

ಉಡುಪಿ : ಅಲೆವೂರಿನಲ್ಲಿರುವ ಶಾಂತಲಾ ಈವೆಂಟ್ಸ್‌ನ ಗೋಡೌನ್‌ನಲ್ಲಿ ಸೋಮವಾರ ಮುಂಜಾನೆ 3:30ರ ಸುಮಾರಿಗೆ ಭೀಕರ ಬೆಂಕಿ ಅವಘಡ ಸಂಭವಿಸಿದೆ. ಈ ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಶಾಮಿಯಾನಗಳು, ವಸ್ತುಗಳು ಸಂಪೂರ್ಣವಾಗಿ ನಾಶವಾಗಿವೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಬೆಂಕಿ ಆರಂಭದಲ್ಲಿ ಶಾಮಿಯಾನದ ಮ್ಯಾಟ್‌ಗಳನ್ನು ಸಂಗ್ರಹಿಸಿಟ್ಟಿದ್ದ ಸ್ಥಳದಿಂದ ಹರಡಿ, ಕ್ಷಣಮಾತ್ರದಲ್ಲಿ ಗೋಡೌನ್‌ನ ಎಲ್ಲಾ ಭಾಗಗಳಿಗೆ ವ್ಯಾಪಿಸಿದೆ. ವಾಟರ್ ಟ್ಯಾಂಕ್ ಸೇರಿದಂತೆ ಗೋಡೌನ್‌ನಲ್ಲಿ ಇದ್ದ ಎಲ್ಲಾ ಪರಿಕರಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ.
ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸುವ ಕಾರ್ಯಾಚರಣೆ ನಡೆಸಿದರೂ, ಬೆಂಕಿ ಅಷ್ಟೊಂದು ವೇಗವಾಗಿ ಹಬ್ಬಿದ ಕಾರಣ ಗೋಡೌನ್‌ನಲ್ಲಿ ಇದ್ದ ಸಾಮಗ್ರಿಗಳನ್ನು ಉಳಿಸಲು ಸಾಧ್ಯವಾಗಿಲ್ಲ.
ಈ ಅಗ್ನಿ ಅವಘಡದಿಂದ ರಮಾನಂದ ನಾಯಕ್ ಎಂಬುವವರಿಗೆ ಸೇರಿದ ಶಾಂತಲಾ ಈವೆಂಟ್ಸ್‌ಗೆ ಹೆಚ್ಚಿನ ಆರ್ಥಿಕ ನಷ್ಟವಾಗಿದೆ. ಈ ಘಟನೆಯ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಬೆಂಕಿ ಹೊತ್ತಿಕೊಂಡ ಕಾರಣ ಇನ್ನೂ ತಿಳಿದುಬಂದಿಲ್ಲ.
