
ರಾಷ್ಟ್ರೀಯ ಲಸಿಕಾ ದಿನ
National Vaccination Day
ಭಾರತ ಪೋಲಿಯೋ ರೋಗದಿಂದ ಬಹಳ ತತ್ತರಿಸಿತ್ತು. ಇಡೀ ಪ್ರಪಂಚವೇ ಈ ರೋಗಕ್ಕೆ ಹೆದರಿ ಹೋಗಿತ್ತು. ಅನೇಕ ತಂದೆ ತಾಯಿಗಳು ತಮ್ಮ ಮಕ್ಕಳನ್ನು ಅಂಗವಿಕಲರನ್ನಾಗಿ ನೋಡುವ ದೌರ್ಭಾಗ್ಯ ಕೊಟ್ಟ ಅತಿ ಕೆಟ್ಟ ರೋಗ. ಆ ರೋಗದ ನಿರ್ಮೂಲನೆಗಾಗಿ ಪ್ರತಿಯೊಬ್ಬರೂ ಕೂಡ ಕನಿಷ್ಠ ಪಕ್ಷಕ್ಕೆ ಒಂದು ದಿವಸ ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಈ ದಿವಸವನ್ನು ಮೀಸಲಿಟ್ಟಿದ್ದಾರೆ. ಈ ಮೂಲಕ ಆರೋಗ್ಯವಂತರಾಗಬೇಕು ಎನ್ನುವ ಉದ್ದೇಶ. ಇವತ್ತು ಆ ರೋಗ ಬಹಳಷ್ಟು ಕಡಿಮೆ ಪ್ರಮಾಣದಲ್ಲಿದೆ. ಆದರೂ ಕೂಡ ಲಸಿಕೆ ಇಲ್ಲದ ಇವತ್ತು ಬದುಕು ಸಾಗಿಸುವುದು ಕಷ್ಟ ಆದ್ದರಿಂದ ಈ ದಿವಸ ಅದನ್ನು ನೆನಪಿಸಿಕೊಡುವಲ್ಲಿ ಸಹಾಯವಾಗುತ್ತದೆ. ಭಾರತೀಯರಿಗೆ ಏನೇ ಆದರೂ ಧನ್ವಂತರಿಯ ಅನುಗ್ರಹದ ಲಸಿಕೆ ಎಷ್ಟು ದೊಡ್ಡ ಮದ್ದು ಬೇರಿಲ್ಲ. ಆದ್ದರಿಂದ ಲಸಿಕೆ ಫಲಕಾರಿಯಾಗಬೇಕಾದರೆ ದೇವರ ಅನುಗ್ರಹ ಕೂಡ ಬೇಕು ಎನ್ನುವುದು ಭಾರತೀಯರ ಚಿಂತನೆ. ಈ ಮೂಲಕ ಈ ದಿವಸ ಸಾರ್ಥಕವಾಗಲಿ.
ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ