spot_img

ಪೊಲೀಸರು ವಾಟ್ಸಾಪ್ ಮೂಲಕ ನೋಟಿಸ್ ಕಳುಹಿಸುವಂತಿಲ್ಲ: ಸುಪ್ರೀಂಕೋರ್ಟ್ ಮಹತ್ವದ ಆದೇಶ

Date:

ನ್ಯಾಯಾಲಯಗಳ ಕಲಾಪಗಳಲ್ಲಿ ತಂತ್ರಜ್ಞಾನ ಬಳಕೆಯಲ್ಲಿ ಸಾಕಷ್ಟು ಪ್ರಗತಿ ಕಂಡಿದ್ದರೂ ಸುಪ್ರೀಂಕೋರ್ಟ್, ಪೋಲಿಸರು ಮತ್ತು ಕಾನೂನು ಜಾರಿ ಸಂಸ್ಥೆಗಳು ಸಿಆರ್‌ಪಿಸಿಯ ಕಲಂ 41ಎ ಅಥವಾ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾದ ಕಲಂ 35ರಡಿ ವಾಟ್ಸಾಪ್ ಅಥವಾ ಇತರ ವಿದ್ಯುನ್ಮಾನ ವಿಧಾನಗಳ ಮೂಲಕ ಬಂಧನ-ಪೂರ್ವ ನೋಟಿಸ್‌ಗಳನ್ನು ಕಳುಹಿಸುವಂತಿಲ್ಲ ಎಂದು ಹೇಳಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂಎಂ ಸುಂದರೇಶ್ ಮತ್ತು ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಅವರ ಪೀಠವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ಆದೇಶಗಳನ್ನು ಆಯಾ ಪೊಲೀಸ್ ಇಲಾಖೆಗಳಿಗೆ ನೀಡುವಂತೆ ಸೂಚಿಸಿದ್ದು ಸಿಆರ್‌ಪಿಸಿ ಅಥವಾ ಬಿಎನ್‌ಎಸ್‌ಎಸ್ ಅಡಿಯಲ್ಲಿ ನಿಗದಿತ ಸೇವಾ ವಿಧಾನದ ಮೂಲಕ ಮಾತ್ರ ಅಂತಹ ಸೂಚನೆಗಳನ್ನು ನೀಡುವಂತೆ ರಾಜ್ಯ ಸರ್ಕಾರಗಳಿಗೆ ಆದೇಶಗಳನ್ನು ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

ವಾಟ್ಸಾಪ್ ಅಥವಾ ಇತರ ವಿದ್ಯುನ್ಮಾನ ವಿಧಾನಗಳ ಮೂಲಕ ನೋಟಿಸ್‌ಗಳನ್ನು ಹೊರಡಿಸುವುದನ್ನು ಸಿಆರ್‌ಪಿಸಿ,1973/ಬಿಎನ್‌ಎಸ್‌ಎಸ್, 2023ಯಲ್ಲಿ ಗುರುತಿಸಲಾಗಿರುವ ಮತ್ತು ಸೂಚಿಸಲಾಗಿರುವ ವಿಧಾನಗಳಿಗೆ ಪರ್ಯಾಯವಾಗಿ ಅಥವಾ ಬದಲಿಯಾಗಿ ಪರಿಗಣಿಸುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ ಎಂದು ಹೇಳಿತು.
ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ಅವರ ಅರ್ಜಿಯ ವಿಚಾರಣೆ ವೇಳೆ CrPC 1973 ರ ಸೆಕ್ಷನ್ 41-A ಅಡಿಯಲ್ಲಿ ನೋಟಿಸನ್ನು ವಾಟ್ಸಾಪ್ ಮೂಲಕ ಕಳುಹಿಸಲಾಗಿದೆ ಆದರೆ ಆರೋಪಿಗಳು ತನಿಖಾಧಿಕಾರಿಯ ಮುಂದೆ ಹಾಜರಾಗದ ಪ್ರಕರಣಗಳನ್ನು ಲುಥ್ರಾ ಹೈಲೈಟ್ ಮಾಡಿದ್ದು ಬಳಿಕ ಸುಪ್ರೀಂ ಕೋರ್ಟ್ ಈ ತೀರ್ಪನ್ನು ಹೊರಡಿಸಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

‘ಸು ಫ್ರಮ್‌ ಸೋʼ ಚಿತ್ರ ಒಟಿಟಿಗೆ ಲಗ್ಗೆ: 7 ನಿಮಿಷಗಳ ದೃಶ್ಯಕ್ಕೆ ಕತ್ತರಿ?

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಈ ವರ್ಷ ದೊಡ್ಡ ಹಿಟ್ ಆಗಿ ಹೊರಹೊಮ್ಮಿದ ಹಾರರ್-ಕಾಮಿಡಿ ʼಸು ಫ್ರಮ್ ಸೋʼ ಈಗ ಒಟಿಟಿಗೆ ಬಂದಿದೆ. ಥಿಯೇಟರ್‌ಗಳಲ್ಲಿ 45 ದಿನಗಳ ಯಶಸ್ವಿ ಪ್ರದರ್ಶನದ ಬಳಿಕ, ಈ ಚಿತ್ರ ಇಂದು (ಸೆಪ್ಟೆಂಬರ್ 9) ಜಿಯೋ ಸಿನಿಮಾ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಸಾರ ಆರಂಭಿಸಿದೆ.

ಬಜಗೋಳಿ ವಲಯ ಮಟ್ಟದ ಕ್ರೀಡಾಕೂಟ: ಇರ್ವತ್ತೂರು ಶಾಲೆಗೆ ನಾಲ್ಕು ಪ್ರಥಮ ಪ್ರಶಸ್ತಿಗಳು

ಬಜಗೋಳಿ ವಲಯ ಮಟ್ಟದ 14 ವರ್ಷದೊಳಗಿನ ಬಾಲಕ-ಬಾಲಕಿಯರ ವಾಲಿಬಾಲ್ ಮತ್ತು ತ್ರೋಬಾಲ್ ಪಂದ್ಯಾಟದಲ್ಲಿ ಇರ್ವತ್ತೂರು ಶಾಲೆಯು ಭರ್ಜರಿ ಸಾಧನೆ ಮಾಡಿದೆ. ಸ್ಪರ್ಧಿಸಿದ ನಾಲ್ಕೂ ವಿಭಾಗಗಳಲ್ಲಿ ಪ್ರಥಮ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಶಾಲೆಯು ಹೊಸ ದಾಖಲೆಯನ್ನು ನಿರ್ಮಿಸಿದೆ.

ದಿನ ವಿಶೇಷ – ಕ್ಯಾಪ್ಟನ್ ವಿಕ್ರಮ್ ಬತ್ರಾ ಜನ್ಮದಿನ

ನಮ್ಮ ದೇಶದ ಇತಿಹಾಸದಲ್ಲಿ ದೇಶಭಕ್ತಿ ಮತ್ತು ಧೈರ್ಯದ ಸಂಕೇತವಾಗಿ ನಿಂತಿರುವ ಹೆಸರುಗಳಲ್ಲಿ ಕ್ಯಾಪ್ಟನ್ ವಿಕ್ರಮ್ ಬತ್ರಾ ಅವರದ್ದು ಅಮರ

ಫುಟ್‌ಬಾಲ್ : ಕಾರ್ಕಳ ಜ್ಞಾನಸುಧಾ ತಂಡ ಜಿಲ್ಲಾಮಟ್ಟಕ್ಕೆ

ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ತಾಲೂಕು ಮಟ್ಟದ ಫುಟ್‌ಬಾಲ್ ಪಂದ್ಯಾಟದಲ್ಲಿ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಬಾಲಕರ ತಂಡವು ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ.