
ಮಣಿಪಾಲ : ಆನ್‌ಲೈನ್‌ನಲ್ಲಿ ಹೋಟೆಲ್ ಬುಕ್ಕಿಂಗ್ ಮಾಡಿಸುತ್ತೇವೆ ಎಂಬ ನೆಪದಲ್ಲಿ ವಂಚನೆ ನಡೆದಿರುವ ಘಟನೆ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಮೃದುಲಾ ಜಿ ಶೇಟ್ (46) ಎಂಬವರು ಫೆಬ್ರವರಿ 12 ರಂದು ಈ ವಂಚನೆಗೆ ಬಲಿಯಾಗಿದ್ದಾರೆ.
ಮೃದುಲಾ ಅವರು ಇಂಟರ್ನೆಟ್‌ನಲ್ಲಿ ಹೋಟೆಲ್ ಬುಕ್ ಮಾಡಲು ಪ್ರಯತ್ನಿಸುತ್ತಿದ್ದಾಗ, ತುಶಾರ್ ಮೌರ್ಯ ಎಂಬಾತ ವಾಟ್ಸಾಪ್ ಮೂಲಕ ಸಂಪರ್ಕಿಸಿ, ಒಂದು ಕೋಡ್ ಮೂಲಕ ಪಾವತಿ ಮಾಡಬೇಕು ಎಂದು ತಿಳಿಸಿದ್ದ. ಅದರನ್ವಯ, ಮೃದುಲಾ ತಮ್ಮ ಬ್ಯಾಂಕ್ ಖಾತೆಯಿಂದ ₹20,000 ಪಾವತಿಸಿದ್ದರು. ನಂತರ ತಮ್ಮ ಮಗನ ಖಾತೆಯಿಂದ ಕೂಡ ₹6,000 ಪಾವತಿ ಮಾಡಿಸಿದ್ದರು.
ಆದರೆ ಬುಕಿಂಗ್ ಖಾತರಿ ಆಗದೆ, ಯಾರಿಂದಲೂ ಪ್ರತಿಕ್ರಿಯೆ ದೊರಕದ ಹಿನ್ನೆಲೆಯಲ್ಲಿ ಮೃದುಲಾ ಅವರಿಗೆ ಇದು ವಂಚನೆ ಎಂಬುದು ಸ್ಪಷ್ಟವಾಗಿದೆ. ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಸೈಬರ್ ಕ್ರೈಂದಡಿ ದೂರು ದಾಖಲಿಸಲಾಗಿದೆ. ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.