
ಶಿವಮಯಂ ಫೌಂಡೇಶನ್ (ರಿ) ಪೆರ್ಡೂರು ಇವರ ವತಿಯಿಂದ ಪೆರ್ಡೂರಿನ ಶ್ರೀ ಕ್ಷೇತ್ರ ಕಾನದಪಾಡಿಯಲ್ಲಿ ಶ್ರೀ ಮನ್ಮಹಾಶಿವರಾತ್ರಿಯ ಪ್ರಯುಕ್ತ ದಿ. 26-02-2025ನೇ ಬುಧವಾರ ಬೆಳಿಗ್ಗೆ 8.30ರಿಂದ ಮರುದಿನ ಬೆಳಿಗ್ಗೆ 6.00ರವರೆಗೆ ಶಿವರಾತ್ರಿ ಭಜನೋತ್ಸವವು ನಡೆಯಲಿದೆ. ಊರಿನ ಹಾಗೂ ಪರವೂರಿನ ಪ್ರಸಿದ್ಧ ಭಜನಾ ತಂಡಗಳು ಭಾಗವಹಿಸಲಿವೆ. ತಾವೆಲ್ಲರೂ ಈ ಅಪೂರ್ವ ಭಜನಾ ಸಂಕೀರ್ತನೆಯಲ್ಲಿ ಭಾಗವಹಿಸಿ, ಶ್ರೀಕ್ಷೇತ್ರದ ಸರ್ವಶಕ್ತಿಗಳ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿಸುತ್ತೇವೆ.
ವಿ.ಸೂ. : ಶಿವಲಿಂಗಕ್ಕೆ ಅಭಿಷೇಕ, ಬಿಲ್ವಾರ್ಚನೆ ಮಾಡಲು ಸಾರ್ವಜನಿಕರಿಗೆ ಅವಕಾಶವಿದೆ.
ಭಕ್ತಾದಿಗಳಿಗೆಲ್ಲರಿಗೂ ಆದರದ ಸ್ವಾಗತ ಬಯಸುವ
ಅಧ್ಯಕ್ಷರು ಮತ್ತು ಸರ್ವ ಸದಸ್ಯರು,
ಶಿವಮಯಂ ಫೌಂಡೇಶನ್ (ರಿ) ಪೆರ್ಡೂರು
ಸಂಪರ್ಕ : 9343804299, 7338614018, 8722459081