spot_img

ಮಣಿಪಾಲ ಜ್ಞಾನಸುಧಾ : ಶಿಕ್ಷಕರ ದಿನಾಚರಣೆ

Date:

ಗೌರವಿಸುವ ಸಂಸ್ಕೃತಿಗೆ ಜ್ಞಾನಸುಧಾ ಆದರ್ಶ ಪ್ರಾಯ : ಶ್ಯಾಮಲ ಕುಂದ‌ರ್

ಜ್ಞಾನಸುಧಾ : ವಿದ್ಯಾರ್ಥಿ ಎಂಬ ನಾಣ್ಯ ಬಹುಮೂಲ್ಯವಾಗಲು ಶಿಕ್ಷಕರು ಮತ್ತು ಪೋಷಕರೆಂಬ ಎರಡು ಮುಖಗಳ ಪಾತ್ರ ಬಹುಮುಖ್ಯ. ಕನಸು ಹೊತ್ತ ವಿದ್ಯಾರ್ಥಿಗಳನ್ನು ಪೋಷಿಸುವ ಪೋಷಕರು, ವಿದ್ಯಾಭ್ಯಾಸ ನೀಡುವ ಶಿಕ್ಷಕರನ್ನು ನಾವು ಗೌರವಿಸಬೇಕು. ಈ ನಿಟ್ಟಿನಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಕಾರ್ಯ ಮೆಚ್ಚುವಂತಹದ್ದು. ಶಿಕ್ಷಣದ ಜೊತೆಜೊತೆಗೆ ಸಂಸ್ಕಾರ, ದೇಶಭಕ್ತಿ, ಮೌಲ್ಯಯುತ ಶಿಕ್ಷಣಕ್ಕೂ ಪ್ರಾಶಸ್ತ್ಯ ಕೊಡುತ್ತಿರುವುದು ಆದರ್ಶಪ್ರಾಯ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯರಾದ ಶ್ರೀಮತಿ ಶ್ಯಾಮಲಾ ಎಸ್ ಕುಂದರ್ ಹೇಳಿದ್ದಾರೆ. ಅವರು ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ವಿದ್ಯಾನಗರದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಬ್ರಹ್ಮಾವರ ಸರಕಾರಿ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ ಸಂಜೀವ ಶೆಟ್ಟಿ ಕೊರ್ಗಿ, ಬಿ.ಎಮ್.ಎಮ್. ಪ್ರೌಢಶಾಲೆ ಕೂರಾಡಿಯ ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ ಎಸ್ ಮೂರ್ತಿ ರಾವ್, ವಿಷ್ಣು ಮೂರ್ತಿ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ ಅನಂತ ಪದ್ಮನಾಭ ಭಟ್, ಪಂಚನಬೆಟ್ಟು ವಿದ್ಯಾವರ್ಧಕ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ ರಮೇಶ್ ಶೇರ್ವೆಗಾರ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ ರಮೇಶ್ ಶೇರ್ವೆಗಾರ್ ಮಾತನಾಡಿ ಜ್ಞಾನಸುಧಾ ಶೈಕ್ಷಣಿಕ ಸಾಧನೆಗಳನ್ನು ಶ್ಲಾಘಿಸಿದರು. ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀ ಸಂಜೀವ ಶೆಟ್ಟಿ ಕೊರ್ಗಿ ತಮ್ಮ ಶಿಕ್ಷಕ ವೃತ್ತಿಯ ಅನುಭವ ಹಂಚಿಕೊಂಡರು. ಮಣಿಪಾಲ ಜ್ಞಾನಸುಧಾ ಪ್ರಾಂಶುಪಾಲರಾದ ಶ್ರೀ ಗಣೇಶ್ ಶೆಟ್ಟಿ ಸ್ವಾಗತಿಸಿದರು. ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಮತಿ ಜ್ಯೋತಿ ಪದ್ಮನಾಭ ಬಂಡಿ ವೇದಿಕೆಯಲ್ಲಿದ್ದರು. ಮಣಿಪಾಲ ಜ್ಞಾನಸುಧಾ ಉಪಪ್ರಾಂಶುಪಾಲರಾದ ಶ್ರೀ ರವಿ ಜಿ ಮತ್ತು ಶ್ರೀ ಹೇಮಂತ, ಉಪನ್ಯಾಸಕ ಬಳಗ ಉಪಸ್ಥಿತರಿದ್ದರು. ಗಣಿತ ಶಾಸ್ತ್ರ ಉಪನ್ಯಾಸಕಿ ಕುಮಾರಿ ನಕ್ಷಾ ಕಲ್ಕೂರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ರಿಯಲ್‌ಮಿ ನಿಯೋ 7 ಟರ್ಬೋ AI ಬಿಡುಗಡೆ: ಗೇಮರ್‌ಗಳಿಗಾಗಿ ಮೀಡಿಯಾಟೆಕ್ ಡೈಮನ್ಸಿಟಿ 9400e ಪ್ರೊಸೆಸರ್‌ನ ಫೋನ್

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನ ಗೇಮಿಂಗ್ ಮತ್ತು ಬ್ಯಾಟರಿ-ಕೇಂದ್ರಿತ ಫೋನ್‌ಗಳಿಂದ ಹೆಸರುವಾಸಿಯಾಗಿರುವ ರಿಯಲ್ಮಿ, ಈಗ ತನ್ನ ನಿಯೋ ಸರಣಿಗೆ ಹೊಸ ಸೇರ್ಪಡೆಯನ್ನು ಮಾಡಿದೆ.

ಪೆರ್ಡೂರು: ಶಾಲಾ ಬಸ್ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ – ಮತ್ತೊಬ್ಬನಿಗೆ ಗಂಭೀರ ಗಾಯ

ಪೆರ್ಡೂರು ಗ್ರಾಮದ ಕೊಳಂಬೆ ಕ್ರಾಸ್ ಬಳಿ ಶಾಲಾ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಸಹಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ನಡೆದಿದೆ.

ಉಡುಪಿ ರಸ್ತೆ ಅಪಘಾತ: ಬೈಕ್ ಸ್ಕಿಡ್ ಆಗಿ ಯುವಕನ ದುರ್ಮರಣ, ಸಹಸವಾರ ಗಂಭೀರ

ಬೈಕ್ ಸ್ಕಿಡ್ ಆಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸಹಸವಾರ ಸಾವನ್ನಪ್ಪಿದ್ದು, ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ.

ಮಧುಮೇಹ ಮತ್ತು ಬೊಜ್ಜು ನಿಯಂತ್ರಣಕ್ಕೆ ದಾಸವಾಳ: ಪ್ರಕೃತಿಯ ವರದಾನ

ದಾಸವಾಳದ ಎಲೆಗಳು, ಹೂವುಗಳು ಮತ್ತು ಬೇರುಗಳು ವೈವಿಧ್ಯಮಯ ಪೋಷಕಾಂಶಗಳು ಮತ್ತು ಜೈವಿಕ ಸಕ್ರಿಯ ಸಂಯುಕ್ತಗಳಿಂದ ಸಮೃದ್ಧವಾಗಿವೆ.