
ಬೆಂಗಳೂರು: ಭಾರತದಲ್ಲಿ ರೈತರಿಗೆ ಕೃಷಿ ಸಂಬಳದ ಮೇಲೆ ಅವಲಂಬನೆ ಹೊಂದಿರುವುದರಿಂದ ಸರ್ಕಾರವು ವಿವಿಧ ಯೋಜನೆಗಳನ್ನು ಆರಂಭಿಸಿದೆ. ಕೃಷಿಯಲ್ಲಿ ಹೆಚ್ಚಿನ ಆರ್ಥಿಕ ಪ್ರಗತಿಗಾಗಿ, ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ರೈತರಿಗೆ ಶೆಡ್ ನಿರ್ಮಾಣಕ್ಕಾಗಿ ರೂ. 58,000 ರಷ್ಟು ಸಹಾಯಧನ ನೀಡಲಾಗುತ್ತಿದೆ.
ಈ ಯೋಜನೆಯ ಅಡಿಯಲ್ಲಿ, ರೈತರು ಕುರಿ ಕೋಳಿ ಮೇಕೆ ಸಾಕಾಣಿಕೆ, ಹೈನುಗಾರಿಕೆ, ಹಂದಿ ಸಾಕಾಣಿಕೆ ಅಥವಾ ಮೀನುಗಾರಿಕೆಗೆ ತೊಡಗಿಸಿಕೊಂಡು ತಮ್ಮ ಸ್ವಂತ ಕೃಷಿ ಭೂಮಿಯಲ್ಲಿ ಶೆಡ್ ನಿರ್ಮಿಸಲು ಸಹಾಯಧನವನ್ನು ಪಡೆಯಬಹುದು.
ಅರ್ಹತೆಯ ನಿಯಮಗಳು:
- ಕರ್ನಾಟಕ ರಾಜ್ಯದ ರೈತರು ಮಾತ್ರ ಈ ಯೋಜನೆಗೆ ಅರ್ಹರಾಗಿರುತ್ತಾರೆ.
- ಅರ್ಜಿದಾರರಿಗೆ ಶೆಡ್ ನಿರ್ಮಾಣಕ್ಕೆ ಸ್ವಂತ ಕೃಷಿ ಭೂಮಿ ಇರಬೇಕು, ಮತ್ತು ಕುರಿ, ಕೋಳಿ, ಹೈನುಗಾರಿಕೆ ಅಥವಾ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿರಬೇಕು.
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಹೆಚ್ಚಿನ ಆದ್ಯತೆ.
- ಪಶು ವೈದ್ಯಾಧಿಕಾರಿಗಳಿಂದ ದೃಢೀಕರಣ ಪತ್ರ ಪಡೆಯುವುದು.
ಶೆಡ್ ನಿರ್ಮಾಣದ ನಿಯಮಗಳು:
- ಶೆಡ್ 10 ಅಡಿ ಅಗಲ ಮತ್ತು 18 ಅಡಿಗಳ ಗೋಡೆ ಇರಬೇಕು.
- 5 ಅಡಿ ಎತ್ತರದ ಗೋಡೆಯು, ಗೋದಲಿ ಅಥವಾ ಮೇವು ತೊಟ್ಟಿಯು ಇರಬೇಕು.
- ಜಾನುವಾರುಗಳ ಉಸಿರಾಟಕ್ಕೆ ಗಾಳಿ ಮತ್ತು ಬೆಳಕಿಗಾಗಿ ಶೆಡ್ ಗಳನ್ನು ನಿರ್ಮಿಸಬೇಕು.
ಅರ್ಜಿ ಸಲ್ಲಿಸುವ ವಿಧಾನ:
- ಅರ್ಜಿದಾರರು ಮೇಲಿನ ಎಲ್ಲಾ ದಾಖಲೆಗಳನ್ನು ಹೊಂದಿ ಹತ್ತಿರದ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಬೇಕು.
- ಅರ್ಜಿಯನ್ನು ಪರಿಶೀಲಿಸಿ ವಾರ್ಷಿಕ ಕ್ರಿಯಾ ಯೋಜನೆಗೆ ಸೇರಿಸಲಾಗುತ್ತದೆ.
- ಹಣವು DBT ಮೂಲಕ ರೈತನ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗುತ್ತದೆ.
- ಹೆಚ್ಚಿನ ಮಾಹಿತಿಗಾಗಿ ನಿಮ್ಮ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ.
ಬೇಕಾದ ದಾಖಲೆಗಳು:
- ಅರ್ಜಿದಾರರ ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್ ವಿವರ
- ಶೆಡ್ ನಿರ್ಮಾಣದ ಸ್ಥಳದ ದಾಖಲೆಗಳು
- ಜಾನುವಾರುಗಳಿಗೆ ಪಡೆದ ವೈದ್ಯಕೀಯ ದೃಢೀಕರಣ ಪತ್ರ
- ನಿಗದಿತ ಅರ್ಜಿ ಫಾರಂ
- ಇತರೆ ಪ್ರಮುಖ ದಾಖಲೆಗಳು
ಈ ಯೋಜನೆ ರೈತರಿಗೆ ಹೆಚ್ಚಿನ ಆದಾಯವನ್ನೂ, ಆರ್ಥಿಕ ಸ್ಥಿರತೆಯನ್ನೂ ತರುತ್ತದೆ, ಮತ್ತು ಇದರ ಲಾಭವನ್ನು ರೈತರು ಪಡೆದು ಕೊಳ್ಳಬಹುದಾಗಿದೆ.