spot_img

‘ಜನಮಾನಸದಲ್ಲಿ ಉಳಿದಿರುವ ಅಧಿಕಾರಿ’: ನೀರೆ ಕಣಜಾರು ಗ್ರಾಮ ಪಂಚಾಯತ್‌ನಿಂದ PDO ಅಂಕಿತಾ ನಾಯಕ್‌ಗೆ ಅದ್ದೂರಿ ಬೀಳ್ಕೊಡುಗೆ

Date:

spot_img
spot_img

ನೀರೆ ಕಣಜಾರು : ಸತತ 7 ವರ್ಷಗಳಿಂದ ನೀರೆ ಕಣಜಾರು ಗ್ರಾಮದ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಶ್ರೀಮತಿ ಅಂಕಿತ ನಾಯಕ್ ರವರ ಬೀಳ್ಕೊಡುಗೆ ಹಾಗೂ ಅಭಿನಂದನಾ ಕಾರ್ಯಕ್ರಮವು ನೀರೆ ಕಣಜಾರು ಗ್ರಾಮ ಪಂಚಾಯತ್ ನ ಅಟಲ್ ಬಿಹಾರಿ ವಾಜಪೇಯಿ ಸಂಜೀವಿನಿ ಸಭಾ ಭವನದಲ್ಲಿ ಅಧಿಕಾರಿಗಳು ಹಾಗೂ ಊರಿನ ಪ್ರಮುಖರು ಹಾಗೂ ಗ್ರಾಮಸ್ಥರ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ನಡೆಯಿತು.

ಶ್ರೀ ಬ್ರಹ್ಮಲಿಂಗೇಶ್ವರ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ವಿಕ್ರಂ ಹೆಗ್ಡೆ ಕಣಜಾರುರವರು ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ ಗ್ರಾಮ ಅಭಿವೃದ್ಧಿ ಅಧಿಕಾರಿಯಾಗಿ ಗ್ರಾಮದ ಅಭಿವೃದ್ಧಿಗೆ ಉತ್ತಮ ಸ್ಪಂದನೆ ನೀಡಿ ನೀರೆ ಕಣಜಾರು ಗ್ರಾಮದ ಜನ ಮಾನಸದಲ್ಲಿ ಉಳಿದಿರುವ ಶ್ರೀಮತಿ ಅಂಕಿತ ನಾಯಕ್ ರವರನ್ನು ಗೌರವ ಪೂರ್ವಕವಾಗಿ ಬೀಳ್ಕೊಡಲು ಇಂದು ಎಲ್ಲರನ್ನು ಸೇರಿಸಿ ಅಚ್ಚುಕಟ್ಟಾಗಿ ಆಯೋಜನೆ ಮಾಡಿರುತ್ತೇವೆ. ಇವರ ಅವಧಿಯಲ್ಲಿ ನಡೆದಂತಹ ಎಲ್ಲಾ ಕಾರ್ಯಕ್ರಮಗಳೂ ಯಶಸ್ವಿಯಾಗುವಲ್ಲಿ ಇವರ ಪಾತ್ರ ಅತಿ ದೊಡ್ಡದು. ಸ್ತ್ರೀ ಶಕ್ತಿ, ಸಂಜೀವಿನಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘಗಳ ಮಹಿಳೆಯರ ಜೊತೆಗಿನ ಇವರ ನಿರಂತರ ಸಂಪರ್ಕದಿಂದ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಲು ಸಾಧ್ಯವಾಗಿದೆ . ಎಲ್ಲರೊಂದಿಗೆ ಉತ್ತಮ ಭಾಂದವ್ಯ, ಉತ್ತಮ ಕಾರ್ಯಕ್ಷಮತೆ, ಕ್ರೀಯಾಶೀಲರಾಗಿ ಕರ್ತವ್ಯ ನಿರ್ವಹಿಸಿ ಬೀಳ್ಕೊಡುಗೆಗೊಂಡು ಮರ್ಣೇ ಗ್ರಾಮದ ಅಭಿವೃದ್ಧಿಅಧಿಕಾರಿಯಾಗಿ ವರ್ಗಾವಣೆಗೊಳ್ಳುತ್ತಿರುವ ಅಂಕಿತ ನಾಯಕ್ ಇವರ ಮುಂದಿನ ಜೀವನವು ಉಜ್ವಲವಾಗಿರಲಿ ಎಂದು ಶುಭ ಹಾರೈಸಿದರು.

ನೀರೆ ಪಂಚಾಯತ್ ನೂತನ ಕಟ್ಟಡ ನಿರ್ಮಾಣಕ್ಕೆ ಎಲ್ಲಾ ರೀತಿಯಲ್ಲಿ ಸಹಕರಿಸಿ ಪಂಚಾಯತ್ ಕಟ್ಟಡ ಉತ್ತಮವಾಗಿ ನಿರ್ಮಾಣ ಮಾಡಲು ಸಲಹೆ ಸೂಚನೆ, ಮಾರ್ಗದರ್ಶನವನ್ನು ನೀಡಿ ಪರಿಪೂರ್ಣ ಅನುದಾನ ಪಡೆಯಲು ಸಹಕರಿಸಿದ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಮುಖ್ಯಸ್ಥರಾದ ಶ್ರೀ ಪ್ರತೀಕ್ ಬಾಯಲ್ ಇವರ ಕಾರ್ಯವೈಖರಿ ಹಾಗೂ ಅವರ ಪರಿಚಯವನ್ನು ರವೀಂದ್ರ ನಾಯಕ್ ರವರು ತಿಳಿಸಿಕೊಡುವುದರ ಮೂಲಕ ಗ್ರಾಮ ಪಂಚಾಯತ್ ಪರವಾಗಿ ಅವರನ್ನು ಅಭಿನಂದಿಸಿದರು.

ಶ್ರೀ ಪ್ರತೀಕ್ ಬಾಯಲ್ ಇವರು ಮಾತನಾಡಿ ಈ ಒಂದು ಕಟ್ಟಡವು ಪಂಚಾಯತ್ ಅಧ್ಯಕ್ಷರು, ಸದಸ್ಯರ ರೂಪು ರೇಷೆಯ ಪ್ರಕಾರ ಸುಸಜ್ಜಿತವಾಗಿ ಮೂಡಿಬಂದಿದೆ. ಈ ಬಗ್ಗೆ PDO ಅವರು ಮಾತಾಡಿ ಈ ಕಟ್ಟಡಕ್ಕೆ ಮಹಿಳಾ ಸ್ನೇಹಿ ಪಂಚಾಯತ್ ಎಂದು ಹೆಸರಿಡಲು ಎಲ್ಲಾ ಅಧಿಕಾರಿಗಳ ಜೊತೆ ಚರ್ಚಿಸಿ ಮಂಜೂರು ಮಾಡಿರುತ್ತಾರೆ. ಯಾವುದೇ ಸರಕಾರಿ ಉದ್ಯೋಗಿ ಹೆಚ್ಚು ಎಂದರೆ 40 ವರ್ಷ ಕರ್ತವ್ಯ ನಿರ್ವಹಿಸಲು ಸಾಧ್ಯ. ಅದರಲ್ಲಿ ಅಂಕಿತರವರು ಸತತವಾಗಿ 7 ವರ್ಷ ಒಂದೇ ಕಡೆಯಲ್ಲಿ ಕರ್ತವ್ಯ ನಿರ್ವಹಿಸಿ 20% ನ್ನು ಮುಗಿಸಿರುತ್ತಾರೆ. ಹೆಚ್ಚು ಕಾಲ ಒಂದೇ ಕಡೆಯಲ್ಲಿ ಕರ್ತವ್ಯ ನಿರ್ವಹಿಸಿದಲ್ಲಿ ಹೆಚ್ಚಿನ ಮನಸ್ತಾಪಗಳು ಬರುತ್ತದೆ. ಆದರೆ ದೀರ್ಘ ಕಾಲ ಕರ್ತವ್ಯ ನಿರ್ವಹಿಸಿದರೂ ಎಲ್ಲರ ಪ್ರೀತಿಗೆ ಪಾತ್ರರಾಗಿರುವುದು ನೋಡಿದರೆ ಅಂಕಿತರವರ ಕಾರ್ಯ ವೈಖರಿಯನ್ನು ಮೆಚ್ಚುವಂತಿದೆ. ಮುಂದಿನ ದಿನಗಳಲ್ಲಿಯೂ ಇದೇ ರೀತಿ ಕರ್ತವ್ಯ ನಿರ್ವಹಿಸುವಂತಾಗಲಿ ಎಂದು ಶುಭ ಹಾರೈಸಿ, ಕಾರ್ಯಕ್ರಮ ಆಯೋಜನೆ ಮಾಡಿದ ಎಲ್ಲರಿಗೂ ಅಭಿನಂದನೆಯನ್ನು ತಿಳಿಸಿದರು.

ನೂತನ ಕಟ್ಟಡದ ಪೂರ್ಣ ಇಂಟೀರಿಯರ್ ಕೆಲಸವನ್ನು ನಿರ್ವಹಿಸಿದ ಹರೀಶ್ ಜಯದೇವ್ ಹಾಗೂ ನೂತನ ಕಟ್ಟಡಕ್ಕೆ ಸಹಕರಿಸಿದ ಉಡುಪಿ ಜಿಲ್ಲಾ ಪಂಚಾಯತ್ ನ ಮುಖ್ಯ ಯೋಜನಾಧಿಕಾರಿ ( CPO ) ಆಗಿರುವ ಉದಯ ಕುಮಾರ್ ಶೆಟ್ಟಿ ಇವರನ್ನು ಅಭಿನಂದಿಸಲಾಯಿತು. ಹಾಗೆಯೇ ಗ್ರಾಮ ಆಡಳಿತ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಮತಿ ಸುಚಿತ್ರ ಇವರನ್ನೂ ಗ್ರಾಮದ ಪರವಾಗಿ ಅಭಿನಂದಿಸಲಾಯಿತು.

ದೀರ್ಘ ಕಾಲ ಪಂಚಾಯತ್ ನಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿ ವರ್ಗಾವಣೆ ಗೊಳ್ಳುತ್ತಿರುವ ಶ್ರೀಮತಿ ಅಂಕಿತರವರ ಜನರೊಂದಿಗಿನ ಒಡನಾಟ, ಕಾರ್ಯವೈಖರಿಯ ಬಗ್ಗೆ ಶ್ರೀಮತಿ ಮಾಲಿನಿಯವರು ತಿಳಿಸಿ ಕೊಡುವುದರ ಮೂಲಕ ಅಧಿಕಾರಿಗಳ ಉಪಸ್ಥಿತಿಯಲ್ಲಿ ನೀರೆ, ಕಣಜಾರು ಗ್ರಾಮದ ಪರವಾಗಿ ಶ್ರೀಮತಿ ಅಂಕಿತ ನಾಯಕ್ ರವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.

ಸನ್ಮಾನಿತರಾದ ಅಂಕಿತ ನಾಯಕ್ ರವರು ಮಾತನಾಡಿ ನಾನು ಈ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿಯಾಗಿ ಸ್ವೀಕಾರ ಮಾಡವಾಗ ಯಾವ ರೀತಿಯ ಸ್ವಾಗತ , ಪ್ರೀತಿ ಸಿಕ್ಕಿತ್ತೋ ಈಗ ವರ್ಗಾವಣೆಯ ಸಂದರ್ಭದಲ್ಲೂ ಅದೇ ರೀತಿಯ ಪ್ರೀತಿ ಸಿಕ್ಕಿರುವುದು ತುಂಬಾ ಸಂತೋಷ ತಂದಿದೆ ಎಂದು ಭಾವನಾತ್ಮಕವಾಗಿ ಮಾತಾನ್ನಾಡಿದರು ಹಾಗೂ ಕರ್ತವ್ಯ ಸಮಯದಲ್ಲಿ ತಮಗಾಗಿರುವ ಸಮಸ್ಯೆಗಳ ಬಗ್ಗೆ, ಜನರ ಕಷ್ಟಗಳ ಬಗ್ಗೆ, ತಾವು ಅದನ್ನು ಎದುರಿಸಿರುವ ಸವಾಲುಗಳ ಬಗ್ಗೆ ತಿಳಿಸಿದರು. ಸುದೀರ್ಘ 7 ವರ್ಷಗಳ ಕರ್ತವ್ಯದ ಸಮಯದಲ್ಲಿ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಗ್ರಾಮದ ಜನರು ನೀಡಿದ ಸಹಕಾರ ಹಾಗೂ ಪ್ರೀತಿ ವಿಶ್ವಾಸಕ್ಕೆ ಧನ್ಯವಾದಗಳನ್ನು ತಿಳಿಸುತ್ತಾ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವ ಎಲ್ಲರ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ಕೊನೆಯದಾಗಿ ನೀರೆ ಕಣಜಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಸಚ್ಚಿದಾನಂದ ಪ್ರಭುರವರು ಅಂಕಿತ ನಾಯಕ್ ರವರನ್ನುದ್ದೇಶಿಸಿ ಮಾತನಾಡುತ್ತಾ ತಮ್ಮಅವಧಿಯಲ್ಲಿ ತಾವು ನೀಡಿದ ಸಹಕಾರ ಹಾಗೂ ನೂತನ ಕಟ್ಟಡ ನಿರ್ಮಾಣಕ್ಕೆ ತಮ್ಮೆಲ್ಲರೊಂದಿಗೆ ಬೆರೆತು ನೀಡಿದ ಸಹಕಾರದಿಂದ ಸುಂದರ ಕಟ್ಟಡ ಮೂಡಿ ಬರಲು ಸಾಧ್ಯವಾಯಿತು.ತಾವು 7 ವರ್ಷದಲ್ಲಿ ಮಾಡಿದ ಸೇವೆ ಪಂಚಾಯತ್ ನ ಎಲ್ಲಾ ಜನ ಮಾನಸದಲ್ಲಿ ಶಾಶ್ವತವಾಗಿದೆ. ಮುಂದಿನ ಗ್ರಾಮ ಪಂಚಾಯತ್ ನಲ್ಲೂ ಉತ್ತಮ ಸಾಧನೆ ಮಾಡುವಂತಾಗಲಿ ಎಂದು ಶುಭ ಹಾರೈಸಿ ಅಧ್ಯಕ್ಷೀಯ ಮಾತುಗಳನ್ನಾಡಿದರು.

ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ವಿದ್ಯಾಶೆಟ್ಟಿ,ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಶಶಿಧರ್, ಕಾರ್ಕಳ ತಾಲೂಕು ತಹಶೀಲ್ದಾರ್ ಆಗಿರುವ ಪ್ರದೀಪ್ ಆರ್ , ಬ್ರಹ್ಮ ಬೈದರ್ಕಳ ಗರಡಿ ನೀರೆಯ ಅಧ್ಯಕ್ಷರಾದ ನೀರೆ ಕೃಷ್ಣ ಶೆಟ್ಟಿ, ರವೀಂದ್ರ ಪ್ರಭು ಕಡಾರಿ, ಸಂತೋಷ್ ವಾಗ್ಲೆ, ಚರ್ಚಿನ ಧರ್ಮ ಗುರುಗಳಾದ ಹೆರಾಲ್ಡ್ ಪಿರೇರಾ,ನೂತನ ಗ್ರಾಮ ಅಭಿವೃದ್ಧಿ ಅಧಿಕಾರಿಗಳಾದ ನಾಗರಾಜ್ ಉಪಸ್ಥಿತರಿದ್ದರು.

ಹಾಗೇಯೇ ಕಾರ್ಯಕ್ರಮದಲ್ಲಿ ಇತರ ಸಂಘ ಸಂಸ್ಥೆಗಳ ಪ್ರಮುಖರು, ಪಂಚಾಯತ್ ಪ್ರಸ್ತುತ ಸದಸ್ಯರು, ಮಾಜಿ ಅಧ್ಯಕ್ಷರು ಮತ್ತು ಸದಸ್ಯರು , ಪಂಚಾಯತ್ ಸಿಬ್ಬಂದಿಗಳು ಹಾಗೂ ಗ್ರಾಮದ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ರಮೇಶ್ ಕಲ್ಲೊಟ್ಟೆ, ಸ್ವಾಗತ ಕಾರ್ಯಕ್ರಮವನ್ನು ನೂತನ PDO ನಾಗರಾಜ್, ಧನ್ಯವಾದವನ್ನು ಪಂಚಾಯತ್ ಉಪಾಧ್ಯಕ್ಷರಾದ ವಿದ್ಯಾ ಶೆಟ್ಟಿಯವರು ನಡೆಸಿಕೊಟ್ಟರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ನಿಟ್ಟೆಯಲ್ಲಿ ನಡೆದ ಕೇಶದಾನ

ಕ್ಯಾನ್ಸರ್ ರೋಗಿಗಳಿಗೆ ನೆರವಾಗಲು ನಿಟ್ಟೆ ಕಾಲೇಜಿನಿಂದ 'ಕೇಶ ದಾನ' ಅಭಿಯಾನ ನಡೆಯಿತು.

ಆರ್‌ಎಸ್‌ಎಸ್‌ ಪ್ರಶ್ನಿಸಿದ್ದಕ್ಕೆ ನಿಂದನಾ ಕರೆಗಳ ಹಿನ್ನಲೆ , ‘ಬೆದರಿಕೆಗಳಿಂದ ನನ್ನ ಬಾಯಿ ಮುಚ್ಚಿಸಲಾಗದು’ ಎಂದು ಸ್ಪಷ್ಟನೆ ನೀಡಿದ ಸಚಿವ ಪ್ರಿಯಾಂಕ್‌ ಖರ್ಗೆ

ಆರ್‌ಎಸ್‌ಎಸ್‌ ಪ್ರಶ್ನಿಸಿದ್ದಕ್ಕೆ ನಿಂದನಾ ಕರೆಗಳ ಹಿನ್ನಲೆ , 'ಬೆದರಿಕೆಗಳಿಂದ ನನ್ನ ಬಾಯಿ ಮುಚ್ಚಿಸಲಾಗದು' ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಸ್ಪಷ್ಟನೆ ನೀಡಿದ್ದಾರೆ.

ಕಾರ್ಕಳ ಕ್ರಿಕೆಟ್ ಅಸೋಸಿಯೇಷನ್: 2025-26 ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ

ಕಾರ್ಕಳ ಕ್ರಿಕೆಟ್ ಅಸೋಸಿಯೇಷನ್ 2025-26 ರ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ .

ವೈದ್ಯೆ ಪತ್ನಿಗೆ ಇಂಜೆಕ್ಷನ್ ನೀಡಿ ಕೊಲೆ: 6 ತಿಂಗಳ ನಂತರ ವೈದ್ಯ ಪತಿ ಡಾ. ಮಹೇಂದ್ರರೆಡ್ಡಿ ಬಂಧನ

ವೈದ್ಯೆಯಾಗಿದ್ದ ಪತ್ನಿಗೆ ಇಂಜೆಕ್ಷನ್ ನೀಡಿ ಹತ್ಯೆಗೈದಿದ್ದ ಆರೋಪಿ ಡಾಕ್ಟರ್‌ ಈಗ ಪೊಲೀಸರ ಅತಿಥಿಯಾಗಿದ್ದಾರೆ.