
ಉಡುಪಿ: ಮಾತಾಮರಿಯ ಮಹಾಸಂಘ/ ಸ್ತ್ರೀ ಸಂಘಟನೆ, ಕಣಜಾರು ಇವರ ಆಶ್ರಯದಲ್ಲಿ “ಲಿಂಗ ಸಮನತಾ” ತರಬೇತಿ ಕಾರ್ಯಕ್ರಮ ಇದೇ ಜುಲೈ 8 ರಂದು ಕಣಜಾರು ಸೌಹಾರ್ದಭವನಾದಲ್ಲಿ ಆಯೋಜಿಸಲಾಗಿತ್ತು. ಸಂಪಲ್ಮೂಲ ವ್ಯಕ್ತಿಯಾಗಿ ಉಡುಪಿ ಸಂಪದ ಸಂಸ್ಥೆಯ ಸಂಯೊಜಕರಾದ ಶ್ರೀಯುತ ಸ್ಟ್ಯಾನ್ಲಿ ಪೆರ್ನಾಂಡಿಸ್ ರವರು ಹಾಜರಿದ್ದರು. ಕಾರ್ಯಕ್ರಮದ ಸಭಾದ್ಯಕ್ಷ ಸ್ಥಾನವನ್ನು ಕಣಜಾರು ಲೂರ್ಡ್ಸ್ ಮಾತೆ ದೇವಲಯದ ಧರ್ಮ ಗುರುಗಳಾದ ರೆ| ಪಾ| ಹೆರಾಲ್ಡ್ ಪಿರೇರಾರವರು ವಹಿಸಿದ್ದರು. ಮಾತಾಮರಿಯ ಮಹಾಸಂಘದ ಅದ್ಯಕ್ಷೆ ಶ್ರೀಮತಿ ವಿಲ್ಮಾ ಮಿರಾಂದಾ ಹಾಜರಾದ ಎಲ್ಲರನ್ನೂ ಸ್ವಾಗತಿಸಿದರು, ಕಾರ್ಯಕ್ರಮದಲ್ಲಿ ಚೇತನ ಪುರುಷರ ಮಹಾಸಂಘದ ಅದ್ಯಕ್ಷ ಶ್ರೀಯುತ ಸಂದೀಪ್ ಕಸ್ತಲೀನೋ. ಪ್ರಿಯಾ ಕ್ವಾಡ್ರಾಸ್ (ಕಾರ್ಯಕರ್ತೆ ಸಂಪದ), ಆ್ಯಂಟನಿ ಮಿರಾಂದಾ ಹಾಗೂ ಪ್ರಿಯಾ ಡಿಸೊಜಾ (ಲಿಂಗ ಸಮನತಾ ಪ್ರೆರಣ ತಂಡ, ಉಡುಪಿ) ಪಾಲನಾ ಮಂಡಳಿಯ ಪದಾಧಿಕಾರಿಗಳಾದ ಸ್ಟಾನಿ ಸಲ್ಡಾಹ್ನಾ, ಅನಿತಾ ಕ್ವಾಡ್ರಸ್, ಮೇಬಲ್ ನಜ್ರೆತ್, ಮಹಾಸಂಘದ ಕಾರ್ಯದರ್ಶಿ ಟ್ರೇಸಿ ಮಿರಾಂದಾ ಹಾಜರಿದ್ದರು. ಕಾರ್ಯಕ್ರಮದ ಪ್ರಸ್ತಾವನೆಯನ್ನು ಶ್ರೀಮತಿ ಆನಿತಾ ನಜ್ರೆತ್ ಹಾಗೂ ನಿರೂಪಣೆಯನ್ನು ಶ್ರೀಮತಿ ಜಾನೆಟ್ ಮಿನೇಜಸ್ ಮಾಡಿದರು. ಶ್ರೀಮತಿ ಡೈನಾ ಸಲ್ಡಾಹ್ನಾ ಕೋಶಾಧಿಕಾರಿ ದನ್ಯವಾದ ಮಾಡಿದರು. ಸರಿ ಸುಮಾರು 90 ಮಂದಿ ಭಾಗಿಯಾಗಿದ್ದರು.



