
ಕಾರ್ಕಳ ಮಾರ್ಚ್.18: ಶ್ರೀ ಅರ್ಧನಾರೀಶ್ವರ ಸ್ಪೋರ್ಟ್ಸ್ ಕ್ಲಬ್ (ರಿ ) ಮುಟ್ಲುಪಾಡಿ ಇವರ ವತಿಯಿಂದ ಮುನಿಯಾಲು ಗ್ರಾಮದ ಹೆಮ್ಮೆಯ ಯುವಕ ಹಾಗೂ ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ ಶ್ರೀ ಪ್ರೀತಂ ಶೆಟ್ಟಿ ಸ್ಮರಣಾರ್ಥವಾಗಿ ಕಾರ್ಕಳ ವಿಧಾನಸಭಾ ವ್ಯಾಪ್ತಿ ಹಾಗೂ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟವನ್ನು ಮೇ 3, 2025 ರಂದು ಮುನಿಯಾಲಿನ ವೀರ ಸಾವರ್ಕರ್ ಮೈದಾನದಲ್ಲಿ ಆಯೋಜಿಸಲಾಗಿದೆ.
ಕಾರ್ಕಳ ವಿಧಾನ ಸಭಾ ವ್ಯಾಪ್ತಿ ಪಂದ್ಯಾಟವು ಬೆಳಗ್ಗೆ 9.30ಕ್ಕೆ ಪ್ರಾರಂಭವಾಗಲಿದ್ದು, ಸಂಜೆ 6.30ಕ್ಕೆ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟ ನಡೆಯಲಿದೆ.ಈ ಟೂರ್ನಿಯಲ್ಲಿ ಪ್ರೋ ಕಬಡ್ಡಿ ಆಟಗಾರರನ್ನು ಒಳಗೊಂಡ 8 ತಂಡಗಳು ಭಾಗವಹಿಸಲಿದ್ದು, ಮಾಜಿ ಕ್ರಿಕೆಟಿಗರು, ಬಾಲಿವುಡ್ ಹಾಗೂ ಸ್ಯಾಂಡಲ್ ವುಡ್ ತಾರೆಗಳು ವಿಶೇಷ ಆಕರ್ಷಣೆಯಾಗಿ ಪಾಲ್ಗೊಳ್ಳಲಿದ್ದಾರೆ.10 ಸಾವಿರಕ್ಕೂ ಹೆಚ್ಚು ಜನರಿಗೆ ವಿಶಾಲ ಗ್ಯಾಲರಿ ವ್ಯವಸ್ಥೆಯೂ ಮಾಡಲಾಗಿದೆ.
ಪ್ರಶಸ್ತಿಗಳ ವಿವರ
ಕಾರ್ಕಳ ವಿಧಾನ ಸಭಾ ವ್ಯಾಪ್ತಿ
ಪ್ರಥಮ – 25000
ದ್ವಿತೀಯ-15000
ತೃತೀಯ – 10000
ಚತುರ್ಥ – 10000
ರಾಷ್ಟ್ರೀಯ ಮಟ್ಟ
ಪ್ರಥಮ – 100000
ದ್ವಿತೀಯ-75000
ತೃತೀಯ – 50000
ಚತುರ್ಥ – 50000
ಉಳಿದ 4 ತಂಡಗಳಿಗೆ ತಲಾ 25000 ದಂತೆ ಸಮಾಧಾನಕರ ಬಹುಮಾನವನ್ನು ನೀಡಲಾಗುವುದು ಎಂದು ಇಂದು ನಡೆದ ಪತ್ರಿಕಾ ಘೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಪತ್ರಿಕಾ ಘೋಷ್ಠಿಯಲ್ಲಿ ಶ್ರೀ ಅರ್ಧನಾರೀಶ್ವರ ಸ್ಪೋರ್ಟ್ಸ್ ಕ್ಲಬ್ (ರಿ ) ಮುಟ್ಲುಪಾಡಿ ಇದರ ಗೌರವಾಧ್ಯಕ್ಷರಾದ ಗಿರೀಶ್ ಶೆಟ್ಟಿ ತೆಳ್ಳಾರು, ಅಧ್ಯಕ್ಷರಾದ ಸುನಿಲ್ ಹೆಗ್ಡೆ, ಕೋಶಾಧಿಕಾರಿಗಳಾದ ಸುದೀಪ್ ಅಜಿಲ, ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರರಾದ ಜಗದೀಶ್ ಕುಂಬ್ಳೆ , ಸುಹಾಸ್ ಶೆಟ್ಟಿ ಮುಟ್ಲುಪಾಡಿ, ಹರೀಶ್ ಶೆಟ್ಟಿ ಪಡುಕುಡೂರು ಹಾಗೂ ಗೋಪಿನಾಥ್ ಭಟ್ ಉಪಸ್ಥಿತರಿದ್ದರು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ : 9632529520