
ಪ್ರೀತಿಗಾಗಿ ಎಲ್ಲವನ್ನೂ ತ್ಯಾಗ ಮಾಡಬಹುದು ಎಂಬ ಮಾತಿಗೆ ಸಾಕ್ಷಿಯಂತಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಯುವಕನೊಬ್ಬ ತನ್ನ ಗೆಳತಿಯ ಐಫೋನ್ ಬೇಡಿಕೆಗೆ ತನ್ನ ಕಿಡ್ನಿಯನ್ನೇ ಮಾರಿದ್ದಾನೆ.
ದೆಹಲಿಯ ಈ ಯುವಕನ ಗೆಳತಿ, “ನನಗೆ ಐಫೋನ್ ಬೇಕು” ಎಂದು ಕೇಳಿದ್ದಳು. ಹಣದ ಕೊರತೆಯಿಂದ ಬಳಲುತ್ತಿದ್ದ ಯುವಕ, ಐಫೋನ್ 16 ಪ್ರೊ ಖರೀದಿಸಲು ತನ್ನ ಒಂದು ಕಿಡ್ನಿಯನ್ನು ಮಾರಾಟ ಮಾಡುವ ನಿರ್ಧಾರಕ್ಕೆ ಬಂದಿದ್ದಾನೆ. ಶಸ್ತ್ರಚಿಕಿತ್ಸೆಯ ಮೂಲಕ ಕಿಡ್ನಿ ಮಾರಾಟ ಮಾಡಿದ ಬಳಿಕ, ಆ ಹಣದಿಂದ ಐಫೋನ್ ಖರೀದಿಸಿ ಗೆಳತಿಗೆ ಉಡುಗೊರೆ ನೀಡಿದ್ದಾನೆ.
ಈ ಘಟನೆಗೆ ಸಂಬಂಧಿಸಿದ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೆಟ್ರೋ ನಿಲ್ದಾಣದ ಬಳಿ ಯುವಕ ನಡೆದುಕೊಂಡು ಹೋಗುತ್ತಿರುವ ದೃಶ್ಯವನ್ನು ಆತನ ಸ್ನೇಹಿತರೊಬ್ಬರು ಚಿತ್ರೀಕರಿಸಿ ಹಂಚಿದ್ದಾರೆ. ವಿಡಿಯೋದಲ್ಲಿ ಯುವಕ ನಗುತ್ತಿರುವುದನ್ನೂ ಕಾಣಬಹುದು. ಆದರೆ ಆ ನಗುವಿನ ಹಿಂದಿರುವ ನೋವು ಮತ್ತು ತ್ಯಾಗ ಜನರನ್ನು ವಿಸ್ಮಯಕ್ಕೆ ಗುರಿಮಾಡಿದೆ.
ಈ ಘಟನೆಯಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆ ಎದ್ದಿದ್ದು, ಕೆಲವರು ಯುವಕನ ಪ್ರೀತಿಯನ್ನು ಶ್ಲಾಘಿಸುತ್ತಿದ್ದಾರೆ. ಇನ್ನು ಕೆಲವರು, ಇಂತಹ ನಿರ್ಧಾರಗಳು ಆರೋಗ್ಯ ಮತ್ತು ಜೀವನದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತವೆ ಎಂಬ ಎಚ್ಚರಿಕೆಯನ್ನು ವ್ಯಕ್ತಪಡಿಸುತ್ತಿದ್ದಾರೆ.