ಮೂಡಬಿದಿರೆ: ಬೈಕ್‌ ಮತ್ತು ಕಾರು ಡಿಕ್ಕಿ – ಸವಾರ ಮೃತ್ಯು

Date:

spot_img

ಮೂಡಬಿದಿರೆ ತಾಲೂಕಿನ ತೋಡಾರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್‌ಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಸಿದ್ಧಕಟ್ಟೆ ನಿವಾಸಿಯಾದ ಮೇಸ್ತ್ರಿ ಕೆಲಸ ಮಾಡುತ್ತಿದ್ದ ಮೋಹನ್ ಗೌಡ (45) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಸಹಸವಾರ ನಾರಾಯಣ ಗೌಡ ಸಣ್ಣಪುಟ್ಟ ಗಾಯಗಳೊಂದಿಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮೋಹನ್ ಗೌಡ ಮತ್ತು ನಾರಾಯಣ ಗೌಡ ಮೂಡಬಿದಿರೆಯ ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಿ, ಮಿಜಾರು ಧೂಮಚಡವಿನಲ್ಲಿ ನಡೆಯುತ್ತಿದ್ದ ಮತ್ತೊಂದು ಮದುವೆಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

ಪಾಲಡ್ಕ ನಿವಾಸಿ ಹಾಗೂ ಮೂರನೇ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ಏರನ್ ಮಥಾಯಸ್ ಚಲಾಯಿಸುತ್ತಿದ್ದ ವ್ಯಾಗನ್ ಆರ್ ಕಾರು ರಸ್ತೆಯ ಬಲಭಾಗಕ್ಕೆ ಬಂದು ಬೈಕ್‌ಗೆ ಢಿಕ್ಕಿ ಹೊಡೆದಿರುವುದು ವರದಿಯಾಗಿದೆ. ಗಂಭೀರ ಗಾಯಗೊಂಡ ಮೋಹನ್ ಗೌಡ ಅವರನ್ನು ಮೂಡಬಿದಿರೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾರೆ.

ಮೂಡಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ರೆಡ್ಮಿ ಪ್ರಿಯರಿಗೆ ಭರ್ಜರಿ ಸುದ್ದಿ: ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಹೊಸ ‘ರೆಡ್ಮಿ ಟರ್ಬೊ 5’

ಭಾರತದಲ್ಲಿ ರೆಡ್ಮಿ ಟರ್ಬೊ 5 ಬಿಡುಗಡೆ ದಿನಾಂಕ ಸೋರಿಕೆ! ಜೂನ್ 16 ರಂದು ಅನಾವರಣಗೊಳ್ಳಲಿರುವ ಹೊಸ ಸ್ಮಾರ್ಟ್‌ಫೋನ್‌ನ ವೈಶಿಷ್ಟ್ಯಗಳ ವಿವರ ಇಲ್ಲಿದೆ.

ದಿನ ವಿಶೇಷ – ಆಕ್ರಮಣಶೀಲತೆಗೆ ಒಳಗಾದ ಮುಗ್ಧ ಮಕ್ಕಳ ಅಂತರರಾಷ್ಟ್ರೀಯ ದಿನ

ಜೂನ್ 4 ರಂದು ಆಚರಿಸಲಾಗುವ ಆಕ್ರಮಣಶೀಲತೆಗೆ ಒಳಗಾದ ಮುಗ್ಧ ಮಕ್ಕಳ ಅಂತರರಾಷ್ಟ್ರೀಯ ದಿನದ ಮಹತ್ವ, ಇತಿಹಾಸ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಯ ಕುರಿತಾದ ಮಾಹಿತಿ.

ಹಲಸಿನ ಹಣ್ಣು ತಿಂದ ಮೇಲೆ ಬೀಜ ಬಿಸಾಡ್ತೀರಾ? ತಡಿರಿ… ಅದರಲ್ಲಿದೆ ‘ಬಾದಾಮಿ’ಗಿಂತಲೂ ಹೆಚ್ಚಿನ ಶಕ್ತಿ

ಹಲಸಿನ ಹಣ್ಣಿನ ಬೀಜಗಳನ್ನು ಬಿಸಾಡುವ ಮುನ್ನ ಈ ಲೇಖನ ಓದಿ. ಇದರಲ್ಲಿರುವ ಪೋಷಕಾಂಶಗಳು ಮತ್ತು ಆರೋಗ್ಯದ ಲಾಭಗಳ ವಿವರ ಇಲ್ಲಿದೆ.

ಪೆರ್ಣಂಕಿಲ ದೇವಸ್ಥಾನದ ವ್ಯವಸ್ಥಾಪಕ ಸುರೇಶ್ ತಂತ್ರಿ ನಿಧನ

ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪಕ ಸುರೇಶ್ ತಂತ್ರಿಯವರು ದೈವಾಧೀನರಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ