
ಕೋಳಿಯ ಕೂಗಿನಿಂದ ನಿದ್ರೆ ಭಂಗವಾಗಿದೆ ಎಂಬ ಕಾರಣಕ್ಕೆ ಕೇರಳದಲ್ಲಿ ವ್ಯಕ್ತಿಯೋರ್ವರು ತಮ್ಮ ನೆರೆಯವರ ವಿರುದ್ಧ ದೂರು ನೀಡಿದ್ದಾರೆ! ಈ ಅಸಾಮಾನ್ಯ ದೂರು ಅಧಿಕಾರಿಗಳ ಗಮನ ಸೆಳೆದಿದ್ದು, ಆರ್‌ಡಿಒ ತನಿಖೆ ನಡೆಸಿ 15 ದಿನಗಳೊಳಗೆ ಕೋಳಿಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಆದೇಶಿಸಿದ್ದಾರೆ.
ಸಾಮಾನ್ಯವಾಗಿ, ಕೋಳಿಯ ಕೂಗು ಗ್ರಾಮೀಣ ಪ್ರದೇಶಗಳಲ್ಲಿ ಬೆಳಗಿನ ಜಾವದ ಪ್ರಾರಂಭದ ಸಂಕೇತ. ಅನೇಕರು ಇದರೊಂದಿಗೆ ದಿನಚರಿಯನ್ನು ಆರಂಭಿಸುತ್ತಾರೆ. ಆದರೆ, ಕೇರಳದಲ್ಲಿ ಈ ಶಬ್ದವೇ ಸಹಿಸಲಾಗದೆ ದೂರು ನೀಡುವ ಮಟ್ಟಕ್ಕೆ ಬೆಳೆಯುವುದು ವಿಚಿತ್ರ ಸಂಗತಿ.