
ಮಲ್ಪೆ: ಕೊಡವೂರು ಪಾಳೆಕಟ್ಟೆ ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ದೇವರಬೆಟ್ಟು ಆವರಣದ ಹೊರಗಡೆ ಇರುವ ಕಾಣಿಕೆ ಡಬ್ಬಿಯನ್ನು ಮುರಿದು ಅದರಲ್ಲಿದ್ದ ಹಣ ಕಳವು ಮಾಡಿರುವ ಘಟನೆ ಎ.19 ರಂದು ಸಂಜೆ ನಡೆದಿದೆ. ಸಂಜೆ 6 ರಿಂದ ರಾತ್ರಿ 8.45ರೊಳಗೆ ಈ ಕೃತ್ಯ ನಡೆದಿದ್ದು,ಸುಮಾರು ₹15,000 ರೂಪಾಯಿ ಕಳವಾಗಿದೆ ಎಂದು ದೂರುದಾರರು ತಿಳಿಸಿದ್ದಾರೆ.
ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಸಲಾಗಿದ್ದು , ಹೆಚ್ಚಿನ ತನಿಖೆ ಮುಂದುವರೆದಿದೆ.