spot_img

ಬುಲ್ತಾನಾ ಜಿಲ್ಲೆಯಲ್ಲಿ ಹೊಸ ಆತಂಕ: ಕೂದಲಿನ ಬಳಿಕ ಈಗ ಉಗುರು ಉದುರುವಿಕೆ!

Date:

ಮಹಾರಾಷ್ಟ್ರ : ಮಹಾರಾಷ್ಟ್ರದ ಬುಲ್ತಾನಾ ಜಿಲ್ಲೆಯಲ್ಲಿ ಆರೋಗ್ಯ ಸಮಸ್ಯೆಯ ಹೊಸ ರೂಪವೇ ಬೆಳಕಿಗೆ ಬಂದಿದೆ. ಕೆಲ ತಿಂಗಳ ಹಿಂದೆ ಹಳ್ಳಿಗಳಲ್ಲಿ ಕೂದಲು ಉದುರುವಿಕೆಯ ಪ್ರಕರಣಗಳು ಹೆಚ್ಚಾಗಿದ್ದವು. ಇದೀಗ, ಈ ಕೂದಲು ಉದುರಿದವರಲ್ಲಿಯೇ ಸುಮಾರು 10-12 ಜನರು ತಮ್ಮ ಉಗುರುಗಳನ್ನು ಕಳೆದುಕೊಳ್ಳುತ್ತಿರುವ ಘಟನೆ ವರದಿಯಾಗಿದೆ.

ಈ ಅಪರೂಪದ ಸ್ಥಿತಿಯ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಂಡವು ಆಗಲೇ ಈ ಹಳ್ಳಿಗಳನ್ನು ಭೇಟಿ ನೀಡಿ ವಿವಿಧ ಮಾದರಿಗಳನ್ನು ಸಂಗ್ರಹಿಸಿತ್ತು. ಪ್ರಾಥಮಿಕ ವರದಿಯ ಪ್ರಕಾರ, ದೇಹದಲ್ಲಿ ಸೆಲೆನಿಯಮ್ ಅಂಶದ ಪ್ರಮಾಣ ಹೆಚ್ಚಾಗಿರುವುದೇ ಈ ಸಮಸ್ಯೆಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಗ್ರಾಮಸ್ಥರು ಈಗ ಮತ್ತಷ್ಟು ಆತಂಕದಲ್ಲಿದ್ದು, ತಮ್ಮ ಆರೋಗ್ಯದ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಜಿಲ್ಲಾ ಆರೋಗ್ಯ ಇಲಾಖೆ ತುರ್ತಾಗಿ ಸ್ಥಳಕ್ಕೆ ಧಾವಿಸಿ ಹೊಸದಾಗಿ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಕಳುಹಿಸಿದೆ.

ಸ್ಥಳೀಯರು ಈ ಸ್ಥಿತಿಗೆ ಸ್ಪಷ್ಟನೆ ನೀಡುವಂತೆ ಅಧಿಕಾರಿಗಳ ಗಮನ ಸೆಳೆದಿದ್ದು, ತಕ್ಷಣದ ಪರಿಹಾರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಬೇಸಿಗೆಯಲ್ಲಿ ವಾಲ್ನಟ್ ಸೇವಿಸುವುದರ ಪ್ರಯೋಜನಗಳು!

ಬೇಸಿಗೆಯಲ್ಲಿ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀರಿನಾಂಶದಿಂದ ಕೂಡಿದ ಹಣ್ಣುಗಳು ಮತ್ತು ತರಕಾರಿಗಳಷ್ಟೇ ಪ್ರಾಮುಖ್ಯತೆ ಡ್ರೈ ಫ್ರೂಟ್ಸ್‌ಗೂ ಇದೆ

ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಜನಿವಾರ ನಿಷೇಧ: ವಿದ್ಯಾರ್ಥಿಗಳಿಗೆ ಅವಮಾನ, ನ್ಯಾಯಾಲಯದ ಮುಂದೆ ಪ್ರಕರಣ

ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಯಜ್ಞೋಪವೀತ (ಜನಿವಾರ) ಧರಿಸಿದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಮತಿ ನಿರಾಕರಿಸಿದ ಪ್ರಕರಣಗಳು ರಾಜ್ಯವ್ಯಾಪಿ ವಿವಾದವಾಗಿ ಪರಿಣಮಿಸಿದೆ.

ಸುಪ್ರೀಂಕೋರ್ಟ್ ಕಾನೂನು ರಚಿಸಿದರೆ ಸಂಸತ್ತಿನ ಅಗತ್ಯವೇನು? – ಬಿಜೆಪಿ ಸಂಸದ ನಿಶಿಕಾಂತ್ ದುಬೆಯ ವಿವಾದಾತ್ಮಕ ಹೇಳಿಕೆ

ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ನಿಶಿಕಾಂತ್ ದುಬೆ ಅವರು ಸುಪ್ರೀಂಕೋರ್ಟ್ ಕಾನೂನು ರಚನೆಯಲ್ಲಿ ಹೆಚ್ಚು ಹಸ್ತಕ್ಷೇಪ ಮಾಡಿದರೆ ಸಂಸತ್ತನ್ನು ಮುಚ್ಚಿಬಿಡಬೇಕು ಎಂದು ವಾದಿಸಿದ್ದಾರೆ

ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಯ ವಿಚಿತ್ರ ವಿನಂತಿ: “ಪಾಸ್ ಮಾಡಿ ಸರ್, ನನ್ನ LOVE ನಿಮ್ಮ ಕೈಯಲ್ಲಿ!”

ಸ್ಎಸ್ಎಲ್ಸಿ ಪರೀಕ್ಷೆಯ ಉತ್ತರ ಪತ್ರಿಕೆ ಮೌಲ್ಯಮಾಪನದ ಸಂದರ್ಭದಲ್ಲಿ ಒಂದು ವಿಚಿತ್ರ ಘಟನೆ ಬೆಳಗಾವಿಯ ಚಿಕ್ಕೋಡಿಯಲ್ಲಿ ನಡೆದಿದೆ.