ಎಂ.ಆರ್.ಪಿ.ಎಲ್. ಗುತ್ತಿಗೆ ಕಾರ್ಮಿಕರಿಂದ ಭಕ್ತಿಯ ಪಾದಯಾತ್ರೆ: ನ್ಯಾಯ ಮತ್ತು ಸೌಲಭ್ಯಗಳ ಈಡೇರಿಕೆಗೆ ಪಿಲಿಚಾಮುಂಡಿಗೆ ಪ್ರಾರ್ಥನೆ

Date:

spot_img

ಎಂ.ಆರ್.ಪಿ.ಎಲ್. ಸಂಸ್ಥೆಯಲ್ಲಿ ಕೆಲಸಮಾಡುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ಸಿಗಬೇಕಾದ ವಿಮೆ ಸೌಲಭ್ಯ, ಆರೋಗ್ಯ ಭದ್ರತೆ, ವಿಶೇಷ ಭತ್ಯೆ ಮುಂತಾದ ನೈಜ ಹಕ್ಕುಗಳನ್ನು ಒದಗಿಸುವಂತೆ ಆಗ್ರಹಿಸಿ, ಡಿಸಿ ಕಚೇರಿಯಲ್ಲಿ ಏಪ್ರಿಲ್ 2 ರಂದು ಸಂಸದರ ಉಪಸ್ಥಿತಿಯಲ್ಲಿ ಮಹತ್ವದ ಸಭೆ ನಡೆದಿತ್ತು.

ಅದರಲ್ಲಿ ಅಪರ ಜಿಲ್ಲಾಧಿಕಾರಿ, ಎಂ.ಆರ್.ಪಿ.ಎಲ್. ಸಂಸ್ಥೆಯ ಹಿರಿಯ ಅಧಿಕಾರಿಗಳು, ಕಾರ್ಮಿಕ ಇಲಾಖೆ ಹಾಗೂ ಕರ್ಮಚಾರಿ ಸಂಘದ ಪ್ರತಿನಿಧಿಗಳು ಭಾಗವಹಿಸಿದ್ದರು. ಗುತ್ತಿಗೆ ಕಾರ್ಮಿಕರ ಬೇಡಿಕೆಗಳ ಕುರಿತು ಎಂ.ಆರ್.ಪಿ.ಎಲ್. ಸಂಸ್ಥೆ ಲಿಖಿತವಾಗಿ ಸ್ಪಷ್ಟನೆ ನೀಡಬೇಕೆಂದು ಅಧಿಕಾರಿಗಳು ಒತ್ತಾಯಿಸಿದ್ದರು.

ಆದರೆ ಈ ಮೇಲ್ವಿಚಾರಣೆಯಾಗಿರುವ ಆಗ್ರಹಕ್ಕೂ ಇನ್ನೂ ಯಾವುದೇ ಸ್ಪಷ್ಟ ಉತ್ತರ ಸಂಸ್ಥೆಯಿಂದ ಬಂದಿಲ್ಲ. ಈ ಹಿನ್ನೆಲೆ, ಎಲ್ಲಾ ಗುತ್ತಿಗೆ ಕಾರ್ಮಿಕರು ಇಂದು ಮುಂಜಾನೆ ಎಂ.ಆರ್.ಪಿ.ಎಲ್. ಮುಖ್ಯಗೇಟ್‌ನ ಗಣಪತಿ ದೇವಸ್ಥಾನದಿಂದ ಹೊರಟು ಪೆರ್ಮುದೆ ಕಾಯರ್ ಕಟ್ಟೆ ಪಿಲಿಚಾಮುಂಡಿ ದೈವಸ್ಥಾನಕ್ಕೆ ಭಕ್ತಿಯಿಂದ ಪಾದಯಾತ್ರೆ ನಡೆಸಿದರು.

“ಎಂ.ಆರ್.ಪಿ.ಎಲ್. ಗುತ್ತಿಗೆ ಕಾರ್ಮಿಕರ ಶಕ್ತಿಯ ಪ್ರಾಪ್ತಿಗಾಗಿ” ಎಂಬ ಸಂಕಲ್ಪದೊಂದಿಗೆ ನಡೆದ ಈ ಯಾತ್ರೆಯಲ್ಲಿ, ಕಾರ್ಮಿಕರು ತಾಯಿ ಪಿಲಿಚಾಮುಂಡಿ ದೈವದ ಸನ್ನಿಧಿಯಲ್ಲಿ ನ್ಯಾಯ ಸಿಗಲೆಂದು ಪ್ರಾರ್ಥಿಸಿದರು.

ಈ ಸಂದರ್ಭ ಗುತ್ತಿಗೆ ಕಾರ್ಮಿಕರ ಪ್ರಮುಖರು ಮಾತನಾಡಿ, “ಸಂಸ್ಥೆ ಸೌಲಭ್ಯ ನೀಡಲು ಸಿದ್ಧವಾಗಿದ್ದರೂ, ಕೆಲವರು ಅವಕ್ಕೆ ತಡೆ ನೀಡುತ್ತಿರುವುದು ಗೋಚರಿಸುತ್ತದೆ. ಇಂತಹ ಅಡ್ಡಿಗಳಿಗೆ ತಾಯಿ ಪಿಲಿಚಾಮುಂಡಿ ದೈವ ಕಡಿವಾಣ ಹಾಕಲಿ” ಎಂದು ಆಶಿಸಿದರು.

ದೈವಸ್ಥಾನದ ಗುತ್ತಿನಾರ್ ಗುರುರಾಜ್ ಮಾಡ ಅವರು, “ಎಲ್ಲಾ ಗುತ್ತಿಗೆ ಕಾರ್ಮಿಕರ ಬೇಡಿಕೆಗಳು ಬೇಗನೆ ಈಡೇರಲಿ” ಎಂದು ತಾಯಿ ಪಿಲಿಚಾಮುಂಡಿಗೆ ಪ್ರಾರ್ಥಿಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಭಾರತೀಯ ಗೇಮಿಂಗ್ ಪ್ರಿಯರಿಗೆ ಶುಭಸುದ್ದಿ: ಮಾರುಕಟ್ಟೆಗೆ ಲಗ್ಗೆ ಇಟ್ಟ ಡೆಲ್‌ನ ಶಕ್ತಿಶಾಲಿ ಏಲಿಯನ್‌ವೇರ್ ಲ್ಯಾಪ್‌ಟಾಪ್‌ಗಳು

ಡೆಲ್ ಭಾರತದಲ್ಲಿ ಹೊಸ ಏಲಿಯನ್‌ವೇರ್ ಗೇಮಿಂಗ್ ಲ್ಯಾಪ್‌ಟಾಪ್‌ಗಳನ್ನು ಬಿಡುಗಡೆ ಮಾಡಿದೆ. ನೂತನ ಬೆಲೆ, ಡಿಸ್ಪ್ಲೇ ಮತ್ತು ಪ್ರೊಸೆಸರ್ ವೈಶಿಷ್ಟ್ಯಗಳ ವಿವರ ಇಲ್ಲಿದೆ.

ದಿನ ವಿಶೇಷ – ರಾಷ್ಟ್ರೀಯ ಧ್ವಜ ದತ್ತು ದಿನ

ಪ್ರತಿ ವರ್ಷ ಜುಲೈ 22 ರಂದು ಭಾರತದ ರಾಷ್ಟ್ರೀಯ ಧ್ವಜ ದತ್ತು ದಿನವನ್ನು ಆಚರಿಸಲಾಗುತ್ತದೆ. ತಿರಂಗಾ ಧ್ವಜದ ಇತಿಹಾಸ, ವಿನ್ಯಾಸ ಮತ್ತು ಮಹತ್ವದ ಸಂಪೂರ್ಣ ವಿವರ ಇಲ್ಲಿದೆ.

ಸೂಪರ್‌ಫುಡ್ ಪೀಚ್: ಪ್ರತಿದಿನ ಈ ಒಂದು ಹಣ್ಣು ತಿಂದರೆ ಹೃದಯ, ಕಣ್ಣುಗಳಿಗೆ ಎಷ್ಟು ಲಾಭ ಗೊತ್ತಾ?

ನಿತ್ಯ ಪೀಚ್ ಹಣ್ಣು ಸೇವಿಸುವುದರಿಂದ ಲಭಿಸುವ ಆರೋಗ್ಯಕಾರಿ ಲಾಭಗಳು, ರೋಗನಿರೋಧಕ ಶಕ್ತಿ, ಹೃದಯದ ಭದ್ರತೆ ಹಾಗೂ ಕಣ್ಣಿನ ದೃಷ್ಟಿ ಹೆಚ್ಚಿಸುವ ವಿವರ ಇಲ್ಲಿದೆ.

ತುಳುವ ಮಹಾಸಭೆ ಉಡುಪಿ ಅಧ್ಯಕ್ಷರಾಗಿ ಉದಯ ಕುಮಾರ್ ಹೆಗ್ಡೆ ಆಯ್ಕೆ

ತುಳುವ ಮಹಾಸಭೆ ಇಂಟರ್ನ್ಯಾಷನಲ್ ಉಡುಪಿ ಜಿಲ್ಲಾ ಅಧ್ಯಕ್ಷರಾಗಿ ಯರ್ಲಪಾಡಿ ಉದಯ ಕುಮಾರ್ ಹೆಗ್ಡೆ ಆಯ್ಕೆಯಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ