spot_img

ಜೈಪುರದಲ್ಲಿ ವ್ಯಕ್ತಿ ಸಾವು: ಉಡುಪಿಯ ಬನ್ನಂಜೆಯವರೆಂಬ ಶಂಕೆ – ಸಂಬಂಧಿಕರ ಪತ್ತೆಗೆ ಮನವಿ

Date:

spot_img

ಉಡುಪಿ : ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜೈಪುರ ಗ್ರಾಮದಲ್ಲಿ ಜೂನ್ 11ರಂದು ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾಗಿದೆ. ಮೃತ ವ್ಯಕ್ತಿಯು ಉಡುಪಿ ಜಿಲ್ಲೆಯ ಬನ್ನಂಜೆ ಮೂಲದವರೆಂಬ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಜೈಪುರ ಠಾಣೆ ಪೊಲೀಸರು ಉಡುಪಿ ಅಂಬಲಪಾಡಿಯ ವಿಶು ಶೆಟ್ಟಿ ಅವರಿಗೆ ಮಾಹಿತಿ ನೀಡಿದ್ದಾರೆ.

ಪತ್ತೆಯಾದ ಮೃತದೇಹದ ಪ್ರಾಥಮಿಕ ತನಿಖೆಯಲ್ಲಿ, ಮೃತ ವ್ಯಕ್ತಿಯು ಸುಂದರ ಅಥವಾ ವರ್ಧಮಾನ ಎಂಬ ಹೆಸರಿನಲ್ಲಿ ಗುರುತಿಸಲ್ಪಟ್ಟಿದ್ದರೂ, ಅವರ ನಿಖರ ಗುರುತನ್ನು ದೃಢಪಡಿಸಲು ಇನ್ನೂ ಸಂಬಂಧಿಕರ ಸಹಕಾರ ಅಗತ್ಯವಿದೆ.

ಈ ಹಿನ್ನೆಲೆಯಲ್ಲಿ ಮೃತ ವ್ಯಕ್ತಿಯ ಸಂಬಂಧಿಕರು ಅಥವಾ ಪರಿಚಿತರು ಯಾರಾದರೂ ಇದ್ದರೆ, ತಕ್ಷಣವೇ ಜೈಪುರ ಪೊಲೀಸ್ ಠಾಣೆ ಅಥವಾ ಮೊಬೈಲ್ ಸಂಖ್ಯೆ 8277990582 ಅನ್ನು ಸಂಪರ್ಕಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.

ಪೊಲೀಸರು ಮೃತದೇಹದ ಚಿತ್ರವನ್ನು ಬಿಡುಗಡೆ ಮಾಡಿದ್ದು, ಸಾರ್ವಜನಿಕರಿಂದ ಸಹಕಾರ ಕೋರಿದ್ದಾರೆ. ಸಂಬಂಧಿಕರ ಪತ್ತೆಯಾಗದ ವರೆಗೆ ಮೃತದೇಹವನ್ನು ಜೈಪುರ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಕೂದಲಿನ ಆರೋಗ್ಯಕ್ಕೆ ಕರಿಬೇವು ಮತ್ತು ಕೊಬ್ಬರಿ ಎಣ್ಣೆಯ ಮ್ಯಾಜಿಕ್: ಪರಿಣಾಮಕಾರಿ ಮನೆಮದ್ದು ಇಲ್ಲಿದೆ

ಕೊಬ್ಬರಿ ಎಣ್ಣೆಗೆ ಕರಿಬೇವನ್ನು ಬೆರೆಸಿ ಬಳಸುವುದರಿಂದ ಕೂದಲು ಉದುರುವಿಕೆ ನಿಲ್ಲುತ್ತದೆ ಮತ್ತು ಕೂದಲು ದಟ್ಟವಾಗಿ, ಕಪ್ಪಾಗಿ, ವೇಗವಾಗಿ ಬೆಳೆಯುತ್ತದೆ.

ನಟಿ ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ಮೂವರು ಆರೋಪಿಗಳ ಬಂಧನ

ಸ್ಯಾಂಡಲ್‌ವುಡ್ ನಟಿ ರಮ್ಯಾ (ದಿವ್ಯ ಸ್ಪಂದನಾ) ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ ಮೂವರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಸೌಜನ್ಯಾ ಸಹಿತ ಧರ್ಮಸ್ಥಳ ಪ್ರಕರಣಗಳ ನ್ಯಾಯಕ್ಕಾಗಿ ಆಗ್ರಹ: ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಎಐಡಿಎಸ್‌ಒ ಪ್ರತಿಭಟನೆ

ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿರುವ ಅಪರಾಧ ಪ್ರಕರಣಗಳ ಸಮರ್ಪಕ ತನಿಖೆ ಮತ್ತು ಸೌಜನ್ಯಾ ಅತ್ಯಾಚಾರ-ಹತ್ಯೆ ಪ್ರಕರಣಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ, ಎಐಡಿಎಸ್‌ಒ ಕರ್ನಾಟಕ ರಾಜ್ಯ ಸಮಿತಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಶನಿವಾರ ಧರಣಿ ಹಮ್ಮಿಕೊಂಡಿತ್ತು.

ಹಿರಿಯಡಕ ಬ್ರಾಹ್ಮಣ ಮಹಾಸಭಾದಿಂದ ‘ಆಟಿ ಸಂಭ್ರಮ 2025’

ಬ್ರಾಹ್ಮಣ ಮಹಾಸಭಾ, ಹಿರಿಯಡಕ ಇವರ ವತಿಯಿಂದ ಆಗಸ್ಟ್ 3, 2025 ಭಾನುವಾರದಂದು ಬೆಳಗ್ಗೆ 9 ಗಂಟೆಗೆ ಓಂತಿಬೆಟ್ಟುವಿನ ಶ್ರೀ ಲಕ್ಷ್ಮೀಕೃಪಾ ಕಲ್ಯಾಣಮಂಟಪದಲ್ಲಿ 'ಆಟಿ ಸಂಭ್ರಮ 2025' ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.