
ನವದೆಹಲಿ: ಪಾಕಿಸ್ತಾನ ವಿರುದ್ಧ ಕಠಿಣ ಎಚ್ಚರಿಕೆಯ ಸಂದೇಶ ನೀಡುವಂತೆ, ಭಾರತೀಯ ನೌಕಾಪಡೆಯು ಇತಿಹಾಸದ ಪುಟವನ್ನು ಮತ್ತೆ ತಿರುಗಿಸಿರುವ ಮಹತ್ವದ ದಾಳಿ ನಡೆಸಿದೆ. INS ವಿಕ್ರಾಂತ್ ನಿಂದ ಉಡಾಯಿಸಲಾದ MIG-29 ಯುದ್ಧ ವಿಮಾನಗಳು ಪಾಕಿಸ್ಥಾನದ ಪ್ರಮುಖ ನೌಕಾ ನೆಲೆಯಾದ ಕರಾಚಿ ಬಂದರಿಗೆ ನೇರ ದಾಳಿ ನಡೆಸಿದ್ದು, ಈ ದಾಳಿ ಅರೇಬಿಯನ್ ಸಮುದ್ರದ ಮಾರ್ಗದಿಂದ ನಡೆದಿರುವುದು ಗಮನಾರ್ಹ.
1971ರ ಯುದ್ಧದ ನಂತರ ಇದೇ ಮೊದಲ ಬಾರಿಗೆ ಕರಾಚಿ ಬಂದರಿಗೇ ನೇರ ದಾಳಿ ನಡೆಸಿರುವ ಭಾರತದ ನೌಕಾಪಡೆಯು, ಪಾಕಿಸ್ತಾನದ ನೌಕಾ ಸಾಮರ್ಥ್ಯವನ್ನು ಪತ್ತೆ ಮಾಡದೇ ನಾಶಮಾಡಲು ಯಶಸ್ವಿಯಾಗಿದೆ. ಈ ದಾಳಿ ಪಾಕಿಸ್ತಾನಕ್ಕೆ ತೀವ್ರ ಆರ್ಥಿಕ ಮತ್ತು ರಕ್ಷಣಾತ್ಮಕ ನಷ್ಟ ಉಂಟುಮಾಡಿದಂತಾಗಿದೆ.
ಪಾಕ್ ವಾಯುಪಡೆಯ ಪ್ರತಿದಾಳಿ ಪ್ರಯತ್ನ ವಿಫಲ: ಎಸ್-400 ಯಂತ್ರದಿಂದ ತಡೆ
ಇದೇ ವೇಳೆ ಪಾಕಿಸ್ತಾನವು ಭಾರತದ ಜಮ್ಮು ಪ್ರದೇಶದ ಸೇನಾ ನೆಲೆಗಳ ಮೇಲೆ ಡ್ರೋನ್ ಮತ್ತು ಕ್ಷಿಪಣಿಗಳಿಂದ ದಾಳಿ ನಡೆಸಲು ಯತ್ನಿಸಿದೆ. ಆದರೆ ಭಾರತೀಯ ವಾಯುಪಡೆಯು ತಕ್ಷಣ ಎಚ್ಚರಿಕೆ ತಾಳಿದ್ದು, ಎಸ್-400 ಸ್ವಯಂಚಾಲಿತ ಕ್ಷಿಪಣಿ ನಿರೋಧಕ ವ್ಯವಸ್ಥೆ ಬಳಸಿಕೊಂಡು ಎಲ್ಲಾ ಶತ್ರು ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ತಡೆಯಲು ಯಶಸ್ವಿಯಾಗಿದೆ.
ಲಾಹೋರ್‌ನ ವಾಯು ರಕ್ಷಣಾ ವ್ಯವಸ್ಥೆಯ ಮೇಲೆ ಹಾರೋಪ್ ಡ್ರೋನ್ ದಾಳಿ
ಭಾರತ ತನ್ನ ಪ್ರತಿದಾಳಿ ಮುಂದುವರೆಸಿದ್ದು, ಪಾಕಿಸ್ತಾನದ ಲಾಹೋರ್ ನಗರದಲ್ಲಿರುವ ವಾಯು ರಕ್ಷಣಾ ವ್ಯವಸ್ಥೆಯ ಮೇಲೆ ಇಸ್ರೇಲ್ ಮೂಲದ ಹಾರೋಪ್ ಡ್ರೋನ್‌ಗಳಿಂದ ತೀವ್ರ ದಾಳಿ ನಡೆಸಿದೆ. ಕೆಲವೇ ನಿಮಿಷಗಳಲ್ಲಿ ಗುರಿಗೆ ತಲುಪಿದ ಡ್ರೋನ್‌ಗಳು ವಾಯು ರಕ್ಷಣಾ ಕೇಂದ್ರಗಳನ್ನು ಸಂಪೂರ್ಣ ನಾಶಪಡಿಸಿದೆ. ಲಾಹೋರ್, ಚಕ್ವಾಲ್, ಅಟ್ಟಾಕ್, ಬಹವಲ್‌ಪುರ್ ಸೇರಿದಂತೆ 16ಕ್ಕೂ ಹೆಚ್ಚು ಪಾಕಿಸ್ತಾನಿ ನಗರಗಳಲ್ಲಿ ಡ್ರೋನ್ ದಾಳಿಯ ನಂತರ ಭಾರೀ ಸ್ಫೋಟಗಳು ಸಂಭವಿಸಿದ್ದು, ಜನರಲ್ಲಿ ಭೀತಿ ಮನೆ ಮಾಡಿದೆ.
ಪಾಕ್ ಯುದ್ಧವಿಮಾನ ಪೈಲಟ್‌ಗಳು ಭಾರತೀಯ ವಶದಲ್ಲಿದ್ದಾರೆಯೇ ?
ಭಾರತೀಯ ಸೇನೆಯು ಪಾಕಿಸ್ತಾನದ ಎರಡು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿರುವ ಮಾಹಿತಿ ಲಭ್ಯವಾಗಿದ್ದು, ಅದರ ಪೈಲಟ್‌ಗಳು ಭಾರತೀಯ ಸೇನೆಯ ವಶಕ್ಕೆ ಸಿಕ್ಕಿರುವ ಸಾಧ್ಯತೆಗಳಿವೆ. ಈ ಪೈಲಟ್‌ಗಳನ್ನು ರಾಜಸ್ಥಾನದ ಜೈಸಲ್ಮೇರ್ ಹಾಗೂ ಜಮ್ಮುವಿನ ಅಖೂರಿನಲ್ಲಿ ವಶಪಡಿಸಿಕೊಂಡಿರುವುದಾಗಿ ಮೂಲಗಳು ಹೇಳಿವೆ. ಆದರೂ ಈ ಬಗ್ಗೆ ಅಧಿಕೃತ ದೃಢೀಕರಣ ಇನ್ನೂ ಬಾಕಿಯಿದೆ.