬಯಿಯ ಸೂಪರ್ ಸ್ಟಾರ್