
ಧರ್ಮಸ್ಥಳ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದ ಎಸ್‌ಐಟಿ ತನಿಖೆಯು ರೋಚಕ ತಿರುವು ಪಡೆದಿದೆ. ನೂರಾರು ಹೆಣಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಈ ಪ್ರಕರಣದಲ್ಲಿ, ನಿರೀಕ್ಷೆಯಂತೆ 13ನೇ ಪಾಯಿಂಟ್ ಉತ್ಖನನ ಮಾಡದೇ, ಎಸ್‌ಐಟಿ ತಂಡವು ಹೊಸ ಸ್ಥಳಕ್ಕೆ ತೆರಳಿದೆ.
ಬುಧವಾರ ಮಧ್ಯಾಹ್ನ ಸ್ಥಳಕ್ಕೆ ಆಗಮಿಸಿದ ಎಸ್ಐಟಿ ತಂಡ ಮತ್ತು ದೂರುದಾರರು, ಈವರೆಗೆ ಗುರುತಿಸಲಾಗಿದ್ದ 13ನೇ ಪಾಯಿಂಟ್‌ಗೆ ತೆರಳದೆ, ನೇರವಾಗಿ ಬಂಗ್ಲಗುಡ್ಡದ ತುದಿಗೆ ಪ್ರಯಾಣ ಬೆಳೆಸಿದ್ದಾರೆ. ಈ ಹೊಸ ಸ್ಥಳವನ್ನು ಪಾಯಿಂಟ್ ನಂ.14 ಎಂದೇ ಗುರುತಿಸಲಾಗಿದೆ ಎನ್ನಲಾಗಿದ್ದು, ಈ ಅನಿರೀಕ್ಷಿತ ಬೆಳವಣಿಗೆ ಆಶ್ಚರ್ಯಕ್ಕೆ ಕಾರಣವಾಗಿದೆ.
ಈ ಹಿಂದೆ, ತನಿಖೆಯ ಭಾಗವಾಗಿ ಗುರುತಿಸಲಾದ 12 ಪಾಯಿಂಟ್‌ಗಳಲ್ಲಿ ಉತ್ಖನನ ನಡೆಸಲಾಗಿತ್ತು. ಬಂಗ್ಲಗುಡ್ಡದ ಒಂದು ತುದಿಯಲ್ಲಿ ಈಗಾಗಲೇ ಕೆಲವು ಮಾನವ ಎಲುಬುಗಳು ಪತ್ತೆಯಾಗಿವೆ ಎನ್ನಲಾಗಿದೆ. ಇದೀಗ ಹೊಸ ಪಾಯಿಂಟ್‌ಗೆ ತಂಡದ ಭೇಟಿ, ತನಿಖೆಗೆ ಹೊಸ ಆಯಾಮ ನೀಡುವ ಸಾಧ್ಯತೆ ಇದೆ. ಸತ್ಯಾಸತ್ಯತೆ ಹೊರಬೀಳಲು ಮತ್ತಷ್ಟು ಉತ್ಖನನ ನಡೆಸಲಾಗುವುದು ಎಂದು ನಿರೀಕ್ಷಿಸಲಾಗಿದೆ.