ಉಡುಪಿ : ಮಣಿಪಾಲದ ಎಂಐಟಿ ಕಾಲೇಜು ಮುಂಭಾಗ ಖಾಸಗಿ ಬಸ್ ಚಕ್ರದಡಿಗೆ ಸಿಲುಕಿ ಮಹಿಳೆಯೊಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಬಸ್ ಧರ್ಮಸ್ಥಳದತ್ತ ತೆರಳುತ್ತಿತ್ತು. ಮಹಿಳೆಯ ದೇಹ ಛಿದ್ರ ಛಿದ್ರಗೊಂಡಿದ್ದು, ಮಹಿಳೆಯ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ. ಮಣಿಪಾಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.