ಕೋಲ್ಕತ್ತಾದಲ್ಲಿ ಮೆಸ್ಸಿ ದರ್ಶನಕ್ಕೆ ದಾಂಧಲೆ: ಕೇವಲ 10 ನಿಮಿಷಕ್ಕೆ ದಿಗ್ಗಜ ನಿರ್ಗಮನ

Date:

spot_img

ಕೋಲ್ಕತ್ತಾ: ಫುಟ್‌ಬಾಲ್ ಕ್ರೇಜ್‌ಗೆ ಹೆಸರುವಾಸಿಯಾದ ಕೋಲ್ಕತ್ತಾ, ಕಾಲ್ಚೆಂಡು ಆಟದ ದಿಗ್ಗಜ ಲಿಯೋನೆಲ್‌ ಮೆಸ್ಸಿ ಅವರನ್ನು ಕಾಣಲು ಸಜ್ಜಾಗಿತ್ತು. ಆದರೆ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಬೇಕಿದ್ದ ಸಾಲ್ಟ್‌ ಲೇಕ್‌ ಸ್ಟೇಡಿಯಂ ಅಸ್ತವ್ಯಸ್ತದ ತಾಣವಾಯಿತು. ನೆಚ್ಚಿನ ಆಟಗಾರನನ್ನು ಕಾಣಬೇಕು ಎಂದು ₹5,000 ರಿಂದ ₹25,000 ವರೆಗಿನ ಭಾರಿ ಮೊತ್ತ ಪಾವತಿಸಿ ಟಿಕೆಟ್‌ ಖರೀದಿಸಿದ್ದ ಅಭಿಮಾನಿಗಳು ಹತಾಶರಾಗಿ ಕ್ರೀಡಾಂಗಣವನ್ನು ರಣರಂಗ ಮಾಡಿದ್ದಾರೆ.

ಕೋಲ್ಕತ್ತಾದ ವಿವೇಕಾನಂದ ಯುವಭಾರತಿ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಅಭಿಮಾನಿಗಳು ಹತಾಶೆಯಿಂದ ಬಾಟಲಿಗಳನ್ನು ಎಸೆದು ಹೋರ್ಡಿಂಗ್‌ಗಳನ್ನು ಹಾನಿಗೊಳಿಸಿದ್ದಾರೆ.

ಕೇವಲ 10 ನಿಮಿಷಗಳಲ್ಲೇ ನಿರ್ಗಮನ

ಬೆಳಿಗ್ಗೆ 11:15 ಕ್ಕೆ ಸ್ಥಳಕ್ಕೆ ಆಗಮಿಸಿದ ಮೆಸ್ಸಿ ಅವರು ಕ್ರೀಡಾಂಗಣದ ಪೂರ್ಣ ಸುತ್ತು ಹಾಕುವುದಕ್ಕೂ ಮುನ್ನ ನಿರ್ಗಮಿಸಿದರು. ಮೆಸ್ಸಿ ಅವರು ಹತ್ತು ನಿಮಿಷಗಳ ಕಾಲವೂ ಮೈದಾನದಲ್ಲಿ ಇರಲಿಲ್ಲ ಎಂದು ವರದಿಯಾಗಿದೆ. ಮೆಸ್ಸಿ ಮೈದಾನದ ಟನೆಲ್‌ನಿಂದ ಹೊರಬಂದ ಕೆಲವೇ ಕ್ಷಣಗಳಲ್ಲಿ ಪರಿಸ್ಥಿತಿ ನಿಯಂತ್ರಣ ತಪ್ಪಿತು.

ಗೊಂದಲದ ನಡುವೆ, ವಿಶೇಷ ಕಾರ್ಯಕ್ರಮಕ್ಕಾಗಿ ಕೋಲ್ಕತ್ತಾಗೆ ಆಗಮಿಸಿದ್ದ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್, ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ ಮತ್ತು ಕಾರ್ಯಕ್ರಮವನ್ನು ಮೊಟಕುಗೊಳಿಸಲಾಯಿತು.

G.O.A.T. ಟೂರ್‌ನ ಆಯೋಜಕ ಶತದ್ರು ದತ್ತ ಮತ್ತು ಭದ್ರತಾ ಸಿಬ್ಬಂದಿ ಲಿಯೋನೆಲ್ ಮೆಸ್ಸಿ‌ ಅವರನ್ನು ಕೂಡಲೇ ಸಾಲ್ಟ್ ಲೇಕ್ ಕ್ರೀಡಾಂಗಣದಿಂದ ಹೊರಗೆ ಕರೆದೊಯ್ಯಬೇಕಾಯಿತು. ಇದರಿಂದ ಕೋಪಗೊಂಡ ಅಭಿಮಾನಿಗಳು ಆಟದ ಪ್ರದೇಶಕ್ಕೆ ಬಾಟಲಿಗಳು ಮತ್ತು ಕುರ್ಚಿಗಳನ್ನು ಎಸೆದರು. ಹಲವಾರು ಅಭಿಮಾನಿಗಳು ಮೈದಾನಕ್ಕೆ ನುಗ್ಗಿ ಕಾರ್ಯಕ್ರಮಕ್ಕಾಗಿ ಮಾಡಿದ್ದ ಕ್ಯಾನೊಪಿಗಳನ್ನು ಧ್ವಂಸಗೊಳಿಸಿದರು.

ಅಭಿಮಾನಿಗಳ ಆಕ್ರೋಶ

ಮೆಸ್ಸಿಯ ಭೇಟಿಯಲ್ಲಿ ಸೆಲೆಬ್ರಿಟಿಗಳ ಸಂವಹನವೇ ಹೆಚ್ಚಾಗಿದ್ದು, ಅಭಿಮಾನಿಗಳನ್ನು ಬದಿಗಿಟ್ಟಿದ್ದಾರೆ ಎಂದು ಆರೋಪಿಸಿ ಒಂದು ವರ್ಗದ ಅಭಿಮಾನಿಗಳು ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿತು.

“ಮೆಸ್ಸಿ ಸುತ್ತಲೂ ನಾಯಕರು ಮತ್ತು ನಟರು ಮಾತ್ರ ಇದ್ದರು. ಹೀಗಿದ್ದಲ್ಲಿ ನಮ್ಮನ್ನು ಯಾಕೆ ಕರೆದರು? ನಾವು 12 ಸಾವಿರ ರೂ. ನೀಡಿ ಟಿಕೆಟ್‌ ಖರೀದಿ ಮಾಡಿದ್ದೆವು. ಆದರೆ ನಮಗೆ ಅವರ ಮುಖ ನೋಡಲು ಕೂಡ ಸಾಧ್ಯವಾಗಲಿಲ್ಲ…” ಎಂದು ಸಾಲ್ಟ್ ಲೇಕ್ ಕ್ರೀಡಾಂಗಣದಿಂದ ಹೊರಬಂದ ನಂತರ ಅಭಿಮಾನಿಯೊಬ್ಬರು ಬೇಸರದಲ್ಲಿ ಹೇಳಿದರು. ಅನೇಕರು ಇದು ವಂಚನೆ ಎಂದು ಕರೆದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಭಾರತೀಯ ಗೇಮಿಂಗ್ ಪ್ರಿಯರಿಗೆ ಶುಭಸುದ್ದಿ: ಮಾರುಕಟ್ಟೆಗೆ ಲಗ್ಗೆ ಇಟ್ಟ ಡೆಲ್‌ನ ಶಕ್ತಿಶಾಲಿ ಏಲಿಯನ್‌ವೇರ್ ಲ್ಯಾಪ್‌ಟಾಪ್‌ಗಳು

ಡೆಲ್ ಭಾರತದಲ್ಲಿ ಹೊಸ ಏಲಿಯನ್‌ವೇರ್ ಗೇಮಿಂಗ್ ಲ್ಯಾಪ್‌ಟಾಪ್‌ಗಳನ್ನು ಬಿಡುಗಡೆ ಮಾಡಿದೆ. ನೂತನ ಬೆಲೆ, ಡಿಸ್ಪ್ಲೇ ಮತ್ತು ಪ್ರೊಸೆಸರ್ ವೈಶಿಷ್ಟ್ಯಗಳ ವಿವರ ಇಲ್ಲಿದೆ.

ದಿನ ವಿಶೇಷ – ರಾಷ್ಟ್ರೀಯ ಧ್ವಜ ದತ್ತು ದಿನ

ಪ್ರತಿ ವರ್ಷ ಜುಲೈ 22 ರಂದು ಭಾರತದ ರಾಷ್ಟ್ರೀಯ ಧ್ವಜ ದತ್ತು ದಿನವನ್ನು ಆಚರಿಸಲಾಗುತ್ತದೆ. ತಿರಂಗಾ ಧ್ವಜದ ಇತಿಹಾಸ, ವಿನ್ಯಾಸ ಮತ್ತು ಮಹತ್ವದ ಸಂಪೂರ್ಣ ವಿವರ ಇಲ್ಲಿದೆ.

ಸೂಪರ್‌ಫುಡ್ ಪೀಚ್: ಪ್ರತಿದಿನ ಈ ಒಂದು ಹಣ್ಣು ತಿಂದರೆ ಹೃದಯ, ಕಣ್ಣುಗಳಿಗೆ ಎಷ್ಟು ಲಾಭ ಗೊತ್ತಾ?

ನಿತ್ಯ ಪೀಚ್ ಹಣ್ಣು ಸೇವಿಸುವುದರಿಂದ ಲಭಿಸುವ ಆರೋಗ್ಯಕಾರಿ ಲಾಭಗಳು, ರೋಗನಿರೋಧಕ ಶಕ್ತಿ, ಹೃದಯದ ಭದ್ರತೆ ಹಾಗೂ ಕಣ್ಣಿನ ದೃಷ್ಟಿ ಹೆಚ್ಚಿಸುವ ವಿವರ ಇಲ್ಲಿದೆ.

ತುಳುವ ಮಹಾಸಭೆ ಉಡುಪಿ ಅಧ್ಯಕ್ಷರಾಗಿ ಉದಯ ಕುಮಾರ್ ಹೆಗ್ಡೆ ಆಯ್ಕೆ

ತುಳುವ ಮಹಾಸಭೆ ಇಂಟರ್ನ್ಯಾಷನಲ್ ಉಡುಪಿ ಜಿಲ್ಲಾ ಅಧ್ಯಕ್ಷರಾಗಿ ಯರ್ಲಪಾಡಿ ಉದಯ ಕುಮಾರ್ ಹೆಗ್ಡೆ ಆಯ್ಕೆಯಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ