ಉಡುಪಿಯಲ್ಲಿ ಆಟೋ ಚಾಲಕರ ಮತ್ತು ಮಾಲಕರ ಒಕ್ಕೂಟದ ಹೊಸ ನಿಯಮ: ಯಾವುದೇ ಆಟೋ ನಿಲ್ದಾಣಗಳಲ್ಲಿ ಬಾಡಿಗೆ ಮಾಡಲು ಮುಕ್ತ ಅವಕಾಶ

Date:

spot_img

ಉಡುಪಿ : ಉಡುಪಿ ನಗರ ವ್ಯಾಪ್ತಿಯ ಆಟೋ ನಿಲ್ದಾಣಗಳಲ್ಲಿ ಸಾಮರಸ್ಯ ಹಾಗೂ ಬಿಕ್ಕಟ್ಟು ನಿವಾರಣೆಯ ದೃಷ್ಟಿಯಿಂದ ಚಾಲಕರ ಮತ್ತು ಮಾಲಕರ ಒಕ್ಕೂಟ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಯಾವುದೇ ನಿಲ್ದಾಣದಲ್ಲಿ 5 ರಿಕ್ಷಾಗಳಿಗಿಂತ ಕಡಿಮೆ ಆಟೋಗಳಿದ್ದಲ್ಲಿ, ಇತರ ನಿಲ್ದಾಣದ ಆಟೋಗಳು ಅಲ್ಲಿ ಬಾಡಿಗೆ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಬನ್ನಂಜೆ ನಾರಾಯಣಗುರು ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಇತ್ತೀಚೆಗೆ ಕೆಲವೊಂದು ನಿಲ್ದಾಣಗಳಲ್ಲಿ ನಡೆದ ಗಲಾಟೆಗಳಿಂದ ಚಾಲಕರಿಗೆ ತೊಂದರೆ ಉಂಟಾಗಿದ್ದ ಹಿನ್ನೆಲೆಯಲ್ಲಿ, ಪೊಲೀಸ್ ಕೇಸುಗಳು ಹೆಚ್ಚಾಗಿದ್ದವು. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಒಕ್ಕೂಟವು ಒಗ್ಗಟ್ಟಿನಿಂದ ಹೊಸ ನಿಯಮವನ್ನು ಜಾರಿಗೆ ತರಲು ಬದ್ಧವಾಗಿದೆ.

ಸಭೆಯ ನಂತರ ಚಾಲಕರು ಕಾಲ್ನಡಿಗೆ ಮೂಲಕ ಎಸ್ಪಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಎಸ್ಪಿ ಹರಿರಾಮ್ ಶಂಕರ್ ಮಾತನಾಡಿ, ನಗರಸಭೆ, ಆರ್.ಟಿ.ಒ ಹಾಗೂ ಪೊಲೀಸ್ ಇಲಾಖೆ ಸೇರಿ ನಗರದಲ್ಲಿನ ಆಟೋ ನಿಲ್ದಾಣಗಳ ಸ್ಥಿತಿಗತಿಯ ಬಗ್ಗೆ ಸರ್ವೇ ನಡೆಸಲಾಗಿದೆ. ಹೊಸ ನಿಲ್ದಾಣ ನಿರ್ಮಾಣದ ಪ್ರಸ್ತಾವನೆ ಜಿಲ್ಲಾಡಳಿತದ ಮುಂದೆ ಇಡಲಾಗಿದ್ದು, ಶೀಘ್ರದಲ್ಲೇ ಅವುಗಳ ಅನುಮೋದನೆಗಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ತುಳುವ ಮಹಾಸಭೆ ಉಡುಪಿ ಅಧ್ಯಕ್ಷರಾಗಿ ಉದಯ ಕುಮಾರ್ ಹೆಗ್ಡೆ ಆಯ್ಕೆ

ತುಳುವ ಮಹಾಸಭೆ ಇಂಟರ್ನ್ಯಾಷನಲ್ ಉಡುಪಿ ಜಿಲ್ಲಾ ಅಧ್ಯಕ್ಷರಾಗಿ ಯರ್ಲಪಾಡಿ ಉದಯ ಕುಮಾರ್ ಹೆಗ್ಡೆ ಆಯ್ಕೆಯಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ವಿಪ್ರ ಸ್ವಉದ್ಯಮ ಯೋಜನೆ: 2 ಲಕ್ಷ ಸಾಲಕ್ಕೆ ಅರ್ಜಿ ಆಹ್ವಾನ!

ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಸ್ವಉದ್ಯೋಗಕ್ಕೆ ಬಡ್ಡಿ ರಹಿತ/ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯ. ಅರ್ಜಿ ಸಲ್ಲಿಸಲು 31-08-2026 ಕೊನೆ ದಿನ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಬೆಂಗಳೂರು ಇಡಿ ದಾಳಿ: ಐಸಿಸ್ ಫಂಡಿಂಗ್ ಆರೋಪದ ಮೇಲೆ 8 ಕಡೆ ಶೋಧ

ಬೆಂಗಳೂರಿನಲ್ಲಿ ಐಸಿಸ್ ಉಗ್ರ ಸಂಘಟನೆಗೆ ಹಣಕಾಸು ನೆರವು ನೀಡಿದ ಆರೋಪದ ಮೇಲೆ ಇಡಿ ಅಧಿಕಾರಿಗಳು 8 ಕಡೆ ದಾಳಿ ನಡೆಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕರ್ನೂಲು ಬಳಿ ಭೀಕರ ಕಾರು ಅಪಘಾತ: ರವಿಚಂದ್ರ ಶೆಟ್ಟಿ ದುರ್ಮರಣ

ಆಂಧ್ರದ ಕರ್ನೂಲು ಬಳಿ ನಡೆದ ಕಾರು ಅಪಘಾತದಲ್ಲಿ ಮಂಗಳೂರಿನ ರವಿಚಂದ್ರ ಶೆಟ್ಟಿ ನಿಧನರಾಗಿದ್ದಾರೆ. ಮೂವರಿಗೆ ಗಾಯಗಳಾಗಿವೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.