ಮಲ್ಪೆಯಲ್ಲಿ ಮೋಂಥಾ ಚಂಡಮಾರುತದ ಬಳಿಕ ಜಲಕ್ರೀಡೆ, ಸೈಂಟ್‌ ಮೇರಿಸ್‌ ಯಾನ ಮರು ಆರಂಭ

Date:

spot_img

ಮಲ್ಪೆ: ಮೋಂಥಾ ಚಂಡಮಾರುತದ ಹಿನ್ನೆಲೆಯಲ್ಲಿ ಕಳೆದ 8 ದಿನಗಳಿಂದ ಸ್ಥಗಿತಗೊಂಡಿದ್ದ ಮಲ್ಪೆ ಬೀಚ್‌ನ ವಾಟರ್‌ ಸ್ಪೋರ್ಟ್ಸ್ ಮತ್ತು ಸೈಂಟ್‌ಮೇರಿಸ್‌ ದ್ವೀಪಕ್ಕೆ ಪ್ರವಾಸಿ ಬೋಟ್ ಯಾನ ಮತ್ತೆ ಆರಂಭಗೊಂಡಿದೆ. ವೇಗವಾಗಿ ಬೀಸುತ್ತಿದ್ದ ಗಾಳಿಯಿಂದಾಗಿ ಸಮುದ್ರದ ನೀರಿನ ಒತ್ತಡ ಹೆಚ್ಚಿದ್ದ ಕಾರಣ ಮತ್ತು ಪ್ರವಾಸಿಗರ ಸುರಕ್ಷತೆಯ ಹಿತದೃಷ್ಟಿಯಿಂದ ಈ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು.

ಇದೀಗ ವಾತಾವರಣ ಸಹಜ ಸ್ಥಿತಿಗೆ ತಲುಪಿ ತಿಳಿಗೊಂಡಿರುವ ಹಿನ್ನೆಲೆಯಲ್ಲಿ ಬೀಚ್‌ನಲ್ಲಿ ಎಲ್ಲ ತರಹದ ಜಲ ಕ್ರೀಡೆಗಳನ್ನು ಮತ್ತೆ ಆರಂಭಿಸಲಾಗಿದೆ. ಮಲ್ಪೆ ಬೀಚ್‌ಗೆ ಜಲ ಕ್ರೀಡೆಗಳಿಗಾಗಿಯೇ ಬರುವ ಪ್ರವಾಸಿಗರಿಗೆ ಇದು ಸಂತಸ ತಂದಿದೆ ಎಂದು ವಾಟರ್‌ ಸ್ಪೋರ್ಟ್ಸ್‌ನ ನಿರ್ವಾಹಕ ಶಾನ್‌ರಾಜ್‌ ಮಲ್ಪೆ ಅವರು ಹೇಳಿದ್ದಾರೆ.

ದೀಪಾವಳಿ ಹಬ್ಬದ ರಜೆಯ ಹಿನ್ನೆಲೆಯಲ್ಲಿ ಹಲವಾರು ಪ್ರವಾಸಿಗರು ಸೈಂಟ್‌ ಮೇರಿಸ್‌ ಯಾನಕ್ಕೆ ಆಗಮಿಸಿ, ಅವಕಾಶವಿಲ್ಲದೆ ಹಿಂತಿರುಗಿದ್ದರು. ಇದೀಗ ಸಮುದ್ರವು ಸಹಜ ಸ್ಥಿತಿಗೆ ತಲುಪಿದ್ದು, ಶನಿವಾರದಿಂದ ಮತ್ತೆ ಯಾನ ಆರಂಭಿಸಲಾಗಿದೆ. ಬೆಂಗಳೂರು ಮತ್ತು ಮೈಸೂರು ಭಾಗದಿಂದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಬರಲಾರಂಭಿಸಿದ್ದಾರೆ ಎಂದು ರಾಜರಾಜೇಶ್ವರೀ ಟೂರಿಸ್ಟ್‌ ಬೋಟ್ ಮುಖ್ಯಸ್ಥರಾದ ಗಣೇಶ್‌ ಮಲ್ಪೆ ಅವರು ಮಾಹಿತಿ ನೀಡಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಡಾ. ಶಿವಪ್ರಸಾದ್ ಶೆಟ್ಟಿಗೆ ಎನ್‌ಸಿಸಿ ತರಬೇತಿಯಲ್ಲಿ ಪ್ರಥಮ ಸ್ಥಾನ

ನಿಟ್ಟೆ ಸಂಸ್ಥೆಯ ಎನ್‌ಸಿಸಿ ಅಧಿಕಾರಿ ಡಾ. ಶಿವಪ್ರಸಾದ್ ಶೆಟ್ಟಿ ಮಹಾರಾಷ್ಟ್ರದ ಕಾಮ್ಟೀ ತರಬೇತಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಉಡುಪಿ ಪ್ರವಾಸೋದ್ಯಮ ಮ್ಯಾಸ್ಕಾಟ್ ಸ್ಪರ್ಧೆ: ನಿಟ್ಟೆಯಲ್ಲಿ ಜುಲೈ 25ಕ್ಕೆ ಆಯೋಜನೆ

ಉಡುಪಿ ಪ್ರವಾಸೋದ್ಯಮದ ಅಧಿಕೃತ ಮ್ಯಾಸ್ಕಾಟ್ ವಿನ್ಯಾಸ ಸ್ಪರ್ಧೆ ಜುಲೈ 25ರಂದು ನಿಟ್ಟೆಯಲ್ಲಿ ನಡೆಯಲಿದೆ. ಭಾಗವಹಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಮಳೆಗಾಲದ ಜ್ವರ, ಸಾಂಕ್ರಾಮಿಕ ರೋಗ ತಡೆಗೆ ರಾಜ್ಯ ಸರ್ಕಾರ ಸನ್ನದ್ಧ

ಮಳೆಗಾಲದಲ್ಲಿ ವೈರಲ್ ಜ್ವರ ಮತ್ತು ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಭಾರಿ ಸಿದ್ಧತೆ ನಡೆಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ನೀಟ್ ಅಕ್ರಮ: ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ನೀಟ್‌ ಪರೀಕ್ಷೆ ಅಕ್ರಮ ಖಂಡಿಸಿ ದೇಶಾದ್ಯಂತ ಪ್ರತಿಭಟನೆ. ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.