spot_img

ಕಾರ್ಕಳ ಕ್ರಿಯೇಟಿವ್ ಪಿ.ಯು. ಕಾಲೇಜಿನಲ್ಲಿ ಎನ್.ಸಿ.ಸಿ ನೌಕಾ ಘಟಕ ಉದ್ಘಾಟನೆ

Date:

spot_img

ಕಾರ್ಕಳ : ಕಾರ್ಕಳ ಕ್ರಿಯೇಟಿವ್ ಪಿ.ಯು ಕಾಲೇಜಿನಲ್ಲಿ 11 ಜುಲೈ 2025 ರಂದು 6/8 ಕರ್ನಾಟಕ ಎನ್.ಸಿ.ಸಿ ಉಪನೌಕಾ ಘಟಕವನ್ನು ಉದ್ಘಾಟಿಸಲಾಯಿತು.
ಉದ್ಘಾಟಕರಾಗಿ ಆಗಮಿಸಿದ 6 ಕರ್ನಾಟಕ ಎನ್.ಸಿ.ಸಿ ನೌಕಾ ಘಟಕ ಉಡುಪಿಯ ಕಮಾಂಡಿಂಗ್ ಆಫೀಸರ್ ಕಮಾಂಡರ್ ಅಶ್ವಿನ್ ಎಂ. ರಾವ್ ರವರು ಮಾತನಾಡಿ ಎನ್.ಸಿ.ಸಿ ಯ ಶ್ರೇಷ್ಠತೆ, ಅದರಲ್ಲಿರುವ ಅವಕಾಶಗಳು, ಭಾರತೀಯ ರಕ್ಷಣಾ ಪಡೆಯೊಂದಿಗಿನ ನಂಟು, ಯುವಜನತೆಯ ಪಾತ್ರ ಮತ್ತು ದೇಶದ ಭವಿಷ್ಯ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರದ ಬಗ್ಗೆ ಪ್ರೇರಣಾದಾಯಕ ಮಾತುಗಳನ್ನು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಸಹ ಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್ ರವರು ಎನ್.ಸಿ.ಸಿ ಯ ಶಿಸ್ತು, ಸಮಯ ಪಾಲನೆ, ನಾಯಕತ್ವ ಹಾಗೂ ದೇಶಪ್ರೇಮದ ಕುರಿತು ಉಲ್ಲೇಖಿಸಿ, “ಯುವಜನತೆ ರಾಷ್ಟ್ರದ ಭವಿಷ್ಯ, ಅವರು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದರೆ ದೇಶ ಪ್ರಗತಿಯ ಮಾರ್ಗದಲ್ಲಿ ಸಾಗುತ್ತದೆ’ ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹಿತನುಡಿಗಳನ್ನಾಡಿದರು.

ಈ ಸಂದರ್ಭದಲ್ಲಿ ಲೆಫ್ಟಿನೆಂಟ್ ಕಮಾಂಡರ್ ಎಂ.ಎ ಮುಲ್ತಾನಿ, ಪಿ.ಐ ಸ್ಟಾಫ್ ವರ್ಗದವರು, ಕಾಲೇಜು ಎನ್.ಸಿ.ಸಿ ನೌಕಾ ಘಟಕದ ಸಿ.ಟಿ.ಒ ಆಗಿರುವ ಆಂಗ್ಲ ಭಾಷಾ ಉಪನ್ಯಾಸಕ ಮಹೇಶ್ ಆರ್. ಶೆಣೈ, ಕೆ. ಹಾಗೂ ಬೋಧಕ- ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಆಂಗ್ಲ ಭಾಷಾ ಉಪನ್ಯಾಸಕಿ ಸುದೀಕ್ಷಾ ಎಸ್. ಪೈ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಆದರ್ಶ ಆಸ್ಪತ್ರೆಯಲ್ಲಿ ನೂತನ ಹೊರರೋಗಿ ವಿಭಾಗ ಉದ್ಘಾಟನೆ

ನಗರದ ಆದರ್ಶ ಆಸ್ಪತ್ರೆಯಲ್ಲಿ ನೂತನ ಹೊರರೋಗಿ ವಿಭಾಗ ಉದ್ಘಾಟನೆಯಾಗಿದ್ದು, ಇನ್ನು ಮುಂದೆ ಹೃದ್ರೋಗ ತಜ್ಞ ಡಾ. ಸುಹಾಸ್ ಜಿ.ಸಿ. ಅವರು ಇಲ್ಲಿ ಸೇವೆ ಲಭ್ಯವಿದೆ.

ಉಡುಪಿಯ ವಿದುಷಿ ದೀಕ್ಷಾ ಅವರಿಂದ ವಿಶ್ವದಾಖಲೆ: 170 ಗಂಟೆಗಳ ನಿರಂತರ ಭರತನಾಟ್ಯ ಪ್ರದರ್ಶನ

ಏಳು ದಿನಗಳಿಂದ ನಿರಂತರ ಭರತನಾಟ್ಯ ಪ್ರದರ್ಶನ ನೀಡುತ್ತಿದ್ದ ವಿದುಷಿ ದೀಕ್ಷಾ ವಿ. ಅವರು ವಿಶ್ವದಾಖಲೆ ನಿರ್ಮಿಸಿದ್ದಾರೆ.

ದಿನ ವಿಶೇಷ – ರಾಷ್ಟ್ರೀಯ ಕ್ರೀಡಾ ದಿನ

ಈ ದಿನವನ್ನು ಆಚರಿಸುವುದರ ಹಿಂದಿರುವ ಕಾರಣ ಅತ್ಯಂತ ಗೌರವಜನಕ ಮತ್ತು ಪ್ರೇರಣಾದಾಯಕ

ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಪದವಿ ಪ್ರದಾನ ಸಮಾರಂಭ ಅಗಸ್ಟ್ 30 ಕ್ಕೆ ಶಶೀಲ್ ಜಿ ನಮೋಶಿ

ಪಿಡಿಎ ಇಂಜಿನಿಯರಿಂಗ್ ಕಾಲೇಜಿನ 13 ನೇ ಪದವಿ ಪ್ರದಾನ ಸಮಾರಂಭವು ಆಗಸ್ಟ್ 30, 2025 ರ ಶನಿವಾರ ಬೆಳಿಗ್ಗೆ 10:00 ಗಂಟೆಗೆ ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಚಟುವಟಿಕೆ ಕೇಂದ್ರ (ಎಸ್‌ಎಸಿ) ಪಿಡಿಎ ಸಭಾಂಗಣದಲ್ಲಿ ನಡೆಯಲಿದೆ.