
ಕಾರ್ಕಳ: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಭಾಗವಾಗಿ ಫೆಬ್ರವರಿ 22ರಂದು ಕಾರ್ಕಳದಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಭಕ್ತರು ನೀಡುವ ಹೊರೆಕಾಣಿಕೆಯನ್ನು ಫೆಬ್ರವರಿ 22 ಶನಿವಾರ ಸಂಜೆ 7 ಗಂಟೆಯೊಳಗೆ ಕಾರ್ಕಳ ಮಾರಿಯಮ್ಮ ದೇವಸ್ಥಾನಕ್ಕೆ ತಲುಪಿಸುವಂತೆ ಕೋರಲಾಗಿದೆ.
ಅನ್ನಸಂತರ್ಪಣೆಗೆ ಅಗತ್ಯವಾದ ಅಕ್ಕಿ, ಸಿಪ್ಪೆಯ ತೆಂಗಿನ ಕಾಯಿ, ಸೀಯಾಳ, ಸಕ್ಕರೆ, ಬೆಲ್ಲ, ತೆಂಗಿನ ಎಣ್ಣೆ, ನಂದಿನಿ ತುಪ್ಪ, ತೊಗರಿ ಬೇಳೆ, ಉದ್ದಿನ ಬೇಳೆ, ತರಕಾರಿ, ಹಣ್ಣುಹಂಪಲು, ಬಾಳೆ ಎಲೆ, ಹಾಳೆ ತಟ್ಟೆ ಸೇರಿದಂತೆ ಹಲವು ವಸ್ತುಗಳನ್ನು ಭಕ್ತರು ನೀಡಬಹುದು.
ಫೆಬ್ರವರಿ 23ರ ಭಾನುವಾರ ಮಧ್ಯಾಹ್ನ 1.30ಕ್ಕೆ ಕಾರ್ಕಳ ಅನಂತಶಯನ ದೇವಸ್ಥಾನದಿಂದ ಹಸಿರು ಹೊರೆಕಾಣಿಕೆ ಮೆರವಣಿಗೆ ಪ್ರಾರಂಭವಾಗಲಿದೆ. ಈ ಪವಿತ್ರ ಕಾರ್ಯಕ್ರಮದಲ್ಲಿ ಭಕ್ತರು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಕಾಪು ಮಾರಿಯಮ್ಮ ಹೊರೆಕಾಣಿಕೆ ಸಮಿತಿ ಮನವಿ ಮಾಡಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕ:
📞 ವಿಜಯ್ – 9845095526
📞 ದಿನೇಶ್ ದೇವಾಡಿಗ – 8217630567