spot_img

ಸೈನ್ಯದ ಅವಹೇಳನ: ಬಿಜೆಪಿ ಸಚಿವರ ವಜಾ ಬೇಡಿಕೆ!

Date:

spot_img
spot_img

ಭಾರತೀಯ ಸೇನೆಯ ಅತ್ಯುನ್ನತ ಅಧಿಕಾರಿ ಕರ್ನಲ್ ಸೋಫಿಯಾ ಖುರೇಷಿಯವರನ್ನು ಉಗ್ರವಾದಿಗಳ ಸಹೋದರಿ ಎಂದ ಮದ್ಯಪ್ರದೇಶದ ಬಿಜೆಪಿ ಸಚಿವನ ಹೇಳಿಕೆಯ ವಿರುದ್ದ ಕಾರ್ಕಳ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಭಾನುಬಾಸ್ಕರ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಡೀ ದೇಶವೇ ಗೌರವಿಸುವ ಸೈನ್ಯದ ಅ‌ತ್ಯುನ್ನತ ಸ್ಥಾನದಲ್ಲಿರುವ ಮಹಿಳಾ ಸೇನಾ ಮುಖ್ಯಸ್ಥೆಯ ವಿರುದ್ದ ಇಂತಹ ಅವಹೇಳನಕಾರಿ ಹೇಳಿಕೆಯನ್ನು ನೀಡಿದ ಬಿಜೆಪಿ ಸಚಿವರನ್ನು ತಕ್ಷಣ ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಅವರು ಆಗ್ರಹಿಸಿದ್ದಾರೆ. ಭಾರತೀಯ ಸೇನಯು ಧರ್ಮ ನಿರಪೇಕ್ಷವಾಗಿ ದೇಶ ರಕ್ಷಣೆಯ ಕೆಲಸದಲ್ಲಿ ತೊಡಗಿದ್ದು ಶಿಸ್ತು ಸಂಯಮ ಮತ್ತು ಸೇನಾ ನ್ಯಾಯಕ್ಕೆ ವಿಶ್ವದಲ್ಲಿಯೇ ಅತ್ಯುತ್ತಮ ಹೆಸರು ಪಡೆದುಕೊಂಡಿದೆ. ಸೇನೆಯಲ್ಲಿ ಅನೇಕ ಜಾತಿ, ಸಮುದಾಯ, ಧರ್ಮ , ಪ್ರಾಂತವಾರು ಭೇದಭಾವ ಇಲ್ಲದೆ ಎಲ್ಲರೂ ಒಗ್ಗಟ್ಟಿನಿಂದ ದೇಶ ರಕ್ಷಣೆಯ ಕರ್ತವ್ಯ ನಿಭಾಯಿಸುತ್ತಿದ್ದಾರೆ, ಇಂತಾ ಸೇನೆಗೆ ಈ ಬಿಜೆಪಿ ನಾಯಕರು ಅವಹೇಳನಕಾರಿಯಾಗಿ ಮಾತನಾಡುವುದು ಅವರ ಕೊಳಕು ಮನಸ್ಥಿತಿಗೆ ಸಾಕ್ಷಿಯಾಗಿದೆ.

ಸ್ವತಃ ನಾನು ಸೇನೆಯ ಮಾಜಿ ಯೋಧನ ಪತ್ನಿಯಾಗಿ ಸೇನೆಯ ಯೋಧರ ಸುಖ ಕಷ್ಟಗಳ ಅರಿವು ನನಗಿದೆ. ತನ್ನ ಕುಟುಂಬವನ್ನು ತೊರೆದು ಸಾವಿರಾರು ಕಿಲೋಮೀಟರ್ ದೂರದಲ್ಲಿನ ದೇಶದ ಗಡಿಯಲ್ಲಿ ಜೀವದ ಹಂಗು ತೊರೆದು ದೇಶಕ್ಕಾಗಿ ಹೋರಾಡುವ ಸೈನ್ಯದ ಬಗ್ಗೆ ಬಿಜೆಪಿ ನಾಯಕ ಕೀಳುಮಟ್ಟದಲ್ಲಿ ನಾಲಿಗೆ ಹರಿಬಿಟ್ಟಿರುವುದು ಇದು ದೇಶದ ಸೈನ್ಯಕ್ಕೆ ಮಾಡಿದ ಅವಮಾನವಾಗಿದೆ.

ಗಾಂಧಿ ನೆಹರು ಅಂಬೇಡ್ಕರ್ ಮುಂತಾದ ರಾಷ್ಟ್ರ ನಾಯಕರನ್ನು ನಿರಂತರವಾಗಿ ಅವಹೇಳನ ಮಾಡುತ್ತಿದ್ದ ಬಿಜೆಪಿ ಈಗ ದೇಶದ ಸೈನಿಕರನ್ನೂ ಅವಹೇಳನ ಮಾಡುತ್ತಿದೆ, ಇವರಿಗೆ ದೇಶದ ಬಗ್ಗೆಯಾಗಲಿ ದೇಶ ಕಾಯುವ ಸೈನಿಕರ ಬಗ್ಗೆಯಾಗಲಿ ಯಾವುದೇ ಭಾವನೆಗಳು ಇಲ್ಲ, ಬಿಜೆಪಿಯವರಿಗೆ ಬೇಕಿರುವುದು ಕೇವಲ ಹಿಂದು ಮುಸ್ಲಿಮ್ ಹೆಸರಿನಿಂದ ದೇಶದ ವಿಭಜನೆ ಮಾತ್ರಾ. ಮಧ್ಯಪ್ರದೇಶದ ಸಚಿವನ ಹೇಳಿಕೆಯು ಇದು ಸಮಸ್ತ ಬಿಜೆಪಿ ಪಕ್ಷದವರ ಮನಸ್ಥಿತಿಯಾಗಿದೆ, ಬಿಜೆಪಿಯ ರಾಷ್ಟ್ರ ವಿರೋದಿ ಮನಸ್ಥಿತಿಯನ್ನು ಕಾಂಗ್ರೆಸ್ ಪಕ್ಷ ಗಂಭೀರವಾಗಿ ಪರಿಗಣಿಸಿ ಖಂಡಿಸುತ್ತದೆ ಎಂದು ಕಾರ್ಕಳ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಭಾನುಭಾಸ್ಕರ ಪೂಜಾರಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ‌.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಮಾಜಿ ಶಾಸಕ ಗೋಪಾಲ ಭಂಡಾರಿ ಪುತ್ರ ಸುದೀಪ್ ಭಂಡಾರಿ ನಿಧನಕ್ಕೆ ದಿನಕರ ಶೆಟ್ಟಿ ಪಳ್ಳಿ ಸಂತಾಪ

ಕಾರ್ಕಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ದಿ. ಗೋಪಾಲ ಭಂಡಾರಿ ಅವರ ಪುತ್ರ ಸುದೀಪ್ ಭಂಡಾರಿ (48) ಅವರ ಆತ್ಮಹತ್ಯೆಯ ದುರಂತ ಸಾವಿನ ವಿಷಯ ತಿಳಿದು ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಉಪಾಧ್ಯಕ್ಷರಾದ ದಿನಕರ ಶೆಟ್ಟಿ, ಪಳ್ಳಿ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

ಪಾಸ್‌ಪೋರ್ಟ್‌ ವಿಷಯಕ್ಕೆ ಜಗಳ: ಮಗಳ ಎದುರೇ ಹೆಂಡತಿಯನ್ನು ಗುಂಡಿಟ್ಟು ಕೊಂದ ಪತಿ

ಪಾಸ್‌ಪೋರ್ಟ್ ವಿಚಾರವಾಗಿ ನಡೆದ ಜಗಳದಲ್ಲಿ ಪತಿಯೋರ್ವ ತನ್ನ ಮಗಳ ಎದುರೇ ಪತ್ನಿಯನ್ನು ಗುಂಡಿಕ್ಕಿ ಕೊಂದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಮಂಗಳವಾರ (ಅ. 14) ಬೆಳಗ್ಗೆ ನಡೆದಿದೆ.

ಜಿಟೆಕ್ಸ್ ಗ್ಲೋಬಲ್ 2025: ವೀಸಾ ಉಲ್ಲಂಘನೆ ಪತ್ತೆಗೆ ಎ.ಐ. ಶಸ್ತ್ರ ಸಜ್ಜಿತ ಸ್ಮಾರ್ಟ್ ಕಾರುಗಳು – ದುಬೈಯಿಂದ ತಂತ್ರಜ್ಞಾನದ ಹೊಸ ದಾಪುಗಾಲು

ದುಬೈನಲ್ಲಿ ನಡೆಯುತ್ತಿರುವ ಜಗತ್ತಿನ ಅತಿದೊಡ್ಡ ತಂತ್ರಜ್ಞಾನ ಪ್ರದರ್ಶನವಾದ ಜಿಟೆಕ್ಸ್ ಗ್ಲೋಬಲ್ 2025 ಮತ್ತೊಮ್ಮೆ ವಿಶ್ವದ ಗಮನವನ್ನು ಸೆಳೆದಿದೆ

ಭಾರತದಲ್ಲಿ AI ಹಬ್‌: $15 ಬಿಲಿಯನ್ ಹೂಡಿಕೆಗೆ ಮುಂದಾದ ಗೂಗಲ್; ಪ್ರಧಾನಿ ಮೋದಿಗೆ ಮಾಹಿತಿ ನೀಡಿದ ಸುಂದರ್ ಪಿಚೈ

ಟೆಕ್ ದೈತ್ಯ ಗೂಗಲ್‌ ಸಂಸ್ಥೆಯ ಮುಖ್ಯಸ್ಥ ಸುಂದರ್ ಪಿಚೈ ಅವರು ಮಂಗಳವಾರ (ಅ. 14) ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕೃತಕ ಬುದ್ಧಿಮತ್ತೆ (AI) ಕುರಿತು ಮಹತ್ವದ ಮಾತುಕತೆ ನಡೆಸಿದರು.