
ತಿರುಪತಿ: ತಿರುಪತಿ ತಿರುಮಲ ದೇವಸ್ಥಾನ (TTD) ಭಕ್ತಾದಿಗಳ ರೂಮ್ ನಿಯಮದಲ್ಲಿ ಮಹತ್ವದ ಬದಲಾವಣೆ ತಂದಿದೆ. ಇನ್ನುಮುಂದೆ ದರ್ಶನ ಟಿಕೆಟ್ ಇಲ್ಲದೆ ಯಾರಿಗೂ ರೂಮ್ ನೀಡುವುದಿಲ್ಲ ಎಂದು ತಿರುಪತಿ ತಿರುಮಲ ದೇವಸ್ಥಾನ ಸ್ಪಷ್ಟಪಡಿಸಿದೆ.
ಹಿಂದಿನಂತೆ ರಾಜಕಾರಣಿಗಳು, ಸಚಿವರು, ಪೊಲೀಸ್ ಅಧಿಕಾರಿಗಳು ಅಥವಾ ಇತರ ಉನ್ನತ ಹುದ್ದೆಯವರ ಶಿಫಾರಸು ಪತ್ರದ ಆಧಾರದಲ್ಲಿ ರೂಮ್ ಪಡೆಯುವ ವ್ಯವಸ್ಥೆ ರದ್ದು ಮಾಡಲಾಗಿದೆ. ಇದರಿಂದ ಸಾಮಾನ್ಯ ಭಕ್ತರಿಗೆ ಹೆಚ್ಚಿನ ಅವಕಾಶ ಲಭ್ಯವಾಗಲಿದೆ ಎಂದು TTD ಹೇಳಿದೆ.
ಈ ಹೊಸ ನಿಯಮದಿಂದ ದರ್ಶನ ಟಿಕೆಟ್ ಹೊಂದಿರುವ ಭಕ್ತರು ಯಾವುದೇ ಅಡೆತಡೆ ಇಲ್ಲದೆ ರೂಮ್ ಪಡೆಯಬಹುದು ಎಂದು ತಿರುಪತಿ ತಿರುಮಲ ದೇವಸ್ಥಾನ ಭಕ್ತರಿಗೆ ಸ್ಪಷ್ಟನೆ ನೀಡಿದೆ.