
ಪ್ರಯಾಗ್‌ರಾಜ್: ವಿಶ್ವದ ಅತಿ ದೊಡ್ಡ ಧಾರ್ಮಿಕ ಉತ್ಸವ ಮಹಾಕುಂಭ ಮೇಳ ಜನವರಿ 13ರಿಂದ ಪ್ರಾರಂಭವಾಗಿ ಫೆಬ್ರವರಿ 26ರಂದು ಅಂತ್ಯವಾಗಲಿದೆ. ಈ ಬಾರಿ 144 ವರ್ಷಕ್ಕೊಮ್ಮೆ ನಡೆಯುವ ಮಹಾಕುಂಭಕ್ಕೆ ಆಲೋಚನೆಗೂ ಮೀರಿದ ಭಕ್ತಸಂದಣಿಗೆ ಸಾಕ್ಷಿಯಾಗಿದೆ. ಇಲ್ಲಿವರೆಗೆ 53 ಕೋಟಿ ಯಾತ್ರಾರ್ಥಿಗಳು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದು, ಮೇಳದ ಆರಂಭದಿಂದಲೇ ಸರಾಸರಿ 60 ಕೋಟಿ ಭಕ್ತರು ಈ ಪವಿತ್ರ ಕ್ಷಣದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.
7,500 ಕೋಟಿ ರೂ. ವೆಚ್ಚ – ಏನು ನಿರ್ಮಾಣಗೊಂಡಿದೆ?
ಉತ್ತರ ಪ್ರದೇಶ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಜಂಟಿಯಾಗಿ 7,500 ಕೋಟಿ ರೂ. ವೆಚ್ಚ ಮಾಡಿದ್ದು, ಅದರಲ್ಲಿ
✅ 14 ಹೊಸ ಫ್ಲೈಓವರ್‌ಗಳು
✅ 6 ಅಂಡರ್‌ಪಾಸ್‌ಗಳು
✅ 200ಕ್ಕೂ ಹೆಚ್ಚು ಅಗಲವಾದ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ.
✅ ಹೊಸ ಕಾರಿಡಾರ್‌ಗಳು, ರೈಲ್ವೆ ನಿಲ್ದಾಣ ವಿಸ್ತರಣೆ ಹಾಗೂ ಆಧುನಿಕ ವಿಮಾನ ನಿಲ್ದಾಣ ಟರ್ಮಿನಲ್ ಕೂಡ ಸೇರ್ಪಡೆಯಾಗಿದೆ.ಇದಲ್ಲದೆ , ಕುಂಭಮೇಳದ ವ್ಯವಸ್ಥೆಗಳನ್ನು ಇನ್ನಷ್ಟು ಉತ್ತಮಗೊಳಿಸಲು ಹೆಚ್ಚುವರಿಯಾಗಿ 1,500 ಕೋಟಿ ರೂ. ಮೀಸಲಿಡಲಾಗಿದೆ.
ಮಹಾಕುಂಭದಿಂದ ಬೃಹತ್ ಆದಾಯ!
ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರ ಪ್ರಕಾರ, ಈ ಮೇಳದಿಂದ ರಾಜ್ಯಕ್ಕೆ ಮೂರು ಲಕ್ಷ ಕೋಟಿ ರೂ. ಆದಾಯ ಬರುವ ಸಾಧ್ಯತೆ ಇದೆ. ರಾಜ್ಯದ ಜಿಡಿಪಿ 3.25ರಿಂದ 3.5 ಲಕ್ಷ ಕೋಟಿ ರೂ.ಗೆ ಏರಿಕೆ ಆಗಬಹುದು ಎಂಬ ನಿರೀಕ್ಷೆಯೂ ಇದೆ.
ಕುಂಭಮೇಳದ ಸಂದರ್ಭದಲ್ಲಿ ಅಯೋಧ್ಯೆ, ಕಾಶಿ, ಚಿತ್ರಕೂಟ, ಗೋರಖ್‌ಪುರ, ನೈಮಿಶಾರಣ್ಯಂ ಸೇರಿದಂತೆ ಪವಿತ್ರ ಕ್ಷೇತ್ರಗಳಿಗೆ ಹೋದ ಭಕ್ತಾಧಿಗಳಿಗೆ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ. ಮಾತ್ರವಲ್ಲದೆ, ಈ ಒಂದೇ ವರ್ಷದಲ್ಲಿ ಅಯೋಧ್ಯೆಗೆ ಭಕ್ತರು 700 ಕೋಟಿ ರೂ. ದೇಣಿಗೆಗಳ ರೂಪದಲ್ಲಿ ನೀಡಿರುವುದಾಗಿ ಸರ್ಕಾರ ಮಾಹಿತಿ ನೀಡಿದೆ.
ಇಂಥಾ ಬೃಹತ್ ಧಾರ್ಮಿಕ ಉತ್ಸವ ಆರ್ಥಿಕ ಬೆಳವಣಿಗೆಗೂ ದೊಡ್ಡ ಉತ್ತೇಜನ ನೀಡುವಂತಾಗಿದೆ!