ದೇವಸ್ಥಾನದಲ್ಲಿ ಕದಿಯಲು ಬಂದು ನಿದ್ರೆಗೆ ಜಾರಿದ ಕಳ್ಳ

Date:

spot_img

ಜಾರ್ಖಂಡ್‌ : ಜಾರ್ಖಂಡ್‌ನ ಕಾಳಿ ದೇವಸ್ಥಾನದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಕಳ್ಳತನ ಮಾಡಲೆಂದು ದೇವಸ್ಥಾನದೊಳಗೆ ನುಗ್ಗಿದ್ದ ಕಳ್ಳನೊಬ್ಬ, ಕದ್ದ ವಸ್ತುಗಳ ಸಮೇತ ಅಲ್ಲೇ ಗಾಢ ನಿದ್ದೆಗೆ ಜಾರಿದ್ದಾನೆ.

ಕಳ್ಳ ವೀರ್ ನಾಯಕ್ ಸೋಮವಾರ ರಾತ್ರಿ ಮದ್ಯ ಸೇವಿಸಿ ನಂತರ ಕೃತ್ಯಕ್ಕೆ ಮುಂದಾಗಿದ್ದ. ಕಾಳಿ ದೇವಸ್ಥಾನದ ಮುಂಭಾಗದ ಗೋಡೆ ಹಾರಿ, ಬಾಗಿಲಿನ ಬೀಗ ಮುರಿದು ಒಳನುಗ್ಗಿದ್ದ. ದೇವಾಲಯದ ಒಳಗಿದ್ದ ಕಾಳಿ ಮಾತೆಯ ವಿಗ್ರಹದ ಮೇಲಿನ ಆಭರಣಗಳು, ಪೂಜಾ ತಾಳಿ, ಲೋಟ, ಗಂಟೆ ಮತ್ತು ಅಲಂಕಾರಿಕ ಸಾಮಗ್ರಿಗಳನ್ನು ಚೀಲದಲ್ಲಿ ತುಂಬಿಸಿಕೊಂಡಿದ್ದಾನೆ. ಆದರೆ, ಕದ್ದ ಮಾಲುಗಳೊಂದಿಗೆ ಓಡಿಹೋಗಲು ಸಿದ್ಧತೆ ನಡೆಸುತ್ತಿದ್ದಾಗಲೇ ನಿದ್ದೆ ಆವರಿಸಿದ್ದು, ಅಲ್ಲೇ ಮಲಗಿ ನಿದ್ರೆಗೆ ಜಾರಿದ್ದಾನೆ.

ಮಂಗಳವಾರ ಬೆಳಿಗ್ಗೆ ದೇವಸ್ಥಾನಕ್ಕೆ ಬಂದ ಭಕ್ತರು ಬಾಗಿಲು ಮುರಿದಿರುವುದನ್ನು ಗಮನಿಸಿ, ಒಳಗಡೆ ವ್ಯಕ್ತಿಯೊಬ್ಬ ಮಲಗಿರುವುದನ್ನು ಕಂಡಿದ್ದಾರೆ. ದೇವಸ್ಥಾನದ ವಸ್ತುಗಳು ಚೆಲ್ಲಾಪಿಲ್ಲಿಯಾಗಿರುವುದನ್ನು ನೋಡಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಜಮಡಾ ಪೊಲೀಸರು, ಗಾಢ ನಿದ್ದೆಯಲ್ಲಿದ್ದ ಕಳ್ಳ ವೀರ್ ನಾಯಕ್‌ನನ್ನು ಎಬ್ಬಿಸಿ, ಕದ್ದ ಮಾಲುಗಳ ಸಮೇತ ವಶಕ್ಕೆ ಪಡೆದಿದ್ದಾರೆ.

ಬರಜಮ್ಡಾ ಒಪಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ಜೈಲಿಗೆ ಕಳುಹಿಸಲಾಗಿದೆ. ಕಳ್ಳತನಕ್ಕೆ ಬಂದ ಕಳ್ಳ ನಿದ್ರೆಗೆ ಜಾರಿ ಸಿಕ್ಕಿಬಿದ್ದ ಈ ಘಟನೆ ಸ್ಥಳೀಯವಾಗಿ ಸಖತ್ ವೈರಲ್ ಆಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ವಿಳಂಬ: ಹೈಕಮಾಂಡ್ ನಿರ್ಧಾರ ಶೀಘ್ರ

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಮತ್ತೆ ವಿಳಂಬಗೊಂಡಿದೆ. ಹೈಕಮಾಂಡ್ ಅನುಮೋದನೆಗಾಗಿ ನಾಯಕರು ಕಾಯುತ್ತಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಇಂಡಿ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ; ಡೆತ್‌ನೋಟ್ ಪತ್ತೆ

ಇಂಡಿಯ ಡಾ. ಬಿ.ಆರ್. ಅಂಬೇಡ್ಕರ್ ವಸತಿ ನಿಲಯದಲ್ಲಿ 16 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್‌ನೋಟ್ ಪತ್ತೆಯಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಐಐಟಿ ರೂರ್ಕಿಯಲ್ಲಿ ರಾಜಕೀಯ ಪೋಸ್ಟ್‌ಗೆ ನಿಷೇಧ: ಜಾಲತಾಣದಲ್ಲಿ ಆಕ್ರೋಶ

ಐಐಟಿ ರೂರ್ಕಿ ತನ್ನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ರಾಜಕೀಯ ಪೋಸ್ಟ್ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಮಂಜೊಟ್ಟಿಯಲ್ಲಿ ಜುಲೈ 26 ರಂದು ‘ಕೆಸರ್ಡ್ ಒಂಜಿ ದಿನ’ ಕ್ರೀಡಾಕೂಟ!

ಬೊಮ್ಮಾರಬೆಟ್ಟು ಗ್ರಾಮಸ್ಥರಿಗಾಗಿ ಹಿರಿಯಡ್ಕ ಮಂಜೊಟ್ಟಿಯಲ್ಲಿ 'ಕೆಸರ್ಡ್ ಒಂಜಿ ದಿನ' ಗ್ರಾಮೀಣ ಕ್ರೀಡಾಕೂಟ ಆಯೋಜನೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ