spot_img

ಪೆರ್ಡೂರಿನ ಅನಂತಪದ್ಮನಾಭ ದೇವಳದಲ್ಲಿ ಮಹಾ ಮೃತ್ಯುಂಜಯ ಹೋಮ , ಮುಷ್ಠಿಕಾಣಿಕೆ ಸಮರ್ಪಣೆ

Date:

spot_img

ಪೆರ್ಡೂರು, ಜೂನ್ 5: ಪೆರ್ಡೂರಿನ ಪ್ರಸಿದ್ಧ ಶ್ರೀ ಅನಂತಪದ್ಮನಾಭ ದೇವಾಲಯದಲ್ಲಿ 2025ರ ಜೂನ್ 5ರಂದು ಗುರುವಾರ ಬೆಳಿಗ್ಗೆ 8.30ರಿಂದ ಭಕ್ತಿಭಾವಪೂರ್ಣ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿ ಭಾವದಿಂದ ನಡೆಯಲಿವೆ. ಮಹಾ ಮೃತ್ಯುಂಜಯ ಹೋಮದೊಂದಿಗೆ ಪ್ರಾರಂಭವಾಗಲಿರುವ ಈ ಉತ್ಸವದಲ್ಲಿ ಸಾಮೂಹಿಕ ಪ್ರಾರ್ಥನೆ, ಮುಷ್ಠಿಕಾಣಿಕೆ ಸಮರ್ಪಣೆ, ಬೊಬ್ಬರ್ಯ ಗುಡಿಯ ಸಂಕೋಚ, ಅನ್ನಸಂತರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಈ ಮಹತ್ವದ ಕಾರ್ಯಕ್ರಮಗಳನ್ನು ಭಕ್ತಾದಿಗಳ ತನು-ಮನ-ಧನ ಸಹಕಾರದೊಂದಿಗೆ ಯಶಸ್ವಿಯಾಗಿ ನಡೆಸಲು ದೇವಳದ ವ್ಯವಸ್ಥಾಪನಾ ಸಮಿತಿ ಸಂಕಲ್ಪ ಮಾಡಿದ್ದು, ಭಕ್ತರಿಗೆ ದೇವರ ಸೇವೆಯಲ್ಲಿ ಪಾಲ್ಗೊಳ್ಳುವಂತೆ ಕೋರಿದೆ.

ನಗದು ರೂಪದ ದೇಣಿಗೆಗಳನ್ನು ದೇವಳದ ಸೇವಾ ಕಚೇರಿಗೆ ನೀಡಿ ರಶೀದಿ ಪಡೆಯಬಹುದಾಗಿದೆ. ವಸ್ತು ರೂಪದ ದೇಣಿಗೆಗಳನ್ನು ನೀಡುವವರು ಜೂನ್ 5ರಂದು ಬೆಳಿಗ್ಗೆ 9 ಗಂಟೆಯೊಳಗೆ ಕಚೇರಿಗೆ ತಲುಪಿಸುವಂತೆ ವಿನಂತಿಸಲಾಗಿದೆ.

ಆನ್ಲೈನ್ ಮೂಲಕ ದೇಣಿಗೆ ಪಾವತಿಸಲು ಈ ವೆಬ್ ಲಿಂಕ್‌ ಅನ್ನು ಉಪಯೋಗಿಸಬಹುದು:
🔗 https://www.perdoorshriananthapadmanabhatemple.org/e-annadhana-kanike

ಆನ್ಲೈನ್ ಪಾವತಿ ಮಾಡಿದ ಭಕ್ತರ ಹೆಸರುಗಳನ್ನು ದೇವಳದ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಭಕ್ತರು ಇದರ ಸದುಪಯೋಗ ಪಡೆದು ಕೊಳ್ಳಬೇಕೆಂದು ವ್ಯವಸ್ಥಾಪನ ಸಮಿತಿ – ಶ್ರೀ ಅನಂತಪದ್ಮನಾಭ ದೇವಸ್ಥಾನ ಪೆರ್ಡೂರು ವಿನಂತಿಸಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಹಿರ್ಗಾನದಲ್ಲಿ ಸಂಭ್ರಮದ ವರಮಹಾಲಕ್ಷ್ಮಿ ಪೂಜೆ

ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ, ಹಿರ್ಗಾನ ಇವರ ವತಿಯಿಂದ 14ನೇ ವರ್ಷದ ಸಾರ್ವಜನಿಕ ವರಮಹಾಲಕ್ಷ್ಮಿ ಪೂಜೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ರಂಗಭೂಮಿ ಕಲಾವಿದ ಪೆರ್ಡೂರು ಪ್ರಭಾಕರ ಕಲ್ಯಾಣಿ ಇನ್ನಿಲ್ಲ

ರಂಗಭೂಮಿ, ಕಿರುತೆರೆ ಮತ್ತು ಚಲನಚಿತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪೆರ್ಡೂರು ಪ್ರಭಾಕರ ಕಲ್ಯಾಣಿ (65) ಅವರು ಇಂದು ನಿಧನರಾಗಿದ್ದಾರೆ.

ಪರಶುರಾಮ ಹಿತರಕ್ಷಣಾ ವೇದಿಕೆಯೋ ಅಥವಾ ಉದಯ ಶೆಟ್ಟಿ ರಕ್ಷಣಾ ವೇದಿಕೆಯೋ? – ಸಚ್ಚಿದಾನಂದ ಶೆಟ್ಟಿ ಪ್ರಶ್ನೆ

ಪರಶುರಾಮ ಹಿತರಕ್ಷಣಾ ಸಮಿತಿಯೋ ಅಥವಾ ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಮುನಿಯಾಲು ರಕ್ಷಣಾ ವೇದಿಕೆಯೋ ಎಂದು ಬೈಲೂರಿನ ಪರಶುರಾಮ ಥೀಂ ಪಾರ್ಕ್ ಜನಜಾಗೃತಿ ಸಮಿತಿಯ ಸಚ್ಚಿದನಾಂದ ಶೆಟ್ಟಿ ಪ್ರಶ್ನಿಸಿದ್ದಾರೆ.

ಧರ್ಮಸ್ಥಳದ ವಿರುದ್ಧ ಅಪಪ್ರಚಾರಕ್ಕೆ ಕಠಿಣ ಕ್ರಮಕ್ಕೆ ಭಕ್ತರ ಒತ್ತಾಯ; ಗಿರೀಶ್ ಮಟ್ಟೆನ್ನವರ, ಮಹೇಶ್ ಶೆಟ್ಟಿ ತಿಮರೋಡಿ, ಜಯಂತ ಟಿ. ವಿರುದ್ಧ ಭಕ್ತಾಭಿಮಾನಿಗಳ ಬಳಗದಿಂದ ಉಡುಪಿ ಜಿಲ್ಲಾಧಿಕಾರಿಗೆ ದೂರು

ಶ್ರೀ ಧರ್ಮಸ್ಥಳ ಭಕ್ತಾಭಿಮಾನಿಗಳ ಬಳಗ ಉಡುಪಿಯವರು, ಅನಾಮಿಕ ವ್ಯಕ್ತಿಯನ್ನು ಬಳಸಿಕೊಂಡು ಗಿರೀಶ್ ಮಟ್ಟೆನ್ನವರ, ಮಹೇಶ ಶೆಟ್ಟಿ ತಿಮರೋಡಿ ಹಾಗೂ ಜಯಂತ ಟಿ. ಇವರು ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇವಾಲಯದ ಹೆಸರಿಗೆ ಕಳಂಕ ತರುತ್ತಿರುವ ನಿಟ್ಟಿನಲ್ಲಿ ಇವರ ಒಳಸಂಚಿನ ವಿರುದ್ಧ ಸೂಕ್ತ ತನಿಖೆಯನ್ನು ಕೈಗೊಳ್ಳಬೇಕೆಂದು ಉಡುಪಿ ಜಿಲ್ಲಾಧಿಕಾರಿಗಳಲ್ಲಿ ದೂರು ನೀಡಿದ್ದಾರೆ.