ಶ್ರೀ ಅಖಿಲ ಹವ್ಯಕ ಮಹಾ ಸಭೆಯು ತನ್ನ 81 ಸಂವತ್ಸರ ಪೂರೈಸಿದ ಹಿನ್ನೆಲೆಯಲ್ಲಿ ಕೊಡಬಯಸುವ “ಹವ್ಯಕ ಸ್ಪೂರ್ತಿ ರತ್ನ” ಪ್ರಶಸ್ತಿಗೆ ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಲಯನ್ ನೀಲಕಂಠ ಎಮ್. ಹೆಗಡೆ ಆಯ್ಕೆಯಾಗಿರುತ್ತಾರೆ.
ಇವರು ಕಳೆದ 25 ವರ್ಷಗಳಿಂದ ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆಯ ಸದಸ್ಯರಾಗಿ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿ ಲಯನ್ಸ್ ಜಿಲ್ಲೆಯ ಗವರ್ನರ್ ಆಗಿ ಗಮನಾರ್ಹ ಸಮಾಜ ಸೇವೆ ಸಲ್ಲಿಸಿರುತ್ತಾರೆ. ವಿಶೇಷವಾಗಿ ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ಜಿಲ್ಲಾ ಗವರ್ನರ್ ಆಗಿ ಸಲ್ಲಿಸಿದ ಸೇವೆ ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆಯಲ್ಲಿ ವಿಶೇಷ ಪ್ರಶಂಸೆಗಳಿಸಿತ್ತು. ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆಯ ತರಬೇತುದಾರರಾಗಿ ಸಹ ಸೇವೆ ಸಲ್ಲಿಸುತ್ತಿದ್ದಾರೆ.
ಡಿಸೆಂಬರ್ 29ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಹವ್ಯಕ ವಿಶ್ವ ಸಮ್ಮೇಳನದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುವುದು.