ರಾಷ್ಟ್ರೀಯ ಸ್ಕೂಲ್ ಗೇಮ್ಸ್ , ಬಾಲಕಿಯರ ವಾಲಿಬಾಲ್ : ಕಾರ್ಕಳದ ಶಗುನ್ ಎಸ್. ವರ್ಮ ಹೆಗ್ಡೆ ರಾಷ್ಟ್ರ ಮಟ್ಟಕ್ಕೆ ಆಯ್ಕೆ

Date:

spot_img

ಕಾರ್ಕಳ : ರಾಷ್ಟ್ರೀಯ ಸ್ಕೂಲ್ ಗೇಮ್ಸ್ ಫೆಡರೇಶನ್ ಇವರು ಆಯೋಜಿಸುವ 15 ವರ್ಷ ವಯೋಮಿತಿಯ ಒಳಗಿನ ಶಾಲಾ ಮಕ್ಕಳ ಬಾಲಕಿಯರ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಕರ್ನಾಟಕದ ವಾಲಿಬಾಲ್ ತಂಡದಲ್ಲಿ ಕಾರ್ಕಳ ಕ್ರೈಸ್ತಕಿಂಗ್ ಆಂಗ್ಲ ಮಾದ್ಯಮ ಶಾಲೆಯ 9ನೇ ತರಗತಿಯ ಶಗುನ್ ಎಸ್. ವರ್ಮ ಹೆಗ್ಡೆ ಸ್ಥಾನವನ್ನು ಪಡೆದಿದ್ದಾರೆ.

ಆಗಸ್ಟ್ ‌20 ರಂದು ಬೆಂಗಳೂರಿನಲ್ಲಿ‌ ನಡೆದ ಆಯ್ಕೆ ಶಿಬಿರದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಆಟಗಾರು ಭಾಗವಹಿಸಿದ್ದು ಕರ್ನಾಟಕದಿಂದ ಆಯ್ಕೆಯಾದ ಒಟ್ಟು ಎಂಟು ಆಟಗಾರರಲ್ಲಿ ಶಗುನ್ ಎಸ್ ವರ್ಮ ಹೆಗ್ಡೆ ಉಡುಪಿ ಜಿಲ್ಲೆಯ ಏಕೈಕ ಆಟಗಾರ್ತಿಯಾಗಿದ್ದಾರೆ.

ಈ ತಿಂಗಳ 28 ರಿಂದ ಮೂರು ದಿನಗಳ ಕಾಲ ಪುಣೆಯಲ್ಲಿ ನಡೆಯುವ ರಾಷ್ಟ್ರಮಟ್ಟದ ಶಿಬಿರದಲ್ಲಿ ವಿಶ್ವ ತಂಡದ ಆಯ್ಕೆ ನಡೆಯಲಿದ್ದು ಅಲ್ಲಿ ಆಯ್ಕೆಯಾದ ಆಟಗಾರ್ತಿಯರು ಡಿಸೆಂಬರ್ 4 ರಿಂದ 13 ವರೆಗೆ ಚೀನಾದ ಶಾಂಗ್ಲೋದಲ್ಲಿ ನಡೆಯುವ ವಿಶ್ವ ಶಾಲಾ‌ ಮಕ್ಕಳ ವಾಲಿಬಾಲ್ ಪಂದ್ಯಾಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಕುಮಾರಿ ಶಗುನ್ ಎಸ್, ವರ್ಮ ಹೆಗ್ಡೆ ಶ್ರೀಮತಿ ಶುತಿ ಮತ್ತು ಸಂದೇಶ್ ವರ್ಮ ದಂಪತಿಗಳ ಪುತ್ರಿಯಾಗಿದ್ದು ಇವರು ಜೋಡುರಸ್ತೆ ಕೊರಚೊಟ್ಟು ಕ್ರೀಡಾಂಗಣದಲ್ಲಿ ಸಂತೋಷ್ ಡಿ’ಸೋಜಾ, ಜೀವನ್ ಡಿ’ ಸಿಲ್ವಾ, ಹಾಗೂ ಜೈರಾಜ್ ಪೂಜಾರಿ ಇವರಿಂದ ಕ್ರೀಡಾ ತರಬೇತಿಯನ್ನು ಪಡೆದಿರುತ್ತಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ರೆಡ್ಮಿ ಪ್ರಿಯರಿಗೆ ಭರ್ಜರಿ ಸುದ್ದಿ: ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಹೊಸ ‘ರೆಡ್ಮಿ ಟರ್ಬೊ 5’

ಭಾರತದಲ್ಲಿ ರೆಡ್ಮಿ ಟರ್ಬೊ 5 ಬಿಡುಗಡೆ ದಿನಾಂಕ ಸೋರಿಕೆ! ಜೂನ್ 16 ರಂದು ಅನಾವರಣಗೊಳ್ಳಲಿರುವ ಹೊಸ ಸ್ಮಾರ್ಟ್‌ಫೋನ್‌ನ ವೈಶಿಷ್ಟ್ಯಗಳ ವಿವರ ಇಲ್ಲಿದೆ.

ದಿನ ವಿಶೇಷ – ಆಕ್ರಮಣಶೀಲತೆಗೆ ಒಳಗಾದ ಮುಗ್ಧ ಮಕ್ಕಳ ಅಂತರರಾಷ್ಟ್ರೀಯ ದಿನ

ಜೂನ್ 4 ರಂದು ಆಚರಿಸಲಾಗುವ ಆಕ್ರಮಣಶೀಲತೆಗೆ ಒಳಗಾದ ಮುಗ್ಧ ಮಕ್ಕಳ ಅಂತರರಾಷ್ಟ್ರೀಯ ದಿನದ ಮಹತ್ವ, ಇತಿಹಾಸ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಯ ಕುರಿತಾದ ಮಾಹಿತಿ.

ಹಲಸಿನ ಹಣ್ಣು ತಿಂದ ಮೇಲೆ ಬೀಜ ಬಿಸಾಡ್ತೀರಾ? ತಡಿರಿ… ಅದರಲ್ಲಿದೆ ‘ಬಾದಾಮಿ’ಗಿಂತಲೂ ಹೆಚ್ಚಿನ ಶಕ್ತಿ

ಹಲಸಿನ ಹಣ್ಣಿನ ಬೀಜಗಳನ್ನು ಬಿಸಾಡುವ ಮುನ್ನ ಈ ಲೇಖನ ಓದಿ. ಇದರಲ್ಲಿರುವ ಪೋಷಕಾಂಶಗಳು ಮತ್ತು ಆರೋಗ್ಯದ ಲಾಭಗಳ ವಿವರ ಇಲ್ಲಿದೆ.

ಪೆರ್ಣಂಕಿಲ ದೇವಸ್ಥಾನದ ವ್ಯವಸ್ಥಾಪಕ ಸುರೇಶ್ ತಂತ್ರಿ ನಿಧನ

ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪಕ ಸುರೇಶ್ ತಂತ್ರಿಯವರು ದೈವಾಧೀನರಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ