spot_img

ಮಾರಿಷಸ್ ಡೇ: 1968ರ ಮಾರ್ಚ್ 12ರಂದು ಪ್ರತ್ಯೇಕ ರಾಷ್ಟ್ರವಾಗಿ ಗುರುತಿಸಿಕೊಂಡ ದ್ವೀಪದ ಸಂಭ್ರಮ

Date:

spot_img

ಮಾರಿಷಸ್ ಡೇ

1968 ಮಾರ್ಚ್ 12ರಂದು ಬ್ರಿಟನ್ನ ಅಧಿಕಾರದ ತೆಕ್ಕೆಯಿಂದ ಮಾರಿಷಸ್ ಪ್ರತ್ಯೇಕ ರಾಷ್ಟ್ರವಾಗಿ ನಿರ್ಮಾಣಗೊಂಡಿತು. ಅಲ್ಲಿಂದ ಈ ದಿವಸವನ್ನು ಮಾರಿಷಸ್ ದಿನ ಎಂದು ಆಚರಿಸುತ್ತಾರೆ. ಆದರೆ ಈ ರಾಷ್ಟ್ರ ಭಾರತದೊಂದಿಗೆ ಇವತ್ತಿಗೂ ಪ್ರತ್ಯೇಕತೆಯನ್ನು ಬಯಸುತ್ತಿಲ್ಲ. ರಾಮಾಯಣ ಕಾಲದಿಂದಲೂ ಭಾರತಕ್ಕೂ ಈ ರಾಷ್ಟ್ರಕ್ಕೂ ಅವಿನಾಭಾವ ಸಂಬಂಧವಿದೆ. ತಾಟಕಾ ವಧೆಯ ಸಂದರ್ಭದಲ್ಲಿ ರಾಮನ ಬಾಣದಿಂದ ದ್ವೀಪಾಂತರಕ್ಕೆ ಎಸೆಯಲ್ಪಟ್ಟ ಮಾರೀಚ ಹೋಗಿ ಬಿದ್ದ ಕಾರಣದಿಂದ ಇವತ್ತು ಮಾರಿಷಸ್ ಎಂದು ಕರೆಯಲ್ಪಡುತ್ತದೆ ಎಂದು ಇತಿಹಾಸಕಾರರ ಅಭಿಪ್ರಾಯವಿದೆ. ಇದರ ಸತ್ಯಾಸತ್ಯತೆಯ ಬಗ್ಗೆ ಸಂಶಯವಿದೆ. ಆದರೆ ಅಲ್ಲಿಯ ಮನೋರಂಜನೆಯ ಕ್ರೀಡೆಗಳಲ್ಲಿ ಜಿಂಕೆ ಬೇಟೆಯು ಒಂದು ಎನ್ನುವುದು ಸತ್ಯ. ಹಾಗೆಯೇ ಅಲ್ಲಿರುವ 68 ಪ್ರತಿಶತಕ್ಕಿಂತಲೂ ಹೆಚ್ಚಿನವರು ಭಾರತೀಯ ಮೂಲದವರು. ಇದಕ್ಕೆ ಇಂಡೋ ಮಾರಿಷಸ್ ಎಂದು ಕೂಡ ಕರೆಯುತ್ತಾರೆ.ಮಾರ್ಕ್ ಟ್ವೈನ್ ಎನ್ನುವ ಲೇಖಕ ಒಂದು ಕಡೆ, ದೇವರಲ್ಲಿ ಹೇಳುತ್ತಾನೆ.ನೀನು ಮಾರಿಷಸ್ಸನ್ನು ಮೊದಲು ಸೃಷ್ಟಿಸಿ ಆಮೇಲೆ ಇದನ್ನು ಕಂಡು ಸ್ವರ್ಗವನ್ನು ಸೃಷ್ಟಿಸಿರಬೇಕು ಎನ್ನುವಷ್ಟರ ಮಟ್ಟಿಗೆ ಈ ದೇಶವನ್ನು ಮುಕ್ತ ಕಂಠದಿಂದ ಹೊಗಳಿದ್ದಾನೆ. ಸೌಂದರ್ಯಕ್ಕೆ ಹಾಗೂ ಚಿಕ್ಕವಾಗಿ ಚೊಕ್ಕವಾಗಿ ಪ್ರಪಂಚದಲ್ಲಿ ಗುರುತಿಸಲ್ಪಟ್ಟಿರುವ ಕೆಲವೇ ದೇಶಗಳಲ್ಲಿ ಇದೂ ಒಂದು.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ಸ್ನೇಹಿತರ ದಿನಾಚರಣೆ

ಈ ವಿಶೇಷ ದಿನವನ್ನು ಆಗಸ್ಟ್ 3ರಂದು (3/8) ಆಚರಿಸುವುದು ಸ್ನೇಹದ ಮಹತ್ವವನ್ನು ಗುರುತಿಸುವುದಕ್ಕಾಗಿ. ಇದು ನಮ್ಮ ಜೀವನದಲ್ಲಿ ಮಿತ್ರರೊಂದಿಗೆ ಹಂಚಿಕೊಳ್ಳುವ ಪ್ರೀತಿ, ನಂಬಿಕೆ ಮತ್ತು ಸಹಾನುಭೂತಿಯನ್ನು ಸ್ಮರಿಸುತ್ತದೆ.

ಕೊಲಂಬಿಯಾ ವಿಶ್ವವಿದ್ಯಾಲಯದ ಕೃತಕ ಮರಗಳ ತಂತ್ರಜ್ಞಾನ: ಹವಾಮಾನ ಬದಲಾವಣೆ ವಿರುದ್ಧದ ಹೊಸ ಅಸ್ತ್ರ?

ಜಾಗತಿಕ ತಾಪಮಾನ ಏರಿಕೆ ವಿರುದ್ಧ ಹೋರಾಡಲು, ಕೊಲಂಬಿಯಾ ವಿಶ್ವವಿದ್ಯಾಲಯದ ವಿಜ್ಞಾನಿ ಕ್ಲಾಸ್ ಲ್ಯಾಕ್ನರ್ ಅವರು "ಕೃತಕ ಮರ" ಎಂಬ ಕಲ್ಪನೆಯನ್ನು ರೂಪಿಸಿದರು.

ಕೂದಲಿನ ಆರೋಗ್ಯಕ್ಕೆ ಕರಿಬೇವು ಮತ್ತು ಕೊಬ್ಬರಿ ಎಣ್ಣೆಯ ಮ್ಯಾಜಿಕ್: ಪರಿಣಾಮಕಾರಿ ಮನೆಮದ್ದು ಇಲ್ಲಿದೆ

ಕೊಬ್ಬರಿ ಎಣ್ಣೆಗೆ ಕರಿಬೇವನ್ನು ಬೆರೆಸಿ ಬಳಸುವುದರಿಂದ ಕೂದಲು ಉದುರುವಿಕೆ ನಿಲ್ಲುತ್ತದೆ ಮತ್ತು ಕೂದಲು ದಟ್ಟವಾಗಿ, ಕಪ್ಪಾಗಿ, ವೇಗವಾಗಿ ಬೆಳೆಯುತ್ತದೆ.

ನಟಿ ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ಮೂವರು ಆರೋಪಿಗಳ ಬಂಧನ

ಸ್ಯಾಂಡಲ್‌ವುಡ್ ನಟಿ ರಮ್ಯಾ (ದಿವ್ಯ ಸ್ಪಂದನಾ) ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ ಮೂವರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.