
ಬೆಂಗಳೂರು: ಹಾಲು ಮತ್ತು ವಿದ್ಯುತ್ ದರ ಏರಿಕೆಯ ಬೆನ್ನಲ್ಲೇ, ಕರ್ನಾಟಕ ಸರ್ಕಾರ ಇದೀಗ ಡೀಸೆಲ್ ಮೇಲಿನ ತೆರಿಗೆಯನ್ನು ಶೇ 2.73 ರಷ್ಟು ಹೆಚ್ಚಳ ಮಾಡುವ ಆದೇಶ ಹೊರಡಿಸಿದೆ. ಈ ನಿರ್ಧಾರ ತಕ್ಷಣದಿಂದಲೇ ಜಾರಿಗೆ ಬರಲಿದೆ.
ಇದರ ಪರಿಣಾಮವಾಗಿ, ಡೀಸೆಲ್ ಬೆಲೆ ಲೀಟರ್ಗೆ 2 ರೂ. ಹೆಚ್ಚಾಗಲಿದ್ದು, ಈಗಿರುವ ಶೇ 18.44ರ ತೆರಿಗೆ ಶೇ 21.17ಕ್ಕೆ ಏರಿಕೆಯಾಗಿದೆ. ಸದ್ಯ ಬೆಂಗಳೂರಿನಲ್ಲಿ ಡೀಸೆಲ್ ಲೀಟರ್ಗೆ 88.99 ರೂ.ಗೆ ಮಾರಾಟವಾಗುತ್ತಿದೆ.