spot_img

ಮಂಗಳೂರಿಗೆ ಮತ್ತೊಂದು ಹೆಮ್ಮೆ: ದೇಶದ ಅತಿದೊಡ್ಡ ಭೂಗತ ಎಲ್‌ಪಿಜಿ ಸಂಗ್ರಹಾಗಾರ ನಿರ್ಮಾಣ ಪೂರ್ಣ

Date:

ಮಂಗಳೂರು : ಮಂಗಳೂರು ನಗರದಲ್ಲಿ ನಿರ್ಮಾಣವಾಗಿರುವ ದೇಶದ ಅತಿದೊಡ್ಡ ಭೂಗತ ಎಲ್‌ಪಿಜಿ ಸಂಗ್ರಹಾಗಾರ ಇದೀಗ ಪೂರ್ಣಗೊಂಡಿದೆ. ವಿಶಾಖಪಟ್ಟಣಂನ 60,000 ಮೆಟ್ರಿಕ್ ಟನ್ ಸಾಮರ್ಥ್ಯದ ಸಂಗ್ರಹಾಗಾರವನ್ನು ಮೀರಿಸಿ, ಮಂಗಳೂರಿನಲ್ಲಿ ನಿರ್ಮಿಸಿರುವ ಹೊಸ ಸಂಗ್ರಹಾಗಾರ 80,000 ಮೆಟ್ರಿಕ್ ಟನ್‌ಗಳ ಶಕ್ತಿಯನ್ನು ಹೊಂದಿದೆ. ಇದನ್ನು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಗಾಗಿ ಮೇಘಾ ಎಂಜಿನಿಯರಿಂಗ್ ಆ್ಯಂಡ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (MEIL) ನಿರ್ಮಿಸಿದೆ.

ಈ ಯೋಜನೆಯು 2018ರಲ್ಲಿ ಕೇಂದ್ರದಿಂದ ಅನುಮೋದನೆ ಪಡೆದು, 2019ರಲ್ಲಿ ಕಾಮಗಾರಿ ಆರಂಭವಾಗಿತ್ತು. ಸುಮಾರು 854 ಕೋಟಿ ರೂ. ವೆಚ್ಚದಲ್ಲಿ ನಿರ್ಮಿತವಾದ ಈ ಸಂಗ್ರಹಾಗಾರವು ಎಲ್ಲಾ ಪರೀಕ್ಷಾ ಹಂತಗಳನ್ನು ಯಶಸ್ವಿಯಾಗಿ ಪೂರೈಸಿದೆ. ಸಮುದ್ರದಲ್ಲಿರುವ ತೇಲುಜೆಟ್ಟಿ ಮೂಲಕ ಎಲ್‌ಪಿಜಿ ತುಂಬುವ ವ್ಯವಸ್ಥೆಗೆ ಅಗತ್ಯವಾದ ಪೈಪ್‌ಲೈನ್ ಕೂಡಾ ಈಗಾಗಲೇ ಸಿದ್ಧವಾಗಿದೆ.

ಭೂಮಿಯಿಂದ 500 ಮೀಟರ್ ಆಳದಲ್ಲಿ, ಸುಮಾರು 1,083 ಮೀಟರ್ ಉದ್ದದ ಸುರಂಗ ಮಾಡಲಾಗಿದೆ. ಇದರಲ್ಲಿ ಎಸ್1 ಮತ್ತು ಎಸ್2 ಎಂಬ ಎರಡು ಭಿನ್ನ ಘಟಕಗಳಿದ್ದು, ಕ್ರಮವಾಗಿ 220 ಮೀಟರ್ ಹಾಗೂ 225 ಮೀಟರ್ ಆಳವಿದೆ. ಈ ಸುರಕ್ಷಿತ ಸಂಗ್ರಹಣಾ ವ್ಯವಸ್ಥೆಯಲ್ಲಿ 40,000 ಟನ್ ಪ್ರೊಪೇನ್ ಹಾಗೂ 60,000 ಟನ್ ಬ್ಯುಟೇನ್ ಗಳನ್ನು ಸಹ ವಿಂಗಡಿಸಿ ಇಡಬಹುದಾಗಿದೆ.

ಈ ಮೂಲಕ ಮಂಗಳೂರು ನಗರ ಭಾರತದಲ್ಲಿ ಭೂಗತ ಎಲ್‌ಪಿಜಿ ಸಂಗ್ರಹಣದಲ್ಲಿ ಪ್ರಮುಖ ಕೇಂದ್ರವಾಯಿತು. ಇಂಧನದ ನಿರಂತರ ಪೂರೈಕೆ ಹಾಗೂ ಭದ್ರತೆಯ ದೃಷ್ಟಿಯಿಂದ ಈ ಯೋಜನೆ ಹೊಸ ಮೈಲಿಗಲ್ಲು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ನಾರಾಯಣ ಗುರು ಜಯಂತಿ

ಜ್ಞಾನ ಮತ್ತು ಸಮಾನತೆಯ ಪುನರುತ್ಥಾನಕ್ಕೆ ಪ್ರೇರಣೆಯ ದಿನಪ್ರತಿ ವರ್ಷ ಸೆಪ್ಟೆಂಬರ್ 7, ಭಾರತದ ಕರಾವಳಿ ತೀರದ ಜನತೆಗೆ ಒಂದು ಪವಿತ್ರ ಮತ್ತು ಮಹತ್ವದ ದಿನ

ಧರ್ಮಸ್ಥಳ ಪ್ರಕರಣ: ಆರೋಪಿ ಚಿನ್ನಯ್ಯ ನ್ಯಾಯಾಂಗ ಬಂಧನಕ್ಕೆ, ಶಿವಮೊಗ್ಗ ಜೈಲಿಗೆ ರವಾನೆ

'ಧರ್ಮಸ್ಥಳದಲ್ಲಿ ಹೆಣ ಹೂತಿದ್ದೇನೆ' ಎಂದು ಹಲವು ದಿನಗಳ ಕಾಲ ಸುದ್ದಿಯಲ್ಲಿದ್ದ ಆರೋಪಿ ಚಿನ್ನಯ್ಯನ ಎಸ್.ಐ.ಟಿ ಕಸ್ಟಡಿ ಅವಧಿ ಮುಗಿದಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಐಸಿಸಿ ಮತ್ತು Google Pay ಜಂಟಿ ಪ್ರಯತ್ನ: ಮಹಿಳಾ ವಿಶ್ವಕಪ್ ಟಿಕೆಟ್ ಮಾರಾಟಕ್ಕೆ ಹೊಸ ಡಿಜಿಟಲ್ ಸ್ಪರ್ಶ

ವಿಶೇಷ ಟಿಕೆಟ್‌ಗಳು ಗೂಗಲ್ ಪೇ ಮೂಲಕ ಸೆಪ್ಟೆಂಬರ್ 8ರವರೆಗೆ ಲಭ್ಯವಿರಲಿದ್ದು, ಸೆಪ್ಟೆಂಬರ್ 9 ರಿಂದ ಎಂದಿನಂತೆ ಟಿಕೆಟ್ ಮಾರಾಟ ಪ್ರಾರಂಭವಾಗಲಿದೆ ಎಂದು ICC ತಿಳಿಸಿದೆ.

ಸೈನಸ್ ಸಮಸ್ಯೆ: ಕರಿಮೆಣಸಿನ ಆವಿಯಿಂದ ಪರಿಹಾರ ಸಾಧ್ಯವೇ?

ಮೂಗು ಕಟ್ಟಿಕೊಂಡಾಗ ಅಥವಾ ಸೈನಸ್‌ಗಳಿಂದ ತಲೆನೋವು ಬಂದಾಗ ಬಿಸಿ ನೀರಿನ ಆವಿಗೆ ಕರಿಮೆಣಸು ಸೇರಿಸಿ ಉಸಿರಾಡುವುದು ಒಂದು ಜನಪ್ರಿಯ ವಿಧಾನ.