spot_img

ಬ್ರಹ್ಮಾವರ ಎಸ್.ಎಲ್.ಆರ್.ಎಮ್ ಘಟಕದಲ್ಲಿ ಭೀಕರ ಅಗ್ನಿ ಆಕಸ್ಮಿಕ

Date:

spot_img

ಬ್ರಹ್ಮಾವರ: ಬ್ರಹ್ಮಾವರ ಮಾರ್ಕೆಟ್ ಹತ್ತಿರದಲ್ಲಿರುವ ಎಸ್.ಎಲ್.ಆರ್.ಎಮ್ ಘಟಕದಲ್ಲಿ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ಆಕಸ್ಮಿಕದಿಂದ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾದ ಘಟನೆ ನಡೆದಿದೆ.

ಸೋಮವಾರ ರಾತ್ರಿ ಸುಮಾರು 1 ಗಂಟೆ ವೇಳೆಗೆ ಬೆಂಕಿ ತಗುಲಿರಬಹುದು ಎಂದು ಅಂದಾಜಿಸಲಾಗಿದ್ದು, ಇದಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟಕದೊಳಗೆ ಸಂಗ್ರಹಿಸಿದ್ದ ವಸ್ತುಗಳು ಸುಲಭವಾಗಿ ಬೆಂಕಿಗೆ ಆಹುತಿಯಾಗುವ ರೀತಿಯಲ್ಲಿದ್ದರಿಂದ ಕೆಲವೇ ನಿಮಿಷಗಳಲ್ಲಿ ಬೆಂಕಿ ವ್ಯಾಪಕವಾಗಿ ಹರಡಿತು. ಭಾರೀ ಹೊಗೆ ಆವರಿಸಿಕೊಂಡು ಪರಿಸರದಲ್ಲಿ ಭೀತಿ ಮೂಡಿಸಿತು.

ಘಟಕದ ಒಳಗೆ ನಿಲ್ಲಿಸಲಾಗಿದ್ದ ಮೂರು ಆಟೊಮೇಟೆಡ್ ಸ್ವೀಪರ್ (AS) ವಾಹನಗಳು, ಒಂದು ಪಿಕಪ್ ವಾಹನ, ಕಚೇರಿ ದಾಖಲೆಗಳು, ಎರಡು ಬೇಲಿಂಗ್ ಮೆಶಿನ್, ಒಂದು ಬರ್ನಿಂಗ್ ಮೆಶಿನ್, 6 ಸಿಸಿ ಕ್ಯಾಮರಾಗಳು, ಫೈಲ್‌ಗಳು, ಪುಸ್ತಕಗಳು ಸೇರಿದಂತೆ ಮೌಲ್ಯಯುತ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ. ಬೆಂಕಿ ಸಮೀಪದ ಗುಜರಿ ಅಂಗಡಿಗೂ ತಲುಪಿದ್ದು, ಅಲ್ಲಿಯೂ ಹಾನಿಯಾಗಿದೆ. ಮಮತಾ ಎಲೆಕ್ಟ್ರಿಕಲ್ಸ್ ಅಂಗಡಿಯ ಹೊರಗೆ ಇಡಲಾಗಿದ್ದ ಕೆಲ ಇಲೆಕ್ಟ್ರಾನಿಕ್ ವಸ್ತುಗಳು ಸಹ ಬೆಂಕಿಗೆ ತುತ್ತಾಗಿ ನಾಶವಾಗಿವೆ.

ಘಟನೆಯ ಮಾಹಿತಿ ಲಭಿಸುತ್ತಲೇ ಉಡುಪಿ, ಕುಂದಾಪುರ ಹಾಗೂ ಮಲ್ಪೆ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದರು. ಬೆಂಕಿಯ ತೀವ್ರತೆಯಿಂದಾಗಿ 6 ಗಂಟೆಗಳ ಕಾಲ ನಿರಂತರ ಹೋರಾಟ ನಡೆಸಿದರೂ ಸಂಪೂರ್ಣವಾಗಿ ನಂದಿಸಲು ಸಾಧ್ಯವಾಗಲಿಲ್ಲ. ಉಪ್ಪಿನಕೋಟೆಯ ಜೆಎಂಜೆ ಟ್ಯಾಂಕರ್ ನವರು ಅಗ್ನಿಶಾಮಕ ವಾಹನಗಳಿಗೆ ಸುಮಾರು 15 ಟ್ಯಾಂಕರ್ ನೀರು ಒದಗಿಸಿದರು. ಇದರಿಂದಾಗಿ ಬೆಂಕಿಯು ಸಾಲುಸಾಲು ಅಂಗಡಿಗಳಿಗೆ ವ್ಯಾಪಿಸುವುದನ್ನು ತಡೆಯುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾದರು.

ಎ ಅಕ್ಷತಾ ಪುಸ್ತಕ ಭಂಡಾರದ ಸಿಬ್ಬಂದಿ ಬೆಂಕಿ ತಗುಲಿರುವುದನ್ನು ಗಮನಿಸಿ ಬ್ರಹ್ಮಾವರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಪೊಲೀಸರು ಅಗ್ನಿಶಾಮಕ ಘಟಕಕ್ಕೆ ಮಾಹಿತಿ ನೀಡಿ ಕಾರ್ಯಾಚರಣೆ ಆರಂಭಿಸಿದರು. ಘಟನೆಯಲ್ಲಿ ಹಾನಿಯ ಪ್ರಮಾಣ ದೊಡ್ಡದಾದರೂ ಯಾವುದೇ ಪ್ರಾಣಹಾನಿ ಸಂಭವಿಸದಿರುವುದು ಸಾಕಷ್ಟು ನಿರಾಳತೆಯ ಸಂಗತಿ.

ಅಗ್ನಿ ಆಕಸ್ಮಿಕದ ನಿಖರ ಕಾರಣ ಪತ್ತೆ ಮಾಡಲು ಘಟಕದೊಳಗಿದ್ದ DVR (Digital Video Recorder) ಪರಿಶೀಲಿಸಬೇಕಾಗಿದೆ. ಪೊಲೀಸರು ಡಿವಿಆರ್ ಅನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಬೆಂಕಿಯು ಎಂತಹ ಕಾರಣದಿಂದ ಉಂಟಾಗಿದೆ ಎಂಬ ಬಗ್ಗೆ ಇನ್ನೂ ಖಚಿತ ಮಾಹಿತಿ ಸಿಕ್ಕಿಲ್ಲ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅವರೊಂದಿಗೆ ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿ, ವಾರಂಬಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ನಿತ್ಯಾನಂದ ಬಿ.ಆರ್, ಗ್ರಾಮ ಪಂಚಾಯತ್ ಸದಸ್ಯರಾದ ನಿರಂಜನ್ ಶೆಟ್ಟಿ, ದೇವಾನಂದ ನಾಯಕ್, ಸರ್ಕಲ್ ಇನ್ಸ್‌ಪೆಕ್ಟರ್ ದಿವಾಕರ, ಪಿಎಸ್‌ಐ ರಾಘವೇಂದ್ರ, ಎಎಸ್‌ಐ ಶಾಂತರಾಜ್, ನಾರಾಯಣ ಗೌಡ, ಗೃಹ ರಕ್ಷಕ ದಳದ ಪಿಎಲ್ ಸಿ ಸ್ಟೀವನ್ ಪ್ರಕಾಶ್ ಲೂವಿಸ್, ಎಸ್.ಎಲ್.ಆರ್.ಎಮ್ ಘಟಕದ ಮೇಲ್ವಿಚಾರಕ ಸಂತೋಷ್, ಗ್ರಾಮ ಪಂಚಾಯತ್ ಕಾರ್ಯದರ್ಶಿ ಶೇಖರ್ ನಾಯ್ಕ್, ಸಾಮಾಜಿಕ ಕಾರ್ಯಕರ್ತ ಅಜ್ಮಲ್ ಅಸಾದಿ ಸೇರಿ ಅನೇಕರು ಬೆಂಕಿ ನಂದಿಸಲು ಸಹಕರಿಸಿದರು.

ಸ್ಥಳದಲ್ಲಿ ಅಗ್ನಿಶಾಮಕ ಇಲಾಖೆಯ ಹಿರಿಯ ಅಧಿಕಾರಿಗಳಾದ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಿನಾಯಕ ಕಲ್ಗುಟಕರ್, ಕುಂದಾಪುರ ಅಗ್ನಿಶಾಮಕ ಠಾಣಾಧಿಕಾರಿ ವಿ.ಸುಂದರ್, ಮಲ್ಪೆ ಅಗ್ನಿಶಾಮಕ ಠಾಣಾಧಿಕಾರಿ ಮಹಮ್ಮದ್ ಶಫಿ ಸೇರಿದಂತೆ ಸಿಬ್ಬಂದಿಗಳು ಹರಸಾಹಸಪಟ್ಟರು. ಸ್ಥಳೀಯರು ಕೂಡ ಬೆಂಕಿ ನಂದಿಸುವ ಕಾರ್ಯದಲ್ಲಿ ಭಾಗಿಯಾಗಿ ನೆರವಾದರು.

ಈ ಘಟನೆ ವ್ಯಾಪಾರಸ್ಥರು, ಸ್ಥಳೀಯರು ಹಾಗೂ ಸಿಬ್ಬಂದಿಗಳಲ್ಲಿ ಭೀತಿ ಉಂಟುಮಾಡಿದ್ದು, ಸಾಕಷ್ಟು ಆರ್ಥಿಕ ನಷ್ಟ ಉಂಟಾಗಿದೆ. ಬೆಂಕಿ ತಗುಲಲು ನಿಖರ ಕಾರಣ ಏನೆಂಬುದು ತನಿಖೆಯಿಂದ ಮಾತ್ರ ಸ್ಪಷ್ಟವಾಗಲಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕೆಜಿಎಫ್ ಬಾಬು ಮನೆಗೆ R.T.O ದಾಳಿ: ಐಷಾರಾಮಿ ಕಾರುಗಳ ತೆರಿಗೆ ಪರಿಶೀಲನೆ!

ರಾಜಕೀಯ ಮುಖಂಡ ಕೆಜಿಎಫ್ ಬಾಬು ಅವರ ಮನೆಗೆ ಇಂದು ಬೆಳ್ಳಂಬೆಳಗ್ಗೆ ಆರ್ಟಿಓ ಅಧಿಕಾರಿಗಳು ದಾಳಿ ನಡೆಸಿ ಶಾಕ್ ನೀಡಿದ್ದಾರೆ. ಐಷಾರಾಮಿ ಕಾರುಗಳ ತೆರಿಗೆ ಪಾವತಿ ಕುರಿತು ಪರಿಶೀಲನೆ ನಡೆಸಲು ಈ ದಾಳಿ ನಡೆಸಲಾಗಿದೆ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಾತ್ಸಲ್ಯ ವಿದ್ಯಾನಿಧಿ ವಿತರಣಾ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್, ಉಡುಪಿ ಯೋಜನಾ ಕಚೇರಿಯಲ್ಲಿ ವಾತ್ಸಲ್ಯ ವಿದ್ಯಾನಿಧಿ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಪರಿಸರ ಸಂರಕ್ಷಣೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅತ್ರಾಡಿಯಲ್ಲಿ ಗಿಡನಾಟಿ ಮತ್ತು ಮಾಹಿತಿ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ .ಸಿ.ಟ್ರಸ್ಟ್ (ರಿ) ಉಡುಪಿ ತಾಲೂಕು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಮಣಿಪಾಲ ವಲಯ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅತ್ರಾಡಿ ಇವರ ಸಹಯೋಗದೊಂದಿಗೆ ಗಿಡ ನಾಟಿ ಹಾಗೂ ಪರಿಸರ ಮಾಹಿತಿ ಕಾರ್ಯಕ್ರಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆತ್ರಾಡಿಯಲ್ಲಿ ನಡೆಯಿತು.

ದಿನ ವಿಶೇಷ – ಆದಾಯ ತೆರಿಗೆ ದಿನ

ಇದು ದೇಶದ ಪ್ರಗತಿ ಮತ್ತು ಅಭಿವೃದ್ಧಿಗಾಗಿ ಪ್ರತಿಯೊಬ್ಬ ನಾಗರಿಕನೂ ಪಾವತಿಸುವ ತೆರಿಗೆಯ ಮಹತ್ವವನ್ನು ನೆನಪಿಸುವ ಒಂದು ಪ್ರಮುಖ ದಿನವಾಗಿದೆ.