
ಆಗುಂಬೆ: ಆಗುಂಬೆ ಘಾಟಿಯ 12ನೇ ತಿರುವಿನಲ್ಲಿ ಕಲ್ಲಂಗಡಿ ತುಂಬಿದ್ದ ಲಾರಿಯೊಂದು ಮಗುಚಿ ಬಿದ್ದಿದೆ. ಮಾಹಿತಿ ಪ್ರಕಾರ, ಉಡುಪಿಯ ಕಡೆಗೆ ಇಳಿಯುತ್ತಿದ್ದಾಗ ಲಾರಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಅಪಘಾತದಿಂದ ಲಾರಿಯಲ್ಲಿ ತುಂಬಿದ್ದ ಕಲ್ಲಂಗಡಿ ಚೀಲಗಳು ರಸ್ತೆಗೆ ಉರುಳಿದ್ದು, ಸಾವಿರಾರು ರೂಪಾಯಿ ಮೌಲ್ಯದ ಹಣ್ಣುಗಳು ನಷ್ಟವಾಗಿವೆ. ಘಟನೆಯ ಬಳಿಕ ಆಗುಂಬೆ ಪರಿಸರದ ಕೋತಿಗಳು ಈ ಹಣ್ಣುಗಳ ಮೇಲೆ ಮುಗಿಬಿದ್ದಿವೆ.