spot_img

ತಂದೆಯ ಶವದ ಮುಂದೆ ಪ್ರೀತಿಸಿದ ಹುಡುಗಿಯೊಂದಿಗೆ ಮದುವೆ: ಕಡಲೂರಿನಲ್ಲಿ ಅಚ್ಚರಿಯ ಘಟನೆ!

Date:

spot_img

ಕಡಲೂರು (ತಮಿಳುನಾಡು): ತಂದೆಯ ಆಶೀರ್ವಾದ ಪಡೆಯುವ ನಿಟ್ಟಿನಲ್ಲಿ, ತಂದೆಯ ಶವದ ಮುಂದೆ ತಾನೆ ಪ್ರೀತಿಸಿದ್ದ ಯುವತಿಗೆ ತಾಳಿ ಕಟ್ಟಿದ ಅಪರೂಪದ ಘಟನೆ ತಮಿಳುನಾಡಿನಲ್ಲಿ ಬೆಳಕಿಗೆ ಬಂದಿದೆ.

ಕವನ ಗ್ರಾಮ ನಿವಾಸಿ ಹಾಗೂ ರೈಲ್ವೆ ಇಲಾಖೆಯಿಂದ ನಿವೃತ್ತರಾಗಿದ್ದ ಸೆಲ್ವರಾಜ್ ಅವರು ಅನಾರೋಗ್ಯದಿಂದ ಬುಧವಾರ ರಾತ್ರಿ ನಿಧನರಾಗಿದ್ದರು. ಅವರ ಮಗ ಅಪ್ಪು, ವಿರುದಾಚಲಂ ಕೌಂಜಿಯಪ್ಪ ಸರ್ಕಾರಿ ಪದವಿ ಕಾಲೇಜಿನಲ್ಲಿ ಓದುತ್ತಿದ್ದು, ವಿಜಯಶಾಂತಿ ಎಂಬ ಸಹಪಾಠಿಯನ್ನು ಪ್ರೀತಿಸುತ್ತಿದ್ದ.

ಇಬ್ಬರೂ ಮುಂದೆ ಸ್ಥಿರ ಜೀವನ ಕಟ್ಟಿಕೊಂಡ ಬಳಿಕ ಮದುವೆಯಾಗೋ ನಿರ್ಧಾರದಲ್ಲಿದ್ದರು. ಅಷ್ಟರಲ್ಲಿ ತಂದೆ ಸೆಲ್ವರಾಜ್ ಮೃತ ಪಟ್ಟಿದ್ದರು. ಆದರೆ ತಂದೆಯ ಮೃತದೇಹದ ಮುಂದೆ ಅವರ ಆಶೀರ್ವಾದವನ್ನು ಪಡೆಯಬೇಕೆಂಬ ಉದ್ದೇಶದಿಂದ, ಅಪ್ಪು ವಿಜಯಶಾಂತಿಯ ಒಪ್ಪಿಗೆಯೊಂದಿಗೆ ಸ್ಥಳದಲ್ಲಿಯೇ ಮದುವೆಯಾಗಿದ. ಈ ಘಟನೆ ಸಂದರ್ಭ, ಅಪ್ಪು ಅವರ ತಾಯಿ, ಸಂಬಂಧಿಕರು ಹಾಗೂ ಗ್ರಾಮಸ್ಥರು ಚಿಂತೆಮಿಶ್ರಿತ ಮನಸ್ಥಿತಿಯಲ್ಲಿದ್ದರೂ ಶಾಂತಿ ಕಾಯ್ದುಕೊಂಡಿದ್ದರು.

ಮದುವೆಗೆ ಹುಡುಗಿಯ ಪರಿವಾರದಿಂದ ಯಾರೂ ಹಾಜರಾಗಿಲ್ಲ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹೆಬ್ರಿಯ ಸುವರ್ಣ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹೆಬ್ರಿಯ ಸುವರ್ಣ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಜನಾರ್ಧನ್ ಎಚ್ ರವರ ಅಧ್ಯಕ್ಷತೆಯಲ್ಲಿ ಜರುಗಿತು.

ಧರ್ಮಸ್ಥಳ ಪ್ರಕರಣ : ರಾಜ್ಯ ಮಹಿಳಾ ಆಯೋಗದಿಂದ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಕಮಿಷನರ್ ಗೆ ಪತ್ರ

ರಾಜ್ಯಾದ್ಯಂತ ಗಮನ ಸೆಳೆದಿದ್ದ ಧರ್ಮಸ್ಥಳದಲ್ಲಿ ಶವಗಳನ್ನು ಹೂತಿರುವ ಪ್ರಕರಣದ ತನಿಖೆ ಅಂತಿಮ ಹಂತದಲ್ಲಿರುವಾಗಲೇ, ರಾಜ್ಯ ಮಹಿಳಾ ಆಯೋಗವು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಕಮಿಷನರ್ ಅವರಿಗೆ ಪತ್ರ ಬರೆದಿದೆ.

ಬೆಳ್ತಂಗಡಿ: ನಕಲಿ ನಂಬರ್ ಪ್ಲೇಟ್ ಕಾರಿನಲ್ಲಿ ಅಕ್ರಮ ಗೋ ಸಾಗಾಟ; ಓರ್ವನ ಬಂಧನ

ನಕಲಿ ನಂಬರ್ ಪ್ಲೇಟ್ ಅಳವಡಿಸಿದ ಕಾರಿನಲ್ಲಿ ಮೂರು ದನಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಕರಣ ಗುರುವಾಯನಕೆರೆಯಲ್ಲಿ ಬೆಳಕಿಗೆ ಬಂದಿದೆ.

ಉಡುಪಿ ಶ್ರೀ ಕೃಷ್ಣಮಠದಲ್ಲಿ ಚಾಂದ್ರ ಶ್ರೀಕೃಷ್ಣಾಷ್ಟಮಿ ಸರಳ ಆಚರಣೆ

ಚಾಂದ್ರ ಶ್ರೀಕೃಷ್ಣಾಷ್ಟಮಿಯ ಅಂಗವಾಗಿ ಇಂದು ಉಡುಪಿಯ ಶ್ರೀ ಕೃಷ್ಣಮಠದಲ್ಲಿ ಸಾಮೂಹಿಕವಾಗಿ ಶ್ರೀ ಕೃಷ್ಣ ಮಂತ್ರ ಜಪ ಪಠನ ಹಾಗೂ ಭೋಜನ ಪ್ರಸಾದ ವಿತರಣೆಯು ಸರಳವಾಗಿ ನಡೆಯಲಿದೆ.