ಉಡುಪಿ: ಉಡುಪಿಯ ಪ್ರಸಿದ್ಧ ಶಾರದಾ ಇಂಟರ್ನ್ಯಾಷನಲ್ ಹೋಟೆಲ್ ಹಿಂಭಾಗದ ಗಾರ್ಡನ್ ಏರಿಯಾದಲ್ಲಿ ನೆಡೆದ ಬೆಂಕಿ ಘಟನೆಯು ಸ್ಥಳೀಯರನ್ನು ದಿಗ್ಭ್ರಮೆಗೊಳಿಸಿದೆ. ಬೆಂಕಿಯು ಕೆಲವೇ ನಿಮಿಷಗಳಲ್ಲಿ ವ್ಯಾಪಕ ಪ್ರದೇಶವನ್ನು ಆವರಿಸಿತು. ಸ್ಥಳೀಯರು ತಮ್ಮಿಂದಾದಷ್ಟು ಪ್ರಯತ್ನಿಸಿದರೂ, ಬೆಂಕಿಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ.
ಬೆಂಕಿಯ ಭೀಕರ ಸ್ಥಿತಿಯನ್ನು ನೋಡಿದ ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಘಟನಾಸ್ಥಳಕ್ಕೆ 2 ಅಗ್ನಿಶಾಮಕ ವಾಹನಗಳು ತುರ್ತಾಗಿ ತಲುಪಿ, ಬೆಂಕಿಯನ್ನು ನಿಯಂತ್ರಿಸಲು ಕಾರ್ಯಾಚರಣೆ ನಡೆಸಿದೆ. ಪ್ರಸ್ತುತ ಬೆಂಕಿಯನ್ನು ನಂದಿಸಲು ಪ್ರಯತ್ನಗಳು ಮುಂದುವರೆದಿವೆ.
ಈ ಘಟನೆಯಿಂದ ಹೋಟೆಲ್ ಹಿಂಭಾಗದಲ್ಲಿರುವ ಮನೆಗಳು, ಅಂಗಡಿಗಳು ಮತ್ತು ಮುಂಗಟ್ಟುಗಳ ವಾರಸುದಾರರಲ್ಲಿ ಆತಂಕ ವ್ಯಾಪಿಸಿದೆ. ಅನೇಕರು ತಮ್ಮ ಆಸ್ತಿ ಮತ್ತು ಸುರಕ್ಷಿತೆಯ ಬಗ್ಗೆ ಚಿಂತಿತರಾಗಿದ್ದಾರೆ. ಬೆಂಕಿ ಸಂಭವಿಸಲು ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಅಧಿಕಾರಿಗಳು ಘಟನೆಯ ಹಿನ್ನೆಲೆಯನ್ನು ತನಿಖೆ ಮಾಡುತ್ತಿದ್ದಾರೆ.

