spot_img

ಉಡುಪಿಯಲ್ಲಿ ರಕ್ಷಣೆಗೊಳಗಾದ ಹೊರ ರಾಜ್ಯದ ಮಾನಸಿಕ ಅಸ್ವಸ್ಥ ಮಹಿಳೆ ಕುಟುಂಬಕ್ಕೆ ಹಸ್ತಾಂತರ

Date:

spot_img

ಉಡುಪಿ : ಭಾರಿ ಮಳೆಯ ನಡುವೆ ಉಡುಪಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಲೆದಾಡುತ್ತಿದ್ದ ಹೊರರಾಜ್ಯದ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರನ್ನು ವಿಶುಶೆಟ್ಟಿ ಅಂಬಲಪಾಡಿಯವರು ರಕ್ಷಿಸಿ, ಚಿಕಿತ್ಸೆ ಕೊಡಿಸಿ ರಾಜ್ಯ ಮಹಿಳಾ ನಿಲಯಕ್ಕೆ ದಾಖಲಿಸಿದ್ದರು. ಇದೀಗ ಆ ಮಹಿಳೆಯ ಸಂಬಂಧಿಕರು ಪತ್ತೆಯಾಗಿದ್ದು, ಅವರನ್ನು ಸುರಕ್ಷಿತವಾಗಿ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.

ರಕ್ಷಣೆಗೊಳಗಾದ ಮಹಿಳೆಯನ್ನು 40 ವರ್ಷ ವಯಸ್ಸಿನ ವೈಶಾಲಿ ಎಂದು ಗುರುತಿಸಲಾಗಿದೆ. ರಾತ್ರಿಯಿಂದ ಬೆಳಗಿನ ಜಾವದವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗೊಂದಲಮಯವಾಗಿ ಅಡ್ಡಾಡುತ್ತಿದ್ದ ವೈಶಾಲಿಯನ್ನು ರಕ್ಷಿಸಲು ವಿಶುಶೆಟ್ಟಿ ಅವರು ನಗರ ಠಾಣಾ ಪೊಲೀಸರ ಸಹಾಯದಿಂದ ಸಾಕಷ್ಟು ಶ್ರಮಿಸಬೇಕಾಯಿತು.

ರಕ್ಷಣೆಯ ಬಳಿಕ, ವೈಶಾಲಿಯನ್ನು ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಡಿಸಲಾಯಿತು. ಚಿಕಿತ್ಸೆಯ ನಂತರ ಮಹಿಳೆ ಶಾಂತವಾಗಿ ಸುಧಾರಣೆ ಕಾಣಲಾರಂಭಿಸಿದರು. ಸಂಬಂಧಿಕರು ಪತ್ತೆಯಾಗದ ಕಾರಣ, ವಿಶುಶೆಟ್ಟಿ ಅವರು ಚಿಕಿತ್ಸೆಯ ಬಳಿಕ ಅವರನ್ನು ರಾಜ್ಯ ಮಹಿಳಾ ನಿಲಯಕ್ಕೆ ದಾಖಲಿಸಿದ್ದರು. ನಿಲಯದ ಮುಖ್ಯಾಧಿಕಾರಿ ಶ್ರೀಮತಿ ಪುಷ್ಪರಾಣಿಯವರು ಮಹಿಳೆಯ ವಿಶ್ವಾಸ ಗಳಿಸಿ, ಆಕೆ ನೀಡಿದ ಮಾಹಿತಿಯ ಆಧಾರದ ಮೇಲೆ ಸಂಬಂಧಿಕರನ್ನು ಸಂಪರ್ಕಿಸುವಲ್ಲಿ ಯಶಸ್ವಿಯಾದರು. ಔರಂಗಾಬಾದ್ ಮೂಲದ ವೈಶಾಲಿ, ಮನೋರೋಗದಿಂದ ಬಳಲಿ ಉಡುಪಿಗೆ ಬಂದಿದ್ದರು ಮತ್ತು ಅವರ ಕಾಣೆಯಾದ ಬಗ್ಗೆ ಔರಂಗಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು.

“ಬೇರೆ ಬೇರೆ ಕಾರಣಗಳಿಂದ ಮನೋರೋಗಿಗಳಾಗಿ ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಜನರು ಬರುತ್ತಾರೆ. ಯಾರನ್ನೂ ನಿರ್ಲಕ್ಷಿಸಬಾರದು. ಸಾಧ್ಯವಾದರೆ ರಕ್ಷಿಸುವ ಕೆಲಸ ಮಾಡಿದರೆ ಎಷ್ಟೋ ಜನ ತಮ್ಮ ಕುಟುಂಬವನ್ನು ಸೇರಿರುವ ಉದಾಹರಣೆಗಳು ಬಹಳಷ್ಟಿವೆ. ಈ ಪ್ರಕರಣದಲ್ಲೂ ಕೂಡ ಮಹಿಳೆಯನ್ನು ಬಹಳ ಹರಸಾಹಸಪಟ್ಟು ರಕ್ಷಣೆ ಮಾಡಿದ್ದು, ಚಿಕಿತ್ಸೆ ಕೊಡಿಸಿದ ಬಳಿಕ ರಾಜ್ಯ ಮಹಿಳಾ ನಿಲಯದಿಂದ ಹಸ್ತಾಂತರವಾಗಿರುವುದು ಒಂದು ಉದಾಹರಣೆ. ಮಹಿಳೆಯನ್ನು ಹಸ್ತಾಂತರಿಸುವಲ್ಲಿ ಯಶಸ್ವಿಯಾದ ರಾಜ್ಯ ಮಹಿಳಾ ನಿಲಯದ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಧನ್ಯವಾದಗಳು,” ಎಂದು ವಿಶುಶೆಟ್ಟಿ ಅಂಬಲಪಾಡಿ ತಿಳಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಡಿಸಿಎಂ ಡಿಕೆ ಶಿವಕುಮಾರ್ ಬೆಂಗಾವಲು ವಾಹನ ಪಲ್ಟಿ; ಇಬ್ಬರಿಗೆ ಗಾಯ

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಬೆಂಗಾವಲು ವಾಹನ ಶನಿವಾರ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಪಲ್ಟಿಯಾಗಿ ಅದರಲ್ಲಿದ್ದ ಇಬ್ಬರು ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಹೆಬ್ರಿಯ ಮುಟ್ಲುಪಾಡಿಗೆ ಲಗ್ಗೆ ಇಟ್ಟ ಒಂಟಿ ಸಲಗ, ಕಂಗು-ಬಾಳೆ ತೋಟ ಧ್ವಂಸ!

ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಸಮೀಪವಿರುವ ಹೆಬ್ರಿ ತಾಲ್ಲೂಕಿನ ವರಂಗ ಗ್ರಾಮದ ಮುಟ್ಲುಪಾಡಿಯಲ್ಲಿ ಇದೀಗ ಆನೆಯ ಹಾವಳಿ ಶುರುವಾಗಿದೆ.

ಜಾಗತಿಕ AI ರೇಸ್‌ನಲ್ಲಿ ಸ್ವಿಟ್ಜರ್ಲೆಂಡ್: ಸಂಪೂರ್ಣ ಮುಕ್ತ-ಮೂಲ, ಬಹುಭಾಷಾ LLM ಬಿಡುಗಡೆಗೆ ಸಜ್ಜು

ಕೃತಕ ಬುದ್ಧಿಮತ್ತೆ (AI) ಪ್ರಾಬಲ್ಯಕ್ಕಾಗಿ ನಡೆಯುತ್ತಿರುವ ಜಾಗತಿಕ ಸ್ಪರ್ಧೆಯಲ್ಲಿ ಅಮೆರಿಕ ಮತ್ತು ಚೀನಾಗಳ ನಡುವಿನ ಪೈಪೋಟಿ ಮುಂಚೂಣಿಯಲ್ಲಿದ್ದರೂ, ಇದೀಗ ಸ್ವಿಟ್ಜರ್ಲೆಂಡ್ ಕೂಡ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮುತ್ತಿದೆ.

ಚಿಕ್ಕವನಿದ್ದಾಗಿನಿಂದಲೇ ಅಪರಾಧ: ಉದ್ಯಮಿಗಳಿಗೆ ವಂಚಿಸಿದ ರೋಶನ್ ಸಲ್ದಾನ್ಹಾ ಬಗ್ಗೆ ಸ್ಫೋಟಕ ಮಾಹಿತಿ

ಉದ್ಯಮಿಗಳಿಗೆ ಬಹುಕೋಟಿ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ರೋಶನ್ ಸಲ್ದಾನ್ಹಾ ಬಗ್ಗೆ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ.