
ಉಡುಪಿ: ಸಮಾಜಮುಖಿ ಕಾರ್ಯಗಳಲ್ಲಿ ನಿರತವಾಗಿರುವ ಲಯನ್ಸ್ ಕ್ಲಬ್, ನೀರೆ ಬೈಲೂರು (Zone 1, Region IV, Dist 317 C) ಇವರು ಆಯೋಜಿಸಿರುವ ಸಾಮಾಜಿಕ ಸೇವಾ ಚಟುವಟಿಕೆಯ ಸಹಾಯಾರ್ಥವಾಗಿ, ಚೈತನ್ಯ ಕಲಾವಿದರು, ಬೈಲೂರು ತಂಡವು ತಮ್ಮ ಈ ವರ್ಷದ ನೂತನ ಹಾಸ್ಯಮಯ ನಾಟಕ ‘ರಾಘು ಮಾಸ್ಟ್ರು’ ವಿನ ಪ್ರಥಮ ಪ್ರದರ್ಶನವನ್ನು ನೀಡಲು ಸಿದ್ಧತೆ ನಡೆಸಿದೆ.
ಖ್ಯಾತ ನಾಟಕಕಾರ ಪ್ರಸನ್ನ ಶೆಟ್ಟಿ ಬೈಲೂರು ಅವರು ಕಥೆ, ಸಂಭಾಷಣೆ ಮತ್ತು ನಿರ್ದೇಶನವನ್ನು ನೀಡಿರುವ ಈ ಹಾಸ್ಯ ನಾಟಕದ VIP ಪ್ರಥಮ ಪ್ರದರ್ಶನವು ಅಕ್ಟೋಬರ್ 18, 2025, ಶನಿವಾರದಂದು ಸಂಜೆ 5:30ಕ್ಕೆ ಕುಂಜಿಬೆಟ್ಟು, ಉಡುಪಿಯ ಯಕ್ಷಗಾನ ಕಲಾರಂಗ (IYC) ದಲ್ಲಿ ನಡೆಯಲಿದೆ.
ಲಯನ್ಸ್ ಕ್ಲಬ್, ನೀರೆ ಬೈಲೂರು ಘಟಕದ ಅಧ್ಯಕ್ಷರಾದ ಪ್ರಶಾಂತ್ ಕುಮಾರ್ ಶೆಟ್ಟಿ ಗುತ್ತುಮನೆ, ಬೈಲೂರು ಹಾಗೂ ಸರ್ವ ಸದಸ್ಯರು ಕಲಾಭಿಮಾನಿಗಳಿಗೆ ಈ ಕಾರ್ಯಕ್ರಮಕ್ಕೆ ಆದರದ ಸ್ವಾಗತ ಕೋರಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಸಾಮಾಜಿಕ ಸೇವಾ ಕಾರ್ಯಕ್ಕೆ ನೆರವಾಗಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ನಿಮ್ಮ ಆಸನಗಳನ್ನು ಕಾಯ್ದಿರಿಸಲು ಆಸಕ್ತರು ಈ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬಹುದು:
ಸಂಪರ್ಕ ಸಂಖ್ಯೆಗಳು: 8105825346, 9880657904.