
ಅಜೆಕಾರು: ಮರ್ಣೆ ಗ್ರಾಮದ ಅಜೆಕಾರಿನಲ್ಲಿ, 77 ವರ್ಷದ ಶೀನ ಎಂಬ ವ್ಯಕ್ತಿ ಆಕಸ್ಮಿಕವಾಗಿ ನೀರಿನಲ್ಲಿ ಬಿದ್ದು ಸಾವಿಗೀಡಾಗಿರುವ ಘಟನೆ ನಡೆದಿದೆ.
ಭಾನುವಾರ, ಶೀನ ಅವರು ನೀಲಬೈಲು ಎಂಬಲ್ಲಿ ತೆಂಗಿನಕಾಯಿ ಮತ್ತು ಸೀಯಾಳ ಕೊಯ್ಯಲು ದೋಟಿಯೊಂದಿಗೆ ಹೋಗಿದ್ದಾರೆ. ಆದರೆ, ಸಂಜೆಯಾದರೂ ಮನೆಗೆ ಮರಳದೇ ಇದ್ದ ಕಾರಣ, ಅವರ ಪತ್ನಿ ಮತ್ತು ಕುಟುಂಬದವರು ಅವರನ್ನು ಸುತ್ತಮುತ್ತ ಹುಡುಕಾಡಿದ್ದಾರೆ. ನಂತರ, ಗದ್ದೆ ಬದಿಯ ತೋಡಿನಲ್ಲಿ ಶೀನ ಅವರ ಮೃತದೇಹ ಪತ್ತೆಯಾಗಿದೆ.
ಶೀನ ಅವರು ತೆಂಗಿನಕಾಯಿ ಮತ್ತು ಸೀಯಾಳ ಕೊಯ್ಯುವ ವೇಳೆ ಕಾಲು ಜಾರಿ ನೀರಿನಲ್ಲಿ ಬಿದ್ದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಪ್ರಕರಣದ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.