
ಮೂಡುಬೆಳ್ಳೆ: ಶಿಕ್ಷಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಮೂಡುಬೆಳ್ಳೆಯ ಉಪಾಧ್ಯಾಯ ಕಲಾ ಪ್ರತಿಷ್ಠಾನವು ಇಬ್ಬರು ಹಿರಿಯ ಶಿಕ್ಷಕರನ್ನು ಅವರವರ ಮನೆಗೇ ಹೋಗಿ ಗೌರವಿಸಿತು. ಸಮಾಜದಲ್ಲಿ ಶಿಕ್ಷಕರು ಸಲ್ಲಿಸುತ್ತಿರುವ ಅಪ್ರತಿಮ ಸೇವೆ ಮತ್ತು ಅವರ ಕೊಡುಗೆಯನ್ನು ಸ್ಮರಿಸುವ ದೃಷ್ಟಿಯಿಂದ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಶಿಕ್ಷಣ ಕ್ಷೇತ್ರದಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಬೆಳ್ಳೆ ಹೈಸ್ಕೂಲಿನ ದೈಹಿಕ ಶಿಕ್ಷಕ ಇಮ್ಮಾನ್ವೆಲ್ ಕರ್ನೆಲಿಯೋ ದಂಪತಿಗಳು ಹಾಗೂ ಶಾರದಾ ರೆಸಿಡೆನ್ಸಿಯಲ್ ಸ್ಕೂಲ್‌ನಲ್ಲಿ ಶಿಕ್ಷಕರಾಗಿರುವ ಸುಬ್ರಹ್ಮಣ್ಯ ರಾವ್ ಅವರನ್ನು ಉಪಾಧ್ಯಾಯ ಕಲಾ ಪ್ರತಿಷ್ಠಾನದ ಸದಸ್ಯರು ಸನ್ಮಾನಿಸಿದರು.