
ಮಳೆಗಾಲದ ಆರಂಭದೊಂದಿಗೆ ಹಸಿ ಕಡಲೆಕಾಯಿಯ ಸದ್ದು ಎಲ್ಲೆಡೆ ಕೇಳಿಬರುತ್ತಿದೆ. ಇಂತಹ ಸಮಯದಲ್ಲಿ ಕಡಲೆ ಬೀಜ ಅಥವಾ ನೆಲಗಡಲೆಯಿಂದ ಆರೋಗ್ಯದ ಹಲವು ಮಹತ್ವಪೂರ್ಣ ಲಾಭಗಳನ್ನು ಪಡೆಯಬಹುದು. ವಿಶೇಷವಾಗಿ, ಕಡಲೆ ಬೀಜಗಳನ್ನು ನೀರಿನಲ್ಲಿ ನೆನೆಸಿ ಸೇವನೆ ಮಾಡಿದರೆ, ಶರೀರದ ವಿವಿಧ ಅಂಗಾಂಗಗಳಿಗೆ ಪ್ರಭಾವ ಬೀರುವಂತೆ ಆರೋಗ್ಯಕರ ಪರಿಣಾಮಗಳಿವೆ.
ಪೌಷ್ಠಿಕಾಂಶಗಳ ಪ್ಯಾಕೆಟ್:
ಕಡಲೆ ಬೀಜಗಳಲ್ಲಿ ವಿಟಮಿನ್ B1, B2, B6, ನಯಾಸಿನ್, ಫೋಲೇಟ್, ಪೊಟ್ಯಾಸಿಯಂ, ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಷಿಯಂ, ಪ್ರೋಟೀನ್, ನಾರಿನ ಅಂಶ ಮತ್ತು ಉತ್ತಮ ಕೊಬ್ಬಿನ ಅಂಶಗಳು ಸಮೃದ್ಧವಾಗಿವೆ. ಇದು ದೇಹದ ತಾಳಮೇಳ ಮತ್ತು ಪ್ರತಿರೋಧ ಶಕ್ತಿಗೆ ಸಹಕಾರಿಯಾಗುತ್ತದೆ.
ಹೃದಯ ಮತ್ತು ರಕ್ತನಾಳಗಳಿಗೆ ಬಲ:
ನೆನೆಸಿದ ಕಡಲೆ ಬೀಜಗಳಲ್ಲಿ ಹೃದಯ ಸ್ನೇಹಿ ಕೊಬ್ಬಿನ ಅಂಶವಿರುವುದರಿಂದ, ರಕ್ತನಾಳಗಳಲ್ಲಿ ಸುತ್ತುವ ರಕ್ತ ಪ್ರಮಾಣವನ್ನು ಸುಧಾರಿಸಲು ನೆರವಾಗುತ್ತದೆ. ಇದು ಹೃದಯಾಘಾತದ ಸಾಧ್ಯತೆ ಕಡಿಮೆ ಮಾಡಬಹುದು.
ಸೊಂಟ ನೋವಿಗೆ ಮನೆಮದ್ದು:
ಹಿರಿಯರ ಅನುಭವಕ್ಕೂ ಆರೋಗ್ಯ ತಜ್ಞರ ಸಲಹೆಗೂ ಅನುಗುಣವಾಗಿ, ಬೆಲ್ಲದ ಜೊತೆಗೆ ಕಡಲೆ ಬೀಜಗಳನ್ನು ಸೇವನೆ ಮಾಡಿದರೆ ಸೊಂಟ ನೋವಿಗೆ ಪರಿಹಾರ ದೊರೆಯುತ್ತದೆ.
ಕ್ಯಾನ್ಸರ್ ತಡೆಯುವ ಶಕ್ತಿ:
ವಾರದಲ್ಲಿ ಕನಿಷ್ಠ ಮೂರು ಬಾರಿ ನೆನೆಸಿದ ಕಡಲೆ ಬೀಜ ಸೇವಿಸಿದರೆ ಸ್ತನ ಕ್ಯಾನ್ಸರ್ ಸೇರಿದಂತೆ ಕೆಲವೊಂದು ಕ್ಯಾನ್ಸರ್‌ಗಳ ಅಪಾಯ ಶೇಕಡಾ 58ರಷ್ಟು ಕಡಿಮೆಯಾಗುತ್ತದೆ ಎಂಬ ಸಂಶೋಧನೆಗಳಿವೆ.
ತೂಕ ಇಳಿಸುವ ಪ್ರಯತ್ನದಲ್ಲಿ ಉತ್ತಮ ಆಯ್ಕೆ:
ಪ್ರೋಟೀನ್, ನಾರಿ ಹಾಗೂ ಕಡಿಮೆ ಕ್ಯಾಲೋರಿ ಅಂಶದಿಂದ ಕಡಲೆ ಬೀಜಗಳು ದೀರ್ಘಕಾಲ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ. ವ್ಯಾಯಾಮದ ಮುನ್ನ ಅಥವಾ ಬೆಳಿಗ್ಗೆ ಸೇವನೆ ಮಾಡಿದರೆ ದೇಹದಲ್ಲಿ ಶಕ್ತಿ ಇರುತ್ತದೆ ಮತ್ತು ಬಾಡಿ ಮೆಟಬೋಲಿಸಂ ಸುಧಾರಣೆಯಾಗುತ್ತದೆ.
ಜೀರ್ಣಕ್ರಿಯೆಗೆ ನೆರವು:
ನಾರಿನ ಅಂಶವು ಮಲಬದ್ಧತೆ ನಿವಾರಣೆಗೆ ಸಹಾಯ ಮಾಡುತ್ತದೆ. ದಿನವೂ 6-7 ನೆನೆಸಿದ ಕಡಲೆ ಬೀಜ ಸೇವಿಸುವುದರಿಂದ ಜೀರ್ಣಕ್ರಿಯೆಯಲ್ಲಿ ಸುಧಾರಣೆ ಕಾಣಬಹುದು.

ವೈವಿಧ್ಯಮಯ ಪೌಷ್ಟಿಕತೆ, ಹೃದಯ ಆರೋಗ್ಯದಿಂದ ಹಿಡಿದು ಕ್ಯಾನ್ಸರ್ ತಡೆಯುವವರೆಗಿನ ಪ್ರಯೋಜನಗಳಿರುವ ನೆಲಕಡಲೆ ಬೀಜವನ್ನು ದಿನನಿತ್ಯದ ಆಹಾರದಲ್ಲಿ ಸೇರಿಸಿ ಆರೋಗ್ಯವಂತರಾಗಿರೋಣ!