
ಕೇವಲ ನಾಲ್ಕು ದಿನಗಳ ಹಿಂದೆ ಖರೀದಿಸಿದ್ದ ಐಫೋನ್ ಒಂದು ನದಿಯೊಳಗೆ ಬಿದ್ದರೂ, ಕೆಲವು ಗಂಟೆಗಳ ನಂತರವೂ ಅದು ಕಾರ್ಯನಿರ್ವಹಿಸುತ್ತಿರುವುದು ಎಲ್ಲರನ್ನೂ ಅಚ್ಚರಿಗೊಳಿಸಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.
ಹೌದು, ವ್ಯಕ್ತಿಯೊಬ್ಬರು ಕಯಾಕಿಂಗ್ ನಡೆಸುತ್ತಿದ್ದಾಗ ಅವರ ಹೊಸ ಐಫೋನ್ 16 ಪ್ರೊ ಮ್ಯಾಕ್ಸ್ ಆಕಸ್ಮಿಕವಾಗಿ ನೀರಿಗೆ ಬಿದ್ದಿದೆ. ಈ ಘಟನೆಯ ನಂತರ, ಆ ವ್ಯಕ್ತಿ ಮತ್ತು ಅವರ ಸ್ನೇಹಿತರು ಸೇರಿ ಮೊಬೈಲ್ ಹುಡುಕಲು ನಡೆಸಿದ ಪ್ರಯತ್ನ ಮತ್ತು ಅದರಿಂದ ಸಿಕ್ಕ ಅಚ್ಚರಿಯ ಫಲಿತಾಂಶದ ವಿಡಿಯೋ ವೈರಲ್ ಆಗಿದೆ.
ಐಫೋನ್ ನೀರಿಗೆ ಬಿದ್ದ ಕೂಡಲೇ, ಸ್ನೇಹಿತರು ಮತ್ತು ಸ್ಥಳೀಯರು ಸೇರಿ ಫೋನ್ ಹುಡುಕಲು ನೀರಿಗೆ ಧುಮುಕಿದರು. ಕೆಲವರು ಬಲೆಗಳನ್ನು ಬಳಸಿ ಫೋನ್ ಅನ್ನು ಹಿಂಪಡೆಯಲು ಪ್ರಯತ್ನಿಸಿದರು. ಕೊನೆಗೆ, ಸುಮಾರು ನಾಲ್ಕು ಗಂಟೆಗಳ ನಿರಂತರ ಪ್ರಯತ್ನದ ನಂತರ, ಫೋನ್ ಅನ್ನು ಯಶಸ್ವಿಯಾಗಿ ಪತ್ತೆ ಮಾಡಲಾಯಿತು. ಆದರೆ, ನಿಜವಾದ ಅಚ್ಚರಿ ಕಾದಿತ್ತು: ಗಂಟೆಗಟ್ಟಲೆ ನೀರಿನಲ್ಲಿದ್ದರೂ ಫೋನ್ ಸ್ವಿಚ್ ಆಫ್ ಆಗಿರಲಿಲ್ಲ! ಅಷ್ಟೇ ಅಲ್ಲ, ಅದಕ್ಕೆ ಯಾವುದೇ ಹಾನಿಯಾಗಿರಲಿಲ್ಲ.
ವಿಡಿಯೋದಲ್ಲಿರುವ ವ್ಯಕ್ತಿಯೊಬ್ಬರು, “ಐಫೋನ್‌ಗೆ ಇದಕ್ಕಿಂತ ದೊಡ್ಡ ಪ್ರಚಾರ ಸಿಗಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ. ಈ ವಿಡಿಯೋ ವೈರಲ್ ಆದ ನಂತರ, ಅನೇಕ ಬಳಕೆದಾರರು ಐಫೋನ್‌ನ ಬಾಳಿಕೆ ಮತ್ತು ಕಾರ್ಯಕ್ಷಮತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ವಿವಿಧ ರೀತಿಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.