
ಮಂಗಳೂರು : ವಿಶ್ವದ ಅತಿ ಪ್ರತಿಷ್ಠಿತ ಕಂಪನಿಗಳಲ್ಲಿ ಒಂದಾದ ರೋಲ್ಸ್-ರಾಯ್ಸ್‌ನಲ್ಲಿ ಉದ್ಯೋಗ ಪಡೆದ ಕರ್ನಾಟಕದ ಕಿರಿಯ ವಯಸ್ಸಿನ ಮೊದಲ ಯುವತಿ ಎಂಬ ಹೆಗ್ಗಳಿಕೆಗೆ ಮಂಗಳೂರಿನ ರಿತುಪರ್ಣ ಭಾಜನರಾಗಿದ್ದಾರೆ. ಈ ಮಹತ್ತರ ಸಾಧನೆಗಾಗಿ ಅವರಿಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಮಂಗಳೂರಿನ ಯೆಯ್ಯಾಡಿಯ ವ್ಯಾಸನಗರ ನಿವಾಸಿಗಳಾದ ಸುರೇಶ್ ಮತ್ತು ಗೀತಾ ದಂಪತಿಗಳ ಪುತ್ರಿ ರಿತುಪರ್ಣ ಅವರ ಮನೆಗೆ ಶಾಸಕ ಎಸ್.ಎಲ್. ಭೋಜೇಗೌಡ ಅವರು ಭೇಟಿ ನೀಡಿ ಸನ್ಮಾನಿಸಿ ಅಭಿನಂದಿಸಿದರು. ರಿತುಪರ್ಣ ಅವರ ಮುಂದಿನ ಭವಿಷ್ಯವೂ ಇದೇ ರೀತಿ ಯಶಸ್ಸಿನಿಂದ ಕೂಡಿರಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ, ವಿಠಲ ಅಬುರ, ಕಿಟೆಲ್ ಮೆಮೋರಿಯಲ್ ಪಿಯು ಕಾಲೇಜು ಮಂಗಳೂರಿನ ಪ್ರಾಂಶುಪಾಲರು, ಹಾಗೂ ಯುವ ಜೆಡಿಎಸ್ ಪದಾಧಿಕಾರಿಗಳಾದ ರತೀಶ್ ಕರ್ಕೇರ, ನಿತೇಶ್ ಪೂಜಾರಿ, ಆದರ್ಶ್ ಸುಧಾಕರ್, ಭಾರತ್ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು. ರಿತುಪರ್ಣ ಅವರ ಈ ಸಾಧನೆಯು ಯುವ ಪೀಳಿಗೆಗೆ ಸ್ಫೂರ್ತಿದಾಯಕವಾಗಿದೆ.