spot_img

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ – ಸಂಚಿತ ಕೊಲೆ ಹಿಂದೆ 5 ಲಕ್ಷ ರೂ.ಗಳ ಕಾನ್ಟ್ರಾಕ್ಟ್! ಎಂಟು ಮಂದಿ ಬಂಧನ

Date:

ಮಂಗಳೂರು, ಮೇ 3:ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಮಹತ್ವದ ಮಾಹಿತಿಯೊಂದು ಬೆಳಕಿಗೆ ಬಂದಿದ್ದು , ಈ ಹತ್ಯೆ ಪೂರ್ವನಿಯೋಜಿತ ಕಾನ್ಟ್ರಾಕ್ಟ್ ಕಿಲ್ಲಿಂಗ್ ಆಗಿರುವುದೆಂದು ಪೊಲೀಸರು ನಡೆಸಿದ ತನಿಖೆಯಲ್ಲಿ ಬಹಿರಂಗವಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ಪೊಲೀಸರು ಎಂಟು ಮಂದಿಯನ್ನು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ.

ಬಂಧಿತರು: ಖಲಂದರ್ ಶಾಫಿ, ಅಬ್ದುಲ್ ಸಫ್ವಾನ್, ನಿಯಾಜ್, ಮಹಮ್ಮದ್ ಮುಜಾಮಿಲ್, ರಂಜಿತ್, ಆದಿಲ್ ಮೆಹ್ರೂಪ್, ರಿಜ್ವಾನ್ ಮತ್ತು ನಾಗರಾಜ್.

ಹತ್ಯೆಗೆ ಹಿಂದಿನ ಕಾರಣ:
ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದಂತೆ, 2023ರಲ್ಲಿ ಸುಹಾಸ್ ಶೆಟ್ಟಿ ಮತ್ತು ಸಫ್ವಾನ್ ನಡುವೆ ಘರ್ಷಣೆ ಉಂಟಾಗಿದ್ದು, ಸುಹಾಸ್ ಅವರಿಂದ ಸಫ್ವಾನ್ ಮೇಲೆ ಮಾರಣಾಂತಿಕ ಹಲ್ಲೆ ನಡೆಯುತ್ತದೆ. ಈ ಹಲ್ಲೆಯ ನಂತರ ಸುಹಾಸ್ ನಿಂದ ಆತಂಕಗೊಂಡ ಸಫ್ವಾನ್, ಫಾಜಿಲ್ ನ ತಮ್ಮ ಆದಿಲ್ ಮೆಹ್ರೂಪ್ ನನ್ನು ಸಂಪರ್ಕಿಸಿ, ಸುಹಾಸ್ ನ ಹತ್ಯೆಗೆ ಪ್ಲಾನ್ ರೂಪಿಸುತ್ತಾನೆ.

ಕೊಲೆಗಾಗಿ 5 ಲಕ್ಷ ರೂ. :
ಹತ್ಯೆ ಕಾರ್ಯಕ್ಕೆ ಸುಮಾರು 5 ಲಕ್ಷ ರೂಪಾಯಿ ಹಣವನ್ನು ಸಫ್ವಾನ್ ನೀಡಿದ್ದು, ಇದನ್ನು ತಂಡದೊಳಗೆ ಹಂಚಲಾಗುತ್ತದೆ. ಚಿಕ್ಕಮಗಳೂರಿನ ನಿಯಾಜ್ ನ ಮೂಲಕ ಆತನ ಸ್ನೇಹಿತರು ರಂಜಿತ್ ಮತ್ತು ನಾಗರಾಜ್ ನನ್ನು ಸಂಪರ್ಕಿಸಿ, ಸುಹಾಸ್ ನ ಚಲನವಲನಗಳ ಕುರಿತು ಮಾಹಿತಿ ಕಲೆಹಾಕಲಾಗುತ್ತದೆ.

ಹತ್ಯೆಗೆ ಪೂರ್ವಸಿದ್ಧತೆ:
ಕೊಲೆಗೂ ಮುನ್ನ, ಆರೋಪಿಗಳು ಸಫ್ವಾನ್ ನ ಮನೆಯಲ್ಲೇ ಎರಡು ದಿನ ವಾಸವಿದ್ದು, ಸುಹಾಸ್ ಶೆಟ್ಟಿಯ ಸಂಚಾರದ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸುತ್ತಾರೆ. ನಂತರ ನಿರ್ಧಿಷ್ಟ ದಿನದಂದು ಪೂರ್ವಸಿದ್ಧತೆಯಂತೆ ಕೊಲೆ ಮಾಡಲಾಗುತ್ತದೆ.

ಬುರ್ಖಾ ಧರಿಸಿದ ಮಹಿಳೆ – ಮತ್ತೊಂದು ಸುಳಿವು:
ಘಟನೆ ದಿನವು ಸ್ಥಳದಲ್ಲಿದ್ದ ಬುರ್ಖಾಧಾರಿ ಮಹಿಳೆ ನಿಯಾಜ್ ಗೆ ಸಂಬಂಧಿಸಿದವಳಾಗಿರಬಹುದು ಎಂಬ ಮಾಹಿತಿ ಲಭಿಸಿದ್ದು, ಈ ಬಗ್ಗೆ ತನಿಖೆ ಇನ್ನಷ್ಟು ಗಂಭೀರವಾಗಿ ನಡೆಯುತ್ತಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಮುಂದಿನ ಕ್ರಮ:
ಪೊಲೀಸರು ಈಗಾಗಲೇ ಸಾಕಷ್ಟು ನಿರ್ಧಾರಾತ್ಮಕ ಸುಳಿವುಗಳನ್ನು ಪಡೆದಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಕೆಲವರನ್ನು ಬಂಧಿಸುವ ಸಾಧ್ಯತೆ ಇವೆ. ಪ್ರಕರಣದ ಹಿಂದೆ ಯಾವುದಾದರೂ ಸಂಘಟಿತ ಚಟುವಟಿಕೆ ಅಥವಾ ಆರ್ಥಿಕ, ರಾಜಕೀಯ ಉದ್ದೇಶಗಳಿವೆಯೇ ಎಂಬುದರ ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ರಿಯಲ್‌ಮಿ ನಿಯೋ 7 ಟರ್ಬೋ AI ಬಿಡುಗಡೆ: ಗೇಮರ್‌ಗಳಿಗಾಗಿ ಮೀಡಿಯಾಟೆಕ್ ಡೈಮನ್ಸಿಟಿ 9400e ಪ್ರೊಸೆಸರ್‌ನ ಫೋನ್

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನ ಗೇಮಿಂಗ್ ಮತ್ತು ಬ್ಯಾಟರಿ-ಕೇಂದ್ರಿತ ಫೋನ್‌ಗಳಿಂದ ಹೆಸರುವಾಸಿಯಾಗಿರುವ ರಿಯಲ್ಮಿ, ಈಗ ತನ್ನ ನಿಯೋ ಸರಣಿಗೆ ಹೊಸ ಸೇರ್ಪಡೆಯನ್ನು ಮಾಡಿದೆ.

ಪೆರ್ಡೂರು: ಶಾಲಾ ಬಸ್ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ದುರ್ಮರಣ – ಮತ್ತೊಬ್ಬನಿಗೆ ಗಂಭೀರ ಗಾಯ

ಪೆರ್ಡೂರು ಗ್ರಾಮದ ಕೊಳಂಬೆ ಕ್ರಾಸ್ ಬಳಿ ಶಾಲಾ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಸಹಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ನಡೆದಿದೆ.

ಉಡುಪಿ ರಸ್ತೆ ಅಪಘಾತ: ಬೈಕ್ ಸ್ಕಿಡ್ ಆಗಿ ಯುವಕನ ದುರ್ಮರಣ, ಸಹಸವಾರ ಗಂಭೀರ

ಬೈಕ್ ಸ್ಕಿಡ್ ಆಗಿ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸಹಸವಾರ ಸಾವನ್ನಪ್ಪಿದ್ದು, ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ತಡರಾತ್ರಿ ನಡೆದಿದೆ.

ಮಧುಮೇಹ ಮತ್ತು ಬೊಜ್ಜು ನಿಯಂತ್ರಣಕ್ಕೆ ದಾಸವಾಳ: ಪ್ರಕೃತಿಯ ವರದಾನ

ದಾಸವಾಳದ ಎಲೆಗಳು, ಹೂವುಗಳು ಮತ್ತು ಬೇರುಗಳು ವೈವಿಧ್ಯಮಯ ಪೋಷಕಾಂಶಗಳು ಮತ್ತು ಜೈವಿಕ ಸಕ್ರಿಯ ಸಂಯುಕ್ತಗಳಿಂದ ಸಮೃದ್ಧವಾಗಿವೆ.