ಮೂಡುಬಿದಿರೆ ಪಾಲಡ್ಕದಲ್ಲಿ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿಗೆ ಕತ್ತಿಯಿಂದ ಭೀಕರ ಹಲ್ಲೆ: ಮಹಿಳೆ ಸ್ಥಿತಿ ಗಂಭೀರ, ಆರೋಪಿ ಬಂಧನ

Date:

spot_img
shaukat ali11

ಮೂಡುಬಿದಿರೆ : ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ವರ್ಣಬೆಟ್ಟುವಿನಲ್ಲಿ ಯುವಕನೋರ್ವ ಮಹಿಳೆಯೊಬ್ಬರಿಗೆ ಕತ್ತಿಯಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಇಂದು (ಶನಿವಾರ) ನಡೆದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.

ಗಾಯಗೊಂಡ ಮಹಿಳೆಯನ್ನು ವರ್ಣಬೆಟ್ಟು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಕಾರ್ಯದರ್ಶಿ ಹಾಗೂ ಕೆರೆಕೋಡಿ ನಿವಾಸಿ ನವೀನ್ ಅವರ ಪತ್ನಿ ಸಂಜೀವಿ (ನಯನಾ ನಾಯ್ಕ್) ಎಂದು ಗುರುತಿಸಲಾಗಿದೆ. ಅವರ ತಲೆ, ಕೈ ಮತ್ತು ಕಾಲುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.

ರಾಮ್ ಮೋಹನ ನಗರ ನಿವಾಸಿ ರಾಜೇಶ್ ನಾಯ್ಕ್ ಎಂಬಾತನೇ ಈ ಕೃತ್ಯ ಎಸಗಿದ ಆರೋಪಿ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ. ಅವರು ಆರೋಪಿ ರಾಜೇಶ್ ನಾಯ್ಕ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಪ್ರಶ್ನೆಪತ್ರಿಕೆ ಸೋರಿಕೆ: ವಿದ್ಯಾರ್ಥಿಗಳ ಪರ ನಿಂತ ಸಲ್ಮಾನ್ ಖಾನ್

ದೇಶಾದ್ಯಂತ ಕಾವೇರಿದ ನೀಟ್ ಅಕ್ರಮ ಖಂಡನೆಯ ಪ್ರತಿಭಟನೆ. ವಿದ್ಯಾರ್ಥಿಗಳ ನ್ಯಾಯಯುತ ಹೋರಾಟಕ್ಕೆ ಹಿರಿಯ ನಟ ಸಲ್ಮಾನ್ ಖಾನ್ ಬೆಂಬಲ. ಪೂರ್ಣ ಮಾಹಿತಿ ಇಲ್ಲಿದೆ ಓದಿ

NEET ಅಕ್ರಮ: ಫಾಸ್ಟ್ ಟ್ರ್ಯಾಕ್ ಕೋರ್ಟ್ ಘೋಷಿಸಿದ ಪ್ರಧಾನಿ ಮೋದಿ

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪಿಸುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

‘ಕರಾವಳಿ’ ಡಬ್ಬಿಂಗ್ ವಿವಾದ: ನೋವು ತೋಡಿಕೊಂಡ ಪ್ರಜ್ವಲ್ ದೇವರಾಜ್

'ಕರಾವಳಿ' ಚಿತ್ರದಲ್ಲಿ ತಮ್ಮ ಧ್ವನಿ ಬಳಸದಿರುವ ಬಗ್ಗೆ ನಟ ಪ್ರಜ್ವಲ್ ದೇವರಾಜ್ ಮನಬಿಚ್ಚಿ ಮಾತನಾಡಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ನೀಟ್ ಪತ್ರಿಕೆ ಸೋರಿಕೆ: ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನೀಟ್ ಪ್ರಶ್ನೆಪತ್ರಿಕೆ ಅಕ್ರಮ ಪ್ರಕರಣದಲ್ಲಿ ಶಿಕ್ಷಣ ಸಚಿವರ ವಜಾ ಹಾಗೂ ವಿದ್ಯಾರ್ಥಿಗಳ ಕ್ಷಮೆಯಾಚನೆಗೆ ವಿಪಕ್ಷಗಳು ಪಟ್ಟು ಹಿಡಿದಿವೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.