
ಹುಬ್ಬಳ್ಳಿಯಲ್ಲಿ 50 ವರ್ಷದ ವ್ಯಕ್ತಿ 18 ವರ್ಷದ ಯುವತಿಯನ್ನು ಮದುವೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕರೀಷ್ಮಾ (18) ಈಗ ಪ್ರಕಾಶ್ (50) ರವರನ್ನು ವಿವಾಹವಾಗಿರುವುದು ಪತ್ತೆಯಾಗಿದೆ.
ಪ್ರಕಾಶ್ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದವನಾಗಿದ್ದು, ಈಗಾಗಲೇ ವಿವಾಹಿತರಾಗಿದ್ದು, ಇಬ್ಬರು ಮಕ್ಕಳ ತಂದೆಯಾಗಿದ್ದ. ಆದರೆ, 18 ವರ್ಷದ ಕರೀಷ್ಮಾ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದನು. ಈ ಸಂಬಂಧ ಎರಡು ವರ್ಷಗಳ ಹಿಂದೆಯೇ ಯುವತಿಯ ಕುಟುಂಬದವರು ಆಕ್ಷೇಪ ವ್ಯಕ್ತಪಡಿಸಿ, ಅವನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣವೂ ದಾಖಲಾಗಿತ್ತು.
ಕರೀಷ್ಮಾಳ ಕುಟುಂಬದವರು ಆಕೆಯನ್ನು ಪ್ರೀತಿಯಿಂದ ದೂರ ಇರಿಸಲು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಇರುವ ಅಜ್ಜಿ ಮನೆಯಲ್ಲಿ ಇರಿಸಿದ್ದರು. ಆದರೆ, ಜನವರಿ 3ರಂದು ಕರೀಷ್ಮಾ ನಾಪತ್ತೆಯಾಗಿದ್ದಳು. ಅನಂತರ, ಇತ್ತೀಚೆಗೆ ಪ್ರಕಾಶ್ ಅವರ ವಿವಾಹದ ಫೋಟೋ ವಾಟ್ಸಪ್ ಸ್ಟೇಟಸ್‌ನಲ್ಲಿ ಹರಿದಾಡಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ.
ಈ ಬಗ್ಗೆ ಕರೀಷ್ಮಾಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, 50 ವರ್ಷದ ವ್ಯಕ್ತಿ ಅವರ ಮಗಳ ತಲೆಕೆಡಿಸಿ ಮದುವೆಯಾಗಿದ್ದಾನೆ ಎಂದು ಆರೋಪಿಸಿದ್ದಾರೆ.